ಪ್ರತಿಭಟನೆಯಲ್ಲಿ ಓವರ್ ಆ್ಯಕ್ಟಿಂಗ್ ಮಾಡಿದವರಿಗೆ ಬಹುಮಾನ, ಕ್ಯಾಮೆರಾ ಕಂಡ ಕೂಡಲೆ ಆ್ಯಕ್ಟಿಂಗ್ ಶುರು: ರಾಜುಗೌಡ ವ್ಯಂಗ್ಯ

| Updated By: Rakesh Nayak Manchi

Updated on: Jun 16, 2022 | 9:17 PM

ಪ್ರತಿಭಾ ಕಾರಂಜಿ, ಫ್ಯಾನ್ಸಿ ಡ್ರೆಸ್​ ಸ್ಪರ್ಧೆಯಲ್ಲಿ ಬಹುಮಾನ ನೀಡುವಂತೆ ಕಾಂಗ್ರೆಸ್ ಪಕ್ಷದಲ್ಲೂ ಪ್ರತಿಭಟನೆಯಲ್ಲಿ ಓವರ್ ಆಕ್ಟಿಂಗ್ ಮಾಡಿದವರಿಗೆ ಬಹುಮಾನ ಸ್ಪರ್ಧೆ ಆಯೋಜಿಸಿರಬಹುದು ಎಂದು ಕೈ ನಾಯಕರನ್ನು ಶಾಸಕ ರಾಜು ಗೌಡ ಕಿಚಾಯಿಸಿದರು.

ಪ್ರತಿಭಟನೆಯಲ್ಲಿ ಓವರ್ ಆ್ಯಕ್ಟಿಂಗ್ ಮಾಡಿದವರಿಗೆ ಬಹುಮಾನ, ಕ್ಯಾಮೆರಾ ಕಂಡ ಕೂಡಲೆ ಆ್ಯಕ್ಟಿಂಗ್ ಶುರು: ರಾಜುಗೌಡ ವ್ಯಂಗ್ಯ
ಶಾಸಕ ರಾಜು ಗೌಡ
Follow us on

ಯಾದಗಿರಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರ ಇಡಿ ವಿಚಾರಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಸುರಪುರ ತಾಲೂಕಿನ ಶಾಸಕ ರಾಜುಗೌಡ (Raju Gowda) ವ್ಯಂಗ್ಯವಾಡಿದ್ದಾರೆ. ಪ್ರತಿಭಾ ಕಾರಂಜಿ, ಫ್ಯಾನ್ಸಿ ಡ್ರೆಸ್​ ಸ್ಪರ್ಧೆಯಲ್ಲಿ ಬಹುಮಾನ ನೀಡುವಂತೆ ಕಾಂಗ್ರೆಸ್ ಪಕ್ಷದಲ್ಲೂ ಬಹುಮಾನ ಸ್ಪರ್ಧೆ ಆಯೋಜಿಸಿರಬಹುದು. ಹೀಗಾಗಿ ಪ್ರತಿಭಟನಾ ಸ್ಥಳದಲ್ಲಿ ಕ್ಯಾಮರಾ ಮುಂದೆ ಬಂದರೆ ಸಾಕು ಪ್ರತಿಭಟನಾಕಾರರು ಓವರ್ ಆಕ್ಟಿಂಗ್ ಆರಂಭಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ನಾಳೆ ಜಿಲ್ಲಾ‌ ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಪ್ರತಿಭಾ ಕಾರಂಜಿ, ಫ್ಯಾನ್ಸಿ ಡ್ರೆಸ್​ ಸ್ಪರ್ಧೆಯಂತೆ ಕಾಂಗ್ರೆಸ್ ಪಕ್ಷದಲ್ಲೂ ಸ್ಪರ್ಧೆ ಆಯೋಜಿಸಿರಬಹುದು. ಸ್ಪರ್ಧೆಯಲ್ಲಿ ಮೊದಲು ಬಂದವರಿಗೆ ಬಹುಮಾನ ನೀಡುವುದಾಗಿ ಕಾಂಗ್ರೆಸ್ ಹೇಳಿರಬಹುದು. ಕ್ಯಾಮರಾ ಬಂದರೆ ಸಾಕು ಕಾಂಗ್ರೆಸ್​​ನವರು ಆ್ಯಕ್ಟಿಂಗ್ ಮಾಡುತ್ತಾರೆ ಎಂದರು.

ಇದನ್ನೂ ಓದಿ: ರಾಮ, ಕೃಷ್ಣ ಎಲ್ಲರೂ ಶೂದ್ರ ದೇವತೆಗಳು: ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ.ರವಿ ಆಕ್ರೋಶ

ನಾಯಕರನ್ನ ಮೆಚ್ಚಿಸಲು ಹುಚ್ಚರ ಹಾಗೆ ಮಾಡೋದು ಸರಿಯಲ್ಲ. ನಿಮ್ಮ ವರ್ತನೆ ಮೂಲಕ ಸಮಾಜಕ್ಕೆ ಯಾವ ಸಂದೇಶ ಕೊಡುತ್ತೀರಾ? ನಿಮ್ಮ ಪ್ರಕಾರ ಪ್ರಭಾವಿಗಳಿಗೆ ಯಾವುದೇ ಕ್ರಮ ಆಗಬಾರದಾ? ಇಡಿ, ಸಿಬಿಐ, ಐಟಿ ಸ್ವತಂತ್ರ ಸಂಸ್ಥೆಗಳಾಗಿವೆ. ಯಾರು ಕೂಡ ಅದನ್ನು ಬಳಕೆಯಾಗಲಿ‌, ದುರ್ಬಳಕೆ ಆಗಲಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಾಳೆ ನೀವು ಅಧಿಕಾರಕ್ಕೆ ಬಂದರೆ ಏನ್ ಹೇಳುತ್ತೀರಿ? ಎಂದು ಕಾಂಗ್ರೆಸ್​ ನಾಯಕರನ್ನು ಪ್ರಶ್ನಿಸಿದರು.

ಬ್ಯಾರಿಕೇಡ್ ಹಾರುವ ಸ್ಪರ್ಧೆ

ಇತ್ತೀಚಿಗೆ ಕಾಂಗ್ರೆಸ್​ನವರು ಬ್ಯಾರಿಕೇಡ್ ಮೇಲೆ ಏರುವುದನ್ನು ಕಲಿತಿದ್ದಾರೆ. ಮನೆ ಕಾಂಪೌಂಡ್ ಹಾರುವ ಚಟ ಆಗಿದಿಯೋ ಏನೋ, ಎಲ್ಲಾ ಲೀಡರ್ಸ್ ಹೋಗುತ್ತಾರೆ ಬ್ಯಾರಿಕೇಡ್ ಮೇಲೆ ಹತ್ತುತ್ತಾರೆ. ಬ್ಯಾರಿಕೇಡ್ ಹಾರುವ ಸ್ಪರ್ಧೆ ಏನಾದ್ರು ಇದಿಯೋ ಗೊತ್ತಿಲ್ಲ ಎಂದು ಕಾಂಗ್ರೆಸ್ ನಾಯಕರನ್ನು ವ್ಯಂಗ್ಯವಾಡಿದ ಶಾಸಕ ರಾಜುಗೌಡ, ಪ್ರತಿಭಟನೆಯನ್ನ ಪ್ರತಿಭಟನೆ ರೀತಿಯಲ್ಲಿ ಮಾಡಬೇಕು. ಮೀಡಿಯಾ ಮುಂದೆ‌ ಹುಲಿಗಳಾಗಬೇಕು, ಹೀರೊಗಳಾಗಬೇಕು ಅಂತ‌ ಹುಚ್ಚರಂತೆ ಮಾಡುತ್ತಾ ಇದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ಮೋಟಮ್ಮಗೆ ಅರಳು ಮರುಳು, ನಾನ್ಯಾಕೆ ಕಾಂಗ್ರೆಸ್ ಗೆ ಹೋಗಲಿ? ಅದು ಕೊನೆ ದಿನಗಳನ್ನು ಎಣಿಸ್ತಾ ಇದೆ: ಎಂ.ಪಿ. ಕುಮಾರಸ್ವಾಮಿ

ಬ್ಯಾರಿಕೇಡ್​ನಿಂದ ಬೀಳ್ಬೇಡ್ರಪ್ಪೋ, ಎಲೆಕ್ಷನ್ ಬರ್ತಿದೆ:

ಕಾಂಗ್ರೆಸ್ ನಾಯಕರು ಹೋಗುತ್ತಾರೆ ಬ್ಯಾರಿಕೇಡ್ ಮೇಲೆ ಹತ್ತುತ್ತಾರೆ. ಕೆಳಗೆ ಬಿದ್ದರೆ ಪೊಲೀಸ್​ನವರು ಕೈಕಾಲು ಮುರಿದರು ಎಂದು ಹೇಳುತ್ತಾರೆ ಎಂದು ಕಿಚಾಯಿಸಿದ ರಾಜುಗೌಡ, ಬ್ಯಾರಿಕೇಡ್ ಮೇಲೆ‌‌ ನಿಂತು ಬೀಳಬೇಡ್ರಪ್ಪ ಎಲೆಕ್ಷನ್ ಸಮೀಪ ಬರ್ತಿದೆ. ಬಿದ್ದರೆ ಅದ್ದಕ್ಕೂ ಬಿಜೆಪಿ ಅವರೆ ಕಾರಣ ಅಂತ ಹೇಳಿದರೆ ಏನು ಮಾಡಲು ಆಗಲ್ಲ ಎಂದರು.

ಕಾಂಗ್ರೆಸ್​ನವರು ಇಲ್ಲದಿದ್ದರೆ ನಾವು ಎಲೆಕ್ಷನ್ ಹೇಗೆ ಮಾಡೋದು. ಈಗ ಪ್ರಾಕ್ಟಿಸ್ ಮಾಡಿದ್ದಾರೆ ಅದ್ದಕ್ಕಾಗಿ ವಯಸ್ಸಿದ್ದವರು ವಸ್ಸಾದವರು ಎಲ್ಲರೂ ಬ್ಯಾರಿಕೇಡ್ ಹಾರುತ್ತಾ ಇದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಯಾವ ರೀತಿ ಮಾಡುತ್ತಾರೋ ಹಿಂಬಾಲಕರು ಕೂಡ ಅದೇ ಮಾಡಬೇಕಾಗುತ್ತದೆ. ಬ್ಯಾರಿಕೇಡ್ ಹಾರೋದು ಕಂಪೌಂಡ್ ಹಾರೋದು ಬೇಡವೇ ಬೇಡ. ಅವರ ಬಗ್ಗೆ ನಮಗೆ ಕಾಳಜಿ ಇದ್ದಿದ್ದಕ್ಕೆ ನಾವು ಹೇಳುತ್ತಾ ಇದ್ದೇವೆ ಎಂದರು.

ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 9:16 pm, Thu, 16 June 22