ಕಾಂಗ್ರೆಸ್​ನ ಮಾಜಿ ಮುಖ್ಯಮಂತ್ರಿ ನಮ್ಮ ಶಾಸಕರನ್ನು ಸಂಪರ್ಕಿಸಿದ್ದಾರೆ; ನಮ್ಮ ಶಾಸಕರು ನನಗೆ ಎಲ್ಲಾ ತಿಳಿಸಿದ್ದಾರೆ: ಹೆಚ್​ಡಿ ಕುಮಾರಸ್ವಾಮಿ

TV9 Digital Desk

| Edited By: ganapathi bhat

Updated on:Nov 17, 2021 | 4:51 PM

HD Kumaraswamy: ನಮ್ಮ ಶಾಸಕರು ನನಗೆ ಕರೆ ಮಾಡಿ ಎಲ್ಲವನ್ನೂ ತಿಳಿಸಿದ್ದಾರೆ. ಜೆಡಿಎಸ್​ ಮುಗಿದುಹೋಯ್ತು, ಭವಿಷ್ಯ ಇಲ್ಲವೆಂದು ಹೇಳಿದ್ದಾರೆ. ಈ ರೀತಿ ಹೇಳಿ ಜೆಡಿಎಸ್ ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕಾಂಗ್ರೆಸ್​ನ ಮಾಜಿ ಮುಖ್ಯಮಂತ್ರಿ ನಮ್ಮ ಶಾಸಕರನ್ನು ಸಂಪರ್ಕಿಸಿದ್ದಾರೆ; ನಮ್ಮ ಶಾಸಕರು ನನಗೆ ಎಲ್ಲಾ ತಿಳಿಸಿದ್ದಾರೆ: ಹೆಚ್​ಡಿ ಕುಮಾರಸ್ವಾಮಿ
ಎಚ್ ​ಡಿ ಕುಮಾರಸ್ವಾಮಿ

ಬೆಂಗಳೂರು: ಜನವರಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಜೆಡಿಎಸ್ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ರಾಜ್ಯದ ಪ್ರತಿ ಜಿಲ್ಲೆ, ತಾಲೂಕಿಗೂ ನಾವು ಹೋಗುತ್ತೇವೆ. ಪಂಚರತ್ನ ಯೋಜನೆ ಜೊತೆ ಜನರ ಮುಂದೆ ಹೋಗುತ್ತೇವೆ. ಪಕ್ಷದ ಕಚೇರಿಯಲ್ಲಿ ಹೆಚ್ಚು ಕಾರ್ಯಕ್ರಮ ಇರುವುದಿಲ್ಲ. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೆವು. ಹೀಗಾಗಿ ಎಲ್ಲ ಮಾಹಿತಿ ಪಡೆದು ಗೆಲುವಿಗೆ ಪ್ರಯತ್ನಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇಂದು (ನವೆಂಬರ್ 17) ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ನಮ್ಮ ಶಾಸಕರನ್ನ ಸಂಪರ್ಕಿಸಿದ್ದಾರೆ. 10 ಬಾರಿ ಸಂಪರ್ಕ ಮಾಡಿ ಕಾಂಗ್ರೆಸ್‌ಗೆ ಬರಲು ಹೇಳಿದ್ದಾರೆ ಎಂದು ಬೆಂಗಳೂರಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಮ್ಮ ಶಾಸಕರು ನನಗೆ ಕರೆ ಮಾಡಿ ಎಲ್ಲವನ್ನೂ ತಿಳಿಸಿದ್ದಾರೆ. ಜೆಡಿಎಸ್​ ಮುಗಿದುಹೋಯ್ತು, ಭವಿಷ್ಯ ಇಲ್ಲವೆಂದು ಹೇಳಿದ್ದಾರೆ. ಈ ರೀತಿ ಹೇಳಿ ಜೆಡಿಎಸ್ ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಅವರು ಯಾವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲ್ಲ. ನಮ್ಮ ಶಾಸಕರ ಬ್ರೈನ್ ವಾಶ್ ಮಾಡುವ ಕೆಲಸ ಮಾಡ್ತಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಶಾಸಕರನ್ನ ಸೆಳೆಯುವ ಕೆಲಸ ಆಗುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ. ಹೋಗುವವರು ಎಲ್ಲಿ ಭವಿಷ್ಯವಿದೆ ಅಲ್ಲಿಗೆ ಹೋಗಬಹುದು. ನಮ್ಮಲ್ಲಿ ಬೆಳೆದು ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಬೇಡ ಎಂದು ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಶಿವಲಿಂಗೇಗೌಡ ವಿರುದ್ಧ ಉಚ್ಛಾಟಿತ ಜೆಡಿಎಸ್ ನಗರಸಭಾ ಸದಸ್ಯರ ವಾಗ್ದಾಳಿ ಹಾಸನ-ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿರುದ್ದ ಉಚ್ಚಾಟಿತ ಜೆಡಿಎಸ್ ನಗರಸಭೆ ಸದಸ್ಯರು ಹೇಳಿಕೆ ನೀಡಿದ್ದಾರೆ. ಶಾಸಕ ಶಿವಲಿಂಗೇಗೌಡರು ದೇವೇಗೌಡರ ಬಳಿ ಕ್ಷಮೆಯಾಚಿಸಬೇಕು ಎಂದು ಕೇಳಿದ್ದಾರೆ. ದೇವೇಗೌಡರ ನೋಡಿ ಜನ ಓಟ್ ಹಾಕಲ್ಲ ಎಂದು ಹೇಳಿ ದೇವೇಗೌಡರಿಗೆ ಶಾಸಕರು ಅವಮಾನ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. ನಾವು ಬಿಜೆಪಿ ಏಜೆಂಟರಲ್ಲ. ನಾವೂ ಈಗಲೂ ಜೆಡಿಎಸ್ ಪಕ್ಷದಲ್ಲಿದ್ದೇವೆ. ಶಿವಲಿಂಗೇಗೌಡರ ನಡವಳಿಕೆಯಿಂದ ಬೇಸತ್ತು ನಗರಸಭೆಯಲ್ಲಿ ಪ್ರತ್ಯೇಕ ಆಸನ ಕೇಳಿದ್ದೇವು ಎಂದು ಶಾಸಕ ಶಿವಲಿಂಗೇಗೌಡ ವಿರುದ್ದ ಬಂಡಾಯವೆದ್ದಿದ್ದ ಆರು ಸದಸ್ಯರು ಹೇಳಿಕೆ ನೀಡಿದ್ದಾರೆ.

ಆರೂ ಸದಸ್ಯರ ಅನರ್ಹತೆಗೊಳಿಸಲು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಜೆಡಿಎಸ್ ಕೇಸ್ ದಾಖಲಿಸಿತ್ತು. ಅರಸೀಕೆರೆ ಕ್ಷೇತ್ರಕ್ಕೆ ರೇವಣ್ಣ, ಪ್ರಜ್ವಲ್ ಬರಲು ಬಿಡುವುದಿಲ್ಲ. ನಾನೇ ಎಲ್ಲಾ ಅನ್ನೋ ಅಹಂ ಶಿವಲಿಂಗೇಗೌಡರದ್ದು ಎಂದು ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್​ನ ಉಚ್ಛಾಟಿತ ಅರಸೀಕೆರೆ ನಗರಸಭೆ ಸದಸ್ಯ ಸಿಕಂದರ್ ಹಾಸನಲ್ಲಿ ಸುದ್ದಿಗೋಷ್ಟಿ ನಡೆಸಿ ಹೇಳಿದ್ದಾರೆ. ನಾವು ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರು. ಶಿವಲಿಂಗೇಗೌಡರ ವಿರುದ್ದ ಮಾತ್ರ ನಮಗೆ ಅಸಮಾಧಾನವಿದೆ. ಜೆಡಿಎಸ್ ಪಕ್ಷದ ಬಗ್ಗೆ ಬೇರೆ ನಾಯಕರ ಬಗ್ಗೆ ಗೌರವವಿದೆ ಎಂದು ಉಚ್ಚಾಟಿತ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ: ಕುಟುಂಬ ಸದಸ್ಯರು ರಾಜಕಾರಣಕ್ಕೆ ಬರಬಾರದು ಎಂದಿದೆಯಾ, ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ದೇವೇಗೌಡರು ಸಿದ್ಧ; ಕುಮಾರಸ್ವಾಮಿ ಹೇಳಿಕೆ

ಇದನ್ನೂ ಓದಿ: ಬಿಟ್​ಕಾಯಿನ್ ಪ್ರಕರಣ ತನಿಖೆ ಬಗ್ಗೆ ಪ್ರಧಾನಿ ಮೋದಿ ಮೇಲೆ ನಂಬಿಕೆ ಇಡೋಣ: ಹೆಚ್​ಡಿ ಕುಮಾರಸ್ವಾಮಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada