ಕರ್ನಾಟಕದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆ ವಿರೋಧಿಸಲು ವಿಪಕ್ಷ ಬಿಜೆಪಿ ಪ್ಲಾನ್
ದೇಶದಲ್ಲೇ ಮೊದಲ ಬಾರಿ ಬಿಹಾರ ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆಯ ವರದಿ ಬಹಿರಂಗ ಪಡಿಸಲಾಗಿದೆ. ಇದರ ಬೆನ್ನಲ್ಲೇ, ಕರ್ನಾಟಕದ ಜಾತಿಗಣತಿಯ ವರದಿಯನ್ನೂ ಬಿಡುಗಡೆ ಮಾಡುವಂತೆ ಕೂಗು ಕೇಳಿಬರುತ್ತಿದ್ದು, ರಾಜ್ಯ ಸರ್ಕಾರ ಇದಕ್ಕೆ ತಯಾರಿ ಕೂಡ ನಡೆಸುತ್ತಿದೆ. ಆದರೆ ವಿಪಕ್ಷ ಬಿಜೆಪಿ ವರದಿ ಬಿಡುಗಡೆ ವಿರೋಧಿಸಲು ಪ್ಲಾನ್ ಮಾಡುತ್ತಿದೆ.
ಬೆಂಗಳೂರು, ಅ.7: ಬಿಹಾರ ಸರ್ಕಾರವು ದೇಶದಲ್ಲಿ ಮೊದಲ ಬಾರಿ ಜಾತಿ ಗಣತಿ ಸಮೀಕ್ಷೆಯ ವರದಿ ಬಹಿರಂಗ ಪಡಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಜಾತಿ ಗಣತಿ ವರದಿ (Caste Census Report) ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಆದರೆ, ಇದನ್ನು ವಿಪಕ್ಷ ಬಿಜೆಪಿ (BJP) ವಿರೋಧಿಸಲು ಪ್ಲಾನ್ ಮಾಡಿಕೊಳ್ಳುತ್ತಿದ್ದು, ವರದಿ ಬಿಡುಗಡೆ ವಿರೋಧಿಸುವುದಕ್ಕೆ ಇರುವ ಕಾರಣಗಳ ಬಗ್ಗೆ ಚರ್ಚೆಯೂ ನಡೆಸುತ್ತಿದೆ.
ಈಗಿನ ವರದಿ ಪ್ರಕಾರ ಹಿಂದುಳಿದ ವರ್ಗ, ಪರಿಷಿಷ್ಟ ಜಾತಿ, ಪರಿಷಿಷ್ಟ ಪಂಗಡ ಜನಸಂಖ್ಯೆ ಹೆಚ್ಚಿದೆ. ಲಿಂಗಾಯತ, ಒಕ್ಕಲಿಗರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನಲಾಗಿದೆ. ಹಾಗಿಯೇ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡಲು ಅಧಿಕಾರ ಇಲ್ಲ. ಕೇಂದ್ರ ಸರ್ಕಾರವೇ ಜಾತಿ ಗಣತಿಯನ್ನು ಮಾಡಬೇಕು.
ಇದನ್ನೂ ಓದಿ: ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಜಾತಿಗಣತಿ ವರದಿ: ಬಿಜೆಪಿ ನಿಲುವೇನು? ಕಾಂಗ್ರೆಸ್ ಹೇಳುವುದೇನು?
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಜಾತಿಗಣತಿ ಮಾಡಲಾಗಿದೆ. ಆದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಜಾತಿ ಗಣತಿ ಆಗುವುದಿಲ್ಲ. ಇದು ಇನ್ನೂ ನ್ಯಾಯಾಲಯದ ಮುಂದೆ ಬಾಕಿ ಇರುವ ಕಾರಣ ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಹೊರಟಿರುವುದು ಅವೈಜ್ಞಾನಿಕ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.
ಅಲ್ಲದೆ, ಇದೇ ಕಾರಣಗಳನ್ನು ಮುಂದಿಟ್ಟುಕೊಂಡು ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ಮಾಡಲು ಬಿಜೆಪಿ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಒಂದು ವೇಳೆ ಸರ್ಕಾರ ವರದಿ ಬಿಡುಗಡೆಗೆ ಮುಂದಾದರೆ ಪ್ರಶ್ನಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ಮಾಜಿ ಸಿಎಂ, ಮಾಜಿ ಸಚಿವರ ನಡುವೆ ಚರ್ಚೆ ನಡೆದಿದ್ದು, ಪಕ್ಷದ ವೇದಿಕೆಯಲ್ಲಿ ಇದನ್ನು ಪ್ರಸ್ತಾಪಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ