Analysis: ಡಬಲ್ ಎಂಜಿನ್, ಡಬಲ್ ಬಿನಿಫಿಟ್; ಒಂದೇ ಕಲ್ಲಿಗೆ ಎರಡು ಹಕ್ಕಿಯ ಮೇಲೆ ಗುರಿಯಿಟ್ಟ ಮೋದಿ ಮಾತು

PM Narendra Modi: ಯಾದಗಿರಿ ಸಮೀಪದ ಕೊಡೆಕಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ಪದೇಪದೆ ಉಲ್ಲೇಖಿಸಿದ ‘ಡಬಲ್ ಎಂಜಿನ್’ ಪದಗುಚ್ಛದ ಹಿಂದಿರುವ ರಾಜಕಾರಣವನ್ನು ಈ ರೀತಿ ಅರ್ಥೈಸಬಹುದು.

Analysis: ಡಬಲ್ ಎಂಜಿನ್, ಡಬಲ್ ಬಿನಿಫಿಟ್; ಒಂದೇ ಕಲ್ಲಿಗೆ ಎರಡು ಹಕ್ಕಿಯ ಮೇಲೆ ಗುರಿಯಿಟ್ಟ ಮೋದಿ ಮಾತು
ಯಾದಿಗಿರಿ ಜಿಲ್ಲೆ ಕೊಡೆಕಲ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jan 19, 2023 | 2:19 PM

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಬಲವರ್ಧನೆಗೆ ಮತ್ತು ಅಸ್ತಿತ್ವಕ್ಕೆ ಕರ್ನಾಟಕ (Karnataka Politics) ಎಷ್ಟು ಮುಖ್ಯ ಎಂಬುದನ್ನು ಬಿಜೆಪಿ ಹೈಕಮಾಂಡ್​ ಮನಗಂಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಬಿಜೆಪಿಯ ಚುನಾವಣಾ ಕಾರ್ಯತಂತ್ರ ನಿಪುಣ ಅಮಿತ್ ಶಾ (Amit Shah) ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ದುರ್ಬಲವಾಗಿರುವ ಸ್ಥಳಗಳನ್ನೇ ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಇಂದು (ಜ 19) ಪ್ರಧಾನಿ ನರೇಂದ್ರ ಮೋದಿ ಸಮಕ್ಷಮ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಈ ಹಿನ್ನೆಲೆಯಲ್ಲಿಯೇ ನೋಡಬೇಕಿದೆ. ಯಾದಗಿರಿ ಸಮೀಪದ ಕೊಡೆಕಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ಪದೇಪದೆ ಉಲ್ಲೇಖಿಸಿದ ‘ಡಬಲ್ ಎಂಜಿನ್’ ಪದಗುಚ್ಛವನ್ನೂ ಈ ಹಿನ್ನೆಲೆಯಲ್ಲಿಯೇ ಅರ್ಥೈಸಬೇಕಿದೆ.

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಡೆದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹಾಗೂ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾಗಿದ್ದು ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್​ಗೆ ನವಚೇತನ ನೀಡಿದ್ದು ಸುಳ್ಳಲ್ಲ. ತೆಲಂಗಾಣದ ಚಂದ್ರಶೇಖರ್​ ರಾವ್ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡ ನಂತರ ಹೊಸ ಉತ್ಸಾಹದಿಂದ ರಾಜಕಾರಣ ಆರಂಭಿಸಿರುವ ಎಚ್​.ಡಿ.ಕುಮಾರಸ್ವಾಮಿ ಸಹ ಪಂಚರತ್ನ ರಥಯಾತ್ರೆಯ ಮೂಲಕ ಕರ್ನಾಟಕದ ಮೂಲೆಮೂಲೆ ತಲುಪಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್​ಗಳ ಈ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿಯು ಬಿಜೆಪಿ ಜನಸಂಪರ್ಕ ಯಾತ್ರೆ, ಜನೋತ್ಸವ ಸೇರಿದಂತೆ ಹಲವು ರೀತಿಯ ಸಂಪರ್ಕ ಅಭಿಯಾನಗಳನ್ನು ಆರಂಭಿಸಿರುವುದು ನಿಜ. ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪರೋಕ್ಷವಾಗಿ ಒಂದೆರೆಡು ವರ್ಷಗಳ ಹಿಂದೆಯೂ ಘೋಷಿಸಿರುವುದರಿಂದ ಅವರು ಇದೀಗ ಹೊಸ ವೇಗದಲ್ಲಿ ಕಾರ್ಯತತ್ಪರರಾಗಿರುವುದೂ ನಿಜ. ಆದರೆ ಸ್ವತಂತ್ರವಾಗಿ ಅಧಿಕಾರ ಹಿಡಿಯುವಷ್ಟು ಬಹುಮತವು ಮುಂದಿನ ಚುನಾವಣೆಯಲ್ಲಿ ಸಿಗಲಿದೆಯೇ ಎಂಬ ಪ್ರಶ್ನೆಗೆ ಖಚಿತ ಉತ್ತರ ಸಿಗುತ್ತಿಲ್ಲ.

ಬಿಜೆಪಿಯು ಖಾಸಗಿ ಸಂಸ್ಥೆಗಳ ಮೂಲಕ ಪಡೆಯುತ್ತಿರುವ ಸಮೀಕ್ಷಾ ವರದಿಗಳು, ಗುಪ್ತಚರ ವರದಿಗಳಲ್ಲಿ ಅತಂತ್ರ ವಿಧಾನಸಭೆಯ ಭವಿಷ್ಯ ಸಿಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಅದು ಮಾಡಿಸಿರುವ ಸಮೀಕ್ಷಾ ವರದಿಗಳಲ್ಲಿ ಗೆಲುವಿನ ತುಪ್ಪ ಮೂಗಿಗೆ ಬಡಿದಿದೆ. ಜೆಡಿಎಸ್​ಗೆ ಸ್ವತಂತ್ರ ಸರ್ಕಾರ ‘ದೂರದಬೆಟ್ಟ’ ಎನಿಸಿದರೆ ‘ಕಿಂಗ್​ಮೇಕರ್’ ಆಗುವ ಎಚ್​.ಡಿ.ಕುಮಾರಸ್ವಾಮಿ ಆಸೆಗೆ ಈ ಸಮೀಕ್ಷೆಗಳು ನೀರೆರೆದಿರುವುದು ಸುಳ್ಳಲ್ಲ. ಹೀಗಾಗಿಯೇ ಮೋದಿ ಅವರ ಇಂದಿನ ಭಾಷಣದಲ್ಲಿ ಪ್ರಸ್ತಾಪವಾದ ‘ಡಬಲ್ ಎಂಜಿನ್, ಡಬಲ್ ಬೆನಿಫಿಟ್’ ಎಂಬ ಪದಗುಚ್ಛ ಗಮನ ಸೆಳೆಯುತ್ತಿದೆ.

ಯಡಿಯೂರಪ್ಪ ನೇಪಥ್ಯಕ್ಕೆ ಸರಿದ ನಂತರ ಕರ್ನಾಟಕದಲ್ಲಿ ಬಿಜೆಪಿ ಪ್ರಭಾವಿ ಜನನಾಯಕನ ಮುಖವೊಂದು ಸಿಗುತ್ತಿಲ್ಲ. ಯಡಿಯುರಪ್ಪ ಅವರನ್ನು ತೆರವುಗೊಳಿಸಿ, ಅದೇ ಸ್ಥಾನಕ್ಕೆ ತಂದುಕೂರಿಸಿದ ಬಸವರಾಜ ಬೊಮ್ಮಾಯಿ ಸ್ವತಃ ತಮ್ಮನ್ನು ತಾವು ‘ಕಾಮನ್ ಮ್ಯಾನ್ ಸಿಎಂ’ ಎಂದು ಕರೆದುಕೊಂಡರಾದರೂ, ಜನರು ಅವರನ್ನು ಆ ರೀತಿ ಈವರೆಗೂ ಸ್ವೀಕರಿಸಿಲ್ಲ. ಚುನಾವಣೆಯ ವರ್ಷದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಿಸುವ ಧೈರ್ಯ ಬಿಜೆಪಿ ಹೈಕಮಾಂಡ್​ಗೂ ಇಲ್ಲ. ರಾಜ್ಯ ರಾಜಕಾರಣದ ಎಲ್ಲ ಏರಿಳಿತಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿಗೆ ಜನಬೆಂಬಲ ಕಡಿಮೆಯಾಗಿಲ್ಲ ಎನ್ನುವುದನ್ನು ಲಕ್ಷ್ಯದಲ್ಲಿರಿಸಿಕೊಂಡೇ ಚುನಾವಣಾ ಕಾರ್ಯಂತ್ರ ಹೆಣೆಯಲು ಹೈಕಮಾಂಡ್ ಮುಂದಾಗಿದೆ.

‘ಡಬಲ್ ಎಂಜಿನ್ ಎಂದರೆ ಡಬಲ್ ಸ್ಪೀಡ್, ಡಬಲ್ ಎಂಜಿನ್ ಎಂದರೆ ಡಬಲ್ ಬೆನಿಫಿಟ್’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಯಾದಗಿರಿ ಭಾಷಣದಲ್ಲಿ ಹಲವು ಬಾರಿ ಹೇಳಿದರು. ಇದನ್ನು ಈ ರೀತಿ ಅರ್ಥೈಸಬಹುದಾಗಿದೆ. ‘ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಕರ್ನಾಟಕದಲ್ಲಿಯೂ ಬಿಜೆಪಿಗೆ ಮತ್ತೊಂದು ಅವಕಾಶ ಕೊಡಿ’ ಎಂಬ ಪರೋಕ್ಷ ಸಂದೇಶವನ್ನು ಮೋದಿ ರವಾನಿಸಿದರು. ಬಿಜೆಪಿಯು ಮುಂದಿನ ದಿನಗಳಲ್ಲಿ ಹೆಣೆಯಬೇಕಾದ ಚುನಾವಣಾ ಕಾರ್ಯತಂತ್ರಕ್ಕೂ ಮೋದಿ ಅವರ ಈ ಭಾಷಣವು ಮುನ್ನುಡಿ ಬರೆದಂತೆ ಇತ್ತು.

ಇದನ್ನೂ ಓದಿ: PM Modi Speech: ನಾವು ವೋಟ್​ ಬ್ಯಾಂಕ್ ರಾಜಕಾರಣ ಮಾಡಲ್ಲ: ಪ್ರಧಾನಿ ನರೇಂದ್ರ ಮೋದಿ

Published On - 2:04 pm, Thu, 19 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ