ಬಿಟ್​ಕಾಯಿನ್ ಪ್ರಕರಣ ತನಿಖೆ ಬಗ್ಗೆ ಪ್ರಧಾನಿ ಮೋದಿ ಮೇಲೆ ನಂಬಿಕೆ ಇಡೋಣ: ಹೆಚ್​ಡಿ ಕುಮಾರಸ್ವಾಮಿ

ಬಿಟ್​ ಕಾಯಿನ್ ಕೇಸ್ ಬಗ್ಗೆ ನನಗೆ 15 ದಿನ ಟೈಮ್ ಬೇಕು. 15-20 ದಿನ ಟೈಮ್​ ಕೊಟ್ಟರೆ ಮಾಹಿತಿ ಸಂಗ್ರಹಿಸುವೆ. ತನಿಖೆ ನಡೆಸುವ ಬಗ್ಗೆ ಪ್ರಧಾನಿ ಮೇಲೆ ನಂಬಿಕೆ ಇಡೋಣ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಬಿಟ್​ಕಾಯಿನ್ ಪ್ರಕರಣ ತನಿಖೆ ಬಗ್ಗೆ ಪ್ರಧಾನಿ ಮೋದಿ ಮೇಲೆ ನಂಬಿಕೆ ಇಡೋಣ: ಹೆಚ್​ಡಿ ಕುಮಾರಸ್ವಾಮಿ
ಹೆಚ್‌.ಡಿ.ಕುಮಾರಸ್ವಾಮಿ
Follow us
TV9 Web
| Updated By: ganapathi bhat

Updated on:Nov 13, 2021 | 5:00 PM

ಬೆಂಗಳೂರು: ಬಿಟ್​ ಕಾಯಿನ್ ಕೇಸ್ ಬಗ್ಗೆ ರಾಷ್ಟ್ರೀಯ ಪಕ್ಷಗಳಿಂದ ಪರಸ್ಪರ ಆರೋಪ, ಪ್ರತ್ಯಾರೋಪ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. 58 ಸಾವಿರ ಕೋಟಿ ರೂಪಾಯಿ ಹಗರಣ ಎಂಬ ವರದಿ ಇದೆ. ರಾಜ್ಯದ ಆರೋಪಿಯನ್ನು 8-10 ಬಾರಿ ಬಂಧಿಸಿದ್ದಾರೆ. 2020ರ ನವೆಂಬರ್​ನಿಂದ ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ಅಮೆರಿಕಗೆ ತೆರಳಿದ್ದ ವೇಳೆ ಅಮೆರಿಕದ ತನಿಖಾ ಸಂಸ್ಥೆಗಳು ಪ್ರಧಾನಿಗೆ ಮಾಹಿತಿ ನೀಡಿವೆ. ಪ್ರಧಾನಿ ಮೌನವಾಗಿದ್ದಾರೆ ಎಂದರೆ ಮುಚ್ಚಿ ಹಾಕ್ತಾರೆ ಎಂದಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ತನಿಖಾ ಸಂಸ್ಥೆಗಳ ದಿಕ್ಕುತಪ್ಪಿಸದಂತೆ ಕಾಂಗ್ರೆಸ್​ಗೆ ಮನವಿ ಮಾಡಿದ್ದಾರೆ.

ಯಾವುದೇ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ನೀಡಬೇಕು. ಹ್ಯಾಕಿಂಗ್ ಈಗ ಆರಂಭವಾಗಿಲ್ಲ, 2016ರಿಂದಲೇ ಇದೆ. ಯುಬಿ ಸಿಟಿ ಹೋಟೆಲ್​ ಗಲಾಟೆ ವೇಳೆಯೇ ಹೇಳಿದ್ದೆ. ಇದು ಗಲಾಟೆಯಲ್ಲ ಹ್ಯಾಕಿಂಗ್ ಪ್ರಕರಣ ಎಂದು ಹೇಳಿದ್ದೆ. ಪಶ್ಚಿಮಬಂಗಾಳದ ವ್ಯಕ್ತಿಯನ್ನು ಕರೆ ತಂದು ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ಶ್ರೀಕಿ, ಕಾಂಗ್ರೆಸ್ ಮುಖಂಡರ ಮಕ್ಕಳ ಹೆಸರು ಬೆಳಕಿಗೆ ಬಂದಿದೆ. ಪ್ರಧಾನಿ ಅಮೆರಿಕಗೆ ಹೋಗದಿದ್ದರೆ ಇಷ್ಟು ದೊಡ್ಡದಾಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

15 ದಿನ ಕೊಟ್ಟರೆ ನಾನು ಮಾಹಿತಿ ಸಂಗ್ರಹಿಸುವೆ: ಹೆಚ್​ಡಿ ಕುಮಾರಸ್ವಾಮಿ ಬಿಟ್​ ಕಾಯಿನ್ ಕೇಸ್ ಬಗ್ಗೆ ನನಗೆ 15 ದಿನ ಟೈಮ್ ಬೇಕು. ನನ್ನದೇ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದೇನೆ. 15-20 ದಿನ ಟೈಮ್​ ಕೊಟ್ಟರೆ ಮಾಹಿತಿ ಸಂಗ್ರಹಿಸುವೆ. ತನಿಖೆ ನಡೆಸುವ ಬಗ್ಗೆ ಪ್ರಧಾನಿ ಮೇಲೆ ನಂಬಿಕೆ ಇಡೋಣ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್​ನವರದು ಕುಟುಂಬ ರಾಜಕಾರಣ ಎಂದು ಬಿಜೆಪಿ ಟೀಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಶಾಸಕ ಅಪ್ಪಚ್ಚು ರಂಜನ್ ಸಹೋದರ ಪರಿಷತ್ ಸದಸ್ಯ. ಜಗದೀಶ್ ಶೆಟ್ಟರ್ ತಮ್ಮ ಎಂಎಲ್​ಸಿ, ಉದಾಸಿ ಕುಟುಂಬವೂ ಇದೆ. ಹೀಗೆ ಬಿಜೆಪಿಯವರು ಕ್ಷುಲ್ಲಕ ವಿಚಾರ ಮಾತಾಡಬೇಡಿ. ಬಿಜೆಪಿಯವರದ್ದು ಯಾವ ರಾಜಕಾರಣ? ಬಿಜೆಪಿಯವರದ್ದು ಲೂಟಿ ಹೊಡೆಯೋ ರಾಜಕಾರಣನಾ? ಪರ್ಸೆಂಟೇಜ್ ರಾಜಕಾರಣವಾ ಎಂದು ಹೆಚ್​ಡಿಕೆ ಕಿಡಿಕಾರಿದ್ದಾರೆ.

ಅಪ ಮಾರ್ಗದಲ್ಲಿ ಸಂಪಾದಿಸಿದ ದುಡ್ಡಿನಿಂದ ನಮ್ಮ ಶಾಸಕರನ್ನು ಖರೀದಿಸಿದ್ದರಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಆ ಸರ್ಕಾರ ಮಾಡಿದ್ದೀರಲ್ಲ ಅದನ್ನ ಏನೆಂದು ಕರೆಯೋಣ? ಅದಕ್ಕೂ ನೀವೇ ಹೆಸರಿಡಿ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಟೀಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಹೋಟೆಲ್, ಆಲ್ಕೋಹಾಲ್​ಗೆ ದಿನಕ್ಕೆ 3 ಲಕ್ಷ ಖರ್ಚು ಮಾಡುತ್ತಿದ್ದ ಶ್ರೀಕಿಯ ಮೊದಲ ದೊಡ್ಡ ಬಿಟ್​ಕಾಯಿನ್ ಕನ್ನ ನೆದರ್​ಲೆಂಡ್ಸ್​ನಲ್ಲಿ

ಇದನ್ನೂ ಓದಿ: Bitcoin: ಬಿಟ್​ಕಾಯಿನ್ ಹಗರಣ ಎಫೆಕ್ಟ್​ -ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮತ್ತೆ ಮೊಹಮದ್ ನಲಪಾಡ್​ ‘ಕೈ’ಜಾರುವುದೇ?

Published On - 4:58 pm, Sat, 13 November 21