AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HR Suraj Revanna: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಮತ್ತೊಬ್ಬ ಮೊಮ್ಮಗ ರಾಜಕೀಯ ಅಖಾಡಕ್ಕೆ ಎಂಟ್ರಿ ಅಂತಿಮ?

HD Devegowda grandson: ಹೆಚ್​ಡಿ ದೇವೇಗೌಡರ ಕಿರಿಯ ಪುತ್ರ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪುತ್ರ ಸೂರಜ್ ರಾಜಕೀಯಕ್ಕೆ ಎಂಟ್ರಿ ಕೊಡುವುದು ನಿಶ್ಚಿತವಾಗಿದೆ ಎನ್ನಲಾಗಿದೆ. ಹೆಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ ಪ್ರಜ್ವಲ್ ರೇವಣ್ಣ ಪ್ರಸ್ತುತ ಹಾಸನದ ಸಂಸದರಾಗಿದ್ದಾರೆ.

HR Suraj Revanna: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಮತ್ತೊಬ್ಬ ಮೊಮ್ಮಗ ರಾಜಕೀಯ ಅಖಾಡಕ್ಕೆ ಎಂಟ್ರಿ ಅಂತಿಮ?
ಎಚ್​.ಡಿ.ದೇವೇಗೌಡ
TV9 Web
| Updated By: ಸಾಧು ಶ್ರೀನಾಥ್​|

Updated on: Nov 18, 2021 | 9:47 AM

Share

ಹಾಸನ: ರಾಜ್ಯ ರಾಜಕೀಯ ಅಖಾಡಕ್ಕೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಮತ್ತೊಬ್ಬ ಮೊಮ್ಮಗ ಎಂಟ್ರಿ ಆಗುವುದು ಬಹುತೇಕ ಫೈನಲ್​ ಆಗಿದೆ. ದೇವೇಗೌಡರ ಕುಡಿ ಹಾಸನದಿಂದ ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಂಭವವಿದೆ. ಹಾಸನದಿಂದ ಸೂರಜ್ ರೇವಣ್ಣ ಸ್ಪರ್ಧೆ ಬಹುತೇಕ ಖಚಿತವಅಗಿದೆ. ಇನ್ನೆರಡು ದಿನಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯ ಅಧಿಕೃತ ಘೋಷಣೆ ಮಾಡಲಿದೆ. ಇದರೊಂದಿಗೆ ಹೆಚ್​ಡಿ ದೇವೇಗೌಡರ ಕಿರಿಯ ಪುತ್ರ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪುತ್ರ ಸೂರಜ್ ರಾಜಕೀಯಕ್ಕೆ ಎಂಟ್ರಿ ಕೊಡುವುದು ನಿಶ್ಚಿತವಾಗಿದೆ ಎನ್ನಲಾಗಿದೆ. ಹೆಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ ಪ್ರಜ್ವಲ್ ರೇವಣ್ಣ ಪ್ರಸ್ತುತ ಹಾಸನದ ಸಂಸದರಾಗಿದ್ದಾರೆ.

ಈಗಾಗಲೆ ಹಾಸನ ಮುಖಂಡರ ಸಮ್ಮತಿ ಪಡೆದು ಹೆಚ್.ಡಿ.ರೇವಣ್ಣ, ತಮ್ಮ ಕಿರಿಯ ಮಗನನ್ನು ಕಣಕ್ಕೆ ಇಳಿಸುತಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ಪಟೇಲ್ ಶಿವರಾಂ ಸ್ಪರ್ಧಿಸಿ, ಕಾಂಗ್ರೆಸ್‌ ವಿರುದ್ಧ ಸೋತಿದ್ದರು. ಇತ್ತ ಬಿಜೆಪಿ ಕೂಡ ಹಾಸನದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ತಮ್ಮ ಕುಟುಂಬದಿಂದಲೇ ಅಭ್ಯರ್ಥಿ ಕಣಕ್ಕಿಳಿದರೆ ಸೂಕ್ತ ಎಂದು‌ ಸೂರಜ್ ಅವರನ್ನು ಸ್ಪರ್ಧೆಗೊಡ್ಡುವ ಲೆಕ್ಕಾಚಾರ ರೇವಣ್ಣ ಅವರದ್ದಾಗಿದೆ ಎಂದು ತಿಳಿದುಬಂದಿದೆ.

Also Read: ಕುಟುಂಬ ಸದಸ್ಯರು ರಾಜಕಾರಣಕ್ಕೆ ಬರಬಾರದು ಎಂದಿದೆಯಾ, ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ದೇವೇಗೌಡರು ಸಿದ್ಧ; ಕುಮಾರಸ್ವಾಮಿ ಹೇಳಿಕೆ

Also Read: ನಮ್ಮ ಕುಟುಂಬದ ಯಾರೂ ಎಂಎಲ್​ಸಿ ಆಗಿಲ್ಲ; ಎಲ್ಲರ ಸಲಹೆ ಪಡೆದು ಅಭ್ಯರ್ಥಿ ಹೆಸರು ಅಂತಿಮ ಮಾಡೋಣ- ದೇವೇಗೌಡ

(hd devegowda grandson hr suraj revanna may enter politics from hassan for karnataka legislative council elections)