ಪ್ರಜ್ವಲ್ ರೇವಣ್ಣ ವಿರುದ್ಧ ಸಮರ, ಸುಪ್ರೀಂಕೋರ್ಟ್‌ನಲ್ಲಿ ಕೇವಿಯೆಟ್ ಫೈಲ್ ಮಾಡಿದ ದೇವರಾಜೇಗೌಡ

| Updated By: Rakesh Nayak Manchi

Updated on: Sep 07, 2023 | 2:30 PM

ಸಂಸದ ಸ್ಥಾನ ಆಯ್ಕೆ ಅಸಿಂಧು ಪ್ರಶ್ನಿಸಿ ಪ್ರಜ್ವಲ್​ ರೇವಣ್ಣ ಪರ ವಕೀಲರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಪ್ರಜ್ವಲ್​ ರೇವಣ್ಣ ಆಯ್ಕೆ ಅಸಿಂಧು ಆದೇಶವನ್ನು ತಡೆಹಿಡಿಯುವಂತೆ ಹೈಕೋರ್ಟ್​ಗೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಈ ನಡುವೆ ಹೇಳಿಕೆ ನೀಡಿದ ದೂರುದಾರ ಬಿಜೆಪಿ ಮುಖಂಡ ದೇವರಾಜೇಗೌಡ, ಸುಪ್ರೀಂಕೋರ್ಟ್​ನಲ್ಲೂ ನಮಗೆ ಜಯ ಸಿಗುವ ವಿಶ್ವಾಸ ಇದೆ ಎಂದರು.

ಪ್ರಜ್ವಲ್ ರೇವಣ್ಣ ವಿರುದ್ಧ ಸಮರ, ಸುಪ್ರೀಂಕೋರ್ಟ್‌ನಲ್ಲಿ ಕೇವಿಯೆಟ್ ಫೈಲ್ ಮಾಡಿದ ದೇವರಾಜೇಗೌಡ
ದೇವರಾಜೇಗೌಡ ಮತ್ತು ಪ್ರಜ್ವಲ್ ರೇವಣ್ಣ
Follow us on

ಹಾಸನ, ಸೆ.7: ಹೈಕೋರ್ಟ್‌ನಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಸಂಸದ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್ ತೀರ್ಪು ನೀಡಿದ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ವಕೀಲ, ದೂರುದಾರ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ, ಸುಪ್ರೀಂಕೋರ್ಟ್​ನಲ್ಲೂ (Supreme Court) ಜಯ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಜ್ವಲ್ ರೇವಣ್ಣ ಅವರು ಸುಪ್ರೀಂಕೋರ್ಟ್‌ಗೂ ಹೋಗಬಹುದು. ಈಗಾಗಲೇ ನಾನು ಸುಪ್ರೀಂಕೋರ್ಟ್‌ನಲ್ಲಿ ಕೇವಿಯೆಟ್ ಫೈಲ್ ಮಾಡಿದ್ದೇನೆ ಎಂದು ಹೇಳಿದರು.

ಹಲವಾರು ಆಮೀಷಗಳು ಬಂದರೂ ನನ್ನಲ್ಲಿ ಗುರಿಯಿತ್ತು. ಒಬ್ಬ ಸಾಮಾನ್ಯ ವ್ಯಕ್ತಿಗೆ ನ್ಯಾಯ ಸಿಕ್ಕಿದೆ. ನಾವು ಈ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ಗೆದ್ದಿದ್ದೇವೆ. ಮುಂದೆ ತೀರ್ಪು ಏನಾದರೂ ಆಗಬಹುದು. ತೀರ್ಪು ಪ್ರಕಟವಾದ ದಿವನೇ ಅವರು ಒಂದು ಅಪ್ಲಿಕೇಶನ್ ಹಾಕಬೇಕಿತ್ತು. ಯಾವ ಕಾರಣಾಂತರದಿಂದ ಹಾಕಲಿಲ್ಲ ಗೊತ್ತಿಲ್ಲ ಎಂದರು.

ಇದನ್ನೂ ಓದಿ: ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಸುಪ್ರೀಂಕೋರ್ಟ್​​​ನ ಮೊರೆ ಹೋಗಬೇಕು; ಹೆಚ್​ಡಿ ದೇವೇಗೌಡ

ಮೊನ್ನೆ ಹೈಕೋರ್ಟ್‌ಗೆ ತೀರ್ಪು ಅಮಾನತಿಗೆ ಮೊರೆ ಹೋಗಿದ್ದಾರೆ. ಮೂವತ್ತು ದಿನದೊಳಗೆ ಸುಪ್ರೀಂಕೋರ್ಟ್‌ಗೂ ಹೋಗಬಹುದು. ಈಗಾಗಲೇ ನಾನು ಸುಪ್ರೀಂಕೋರ್ಟ್‌ನಲ್ಲಿ ಕೇವಿಯೆಟ್ ಫೈಲ್ ಮಾಡಿದ್ದೇನೆ. ನಾವು ಕೇವಿಯೆಟ್ ಹಾಕಿರುವುದರಿಂದ ಸಂಸದರು ಎಂಟೇರ್ ಫಿಟಿಷನ್ ನಮಗೆ ನೀಡಬೇಕು. ನಾವು ಅದಕ್ಕೆ ಪೂರಕವಾದ ತಕರಾರು ಹಾಕಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಸುಪ್ರೀಂಕೋರ್ಟ್ ನಲ್ಲೂ ನಮಗೆ ನ್ಯಾಯ ಸಿಗಲಿದೆ ಎಂದು ಭರವಸೆ ಇದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ