ಭಾಷಣ ವೇಳೆ ಯಾರೂ ಅಡ್ಡಿಪಡಿಸಿಲ್ಲ, ಸಮಯದ ಅಭಾವದಿಂದ ಬಂದೆ; ವಿಪಕ್ಷ ನಾಯಕ ಸಿದ್ದರಾಮಯ್ಯ

| Updated By: sandhya thejappa

Updated on: Nov 17, 2021 | 5:11 PM

ಅರಮನೆ ಮೈದಾನದಲ್ಲಿ ನಿನ್ನೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆದಿತ್ತು. ಸಭಾ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು.

ಭಾಷಣ ವೇಳೆ ಯಾರೂ ಅಡ್ಡಿಪಡಿಸಿಲ್ಲ, ಸಮಯದ ಅಭಾವದಿಂದ ಬಂದೆ; ವಿಪಕ್ಷ ನಾಯಕ ಸಿದ್ದರಾಮಯ್ಯ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಅರಮನೆ ಮೈದಾನದಲ್ಲಿ ನಿನ್ನೆ (ನ.16) ನಡೆದಿದ್ದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಬಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನಾನು ಭಾಷಣ ಮಾಡುವುದಿಲ್ಲವೆಂದು ಮೊದಲೇ ಹೇಳಿದ್ದೆ. ನಿನ್ನೆ ಭಾಷಣ ವೇಳೆ ಯಾರೂ ಅಡ್ಡಿಪಡಿಸಿಲ್ಲ. ಸಮಯದ ಅಭಾವದಿಂದ ಕಾರ್ಯಕ್ರಮದಿಂದ ಬಂದುಬಿಟ್ಟೆ ಅಂತ ತಿಳಿಸಿದ್ದಾರೆ.

ಅರಮನೆ ಮೈದಾನದಲ್ಲಿ ನಿನ್ನೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆದಿತ್ತು. ಸಭಾ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಈ ವೇಳೆ ಕೆಲವರು ಡಿಕೆಶಿ, ಡಿಕೆಶಿ ಅಂತ ಮತ್ತು ಜಮೀರ್ ಹೆಸರು ಹೇಳಿ ಘೋಷಣೆ ಕೂಗಿದ್ದಾರೆ. ಹೀಗಾಗಿ ಸಿಟ್ಟಾದ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದಿದ್ದರು.

ಬಳಿಕ ವೇದಿಕೆಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಮಾತನಾಡಬೇಕಾದರೆ ನೀವು ಕೂಗುತ್ತೀರಿ. ನೀವು ಕಾಂಗ್ರೆಸ್ ದ್ರೋಹಿಗಳೆಂದು ಡಿಕೆ ಶಿವಕುಮಾರ್ ಗರಂ ಆದರು.

ಟ್ವೀಟ್​ನಲ್ಲಿ ಕುಟುಕಿದ ಬಿಜೆಪಿ
ಮುಸ್ಲಿಮರು ಒಗ್ಗಟ್ಟಾಗಬೇಕೆಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಆದರೆ ಪಿಸುಮಾತು ಪ್ರಕರಣದಲ್ಲಿ ಸಲೀಂ ಅಮಾನತುಗೊಳಿಸಿ ವಿ.ಎಸ್.ಉಗ್ರಪ್ಪಗೆ ಕೇವಲ ಕಾಂಗ್ರೆಸ್ ನೋಟಿಸ್ ನೀಡಿದೆ. ಅಲ್ಪಸಂಖ್ಯಾತರೇ ಕಾಂಗ್ರೆಸ್ನ ನರಿ ಬುದ್ಧಿ ಬಗ್ಗೆ ಯೋಚಿಸಿ ಎಂದು ಟ್ವೀಟ್ ಮಾಡಿರುವ ಬಿಜೆಪಿ, ಡಿಕೆ ಡಿಕೆ ಎಂಬ ಘೋಷಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ್ದಾರೆ. ಬಣ ರಾಜಕೀಯದ ಮತ್ತೊಂದು ಮುಖ ಅನಾವರಣವಾಗಿದೆ. ಒಡೆದ ಮನೆಯಾಗಿರುವ ಕಾಂಗ್ರೆಸ್​ನಲ್ಲಿ ಇದು ಸಾಮಾನ್ಯವಲ್ಲವೇ? ಅಂತ ಪ್ರಶ್ನಿಸಿದೆ.

ಇದನ್ನೂ ಓದಿ

ಡಿಕೆ ಡಿಕೆ ಎಂದು ಘೋಷಣೆ, ಜಮೀರ್ ಫೋಟೋ ಪ್ರದರ್ಶನ! ಭಾಷಣ ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದ ಸಿದ್ದರಾಮಯ್ಯ

ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿ ನಮ್ಮ ಶಾಸಕರನ್ನು ಸಂಪರ್ಕಿಸಿದ್ದಾರೆ; ನಮ್ಮ ಶಾಸಕರು ನನಗೆ ಎಲ್ಲಾ ತಿಳಿಸಿದ್ದಾರೆ: ಹೆಚ್​ಡಿ ಕುಮಾರಸ್ವಾಮಿ

Published On - 5:10 pm, Wed, 17 November 21