AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಸುಪ್ರೀಂಕೋರ್ಟ್​​​ನ ಮೊರೆ ಹೋಗಬೇಕು; ಹೆಚ್​ಡಿ ದೇವೇಗೌಡ

ಪ್ರಜ್ವಲ್ ರೇವಣ್ಣ​ ಕಾನೂನು ಹೋರಾಟ ಮುಂದುವರಿಸಲಿದ್ದಾರೆ. ಇದೇನು ತಲೆಕೆಡಿಸಿಕೊಳ್ಳಬೇಕಾದ ವಿಷಯವಲ್ಲ. ಹೈಕೋರ್ಟ್​​ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕು. ‘ಸುಪ್ರೀಂ’ನಲ್ಲಿ ‌ಪ್ರಜ್ವಲ್‌ ರೇವಣ್ಣ ಪರ ತೀರ್ಪು ಬರುವ ವಿಶ್ವಾಸವಿದೆ. ಪ್ರಜ್ವಲ್​ ರೇವಣ್ಣ ಸಂಸದರಾಗಿಯೇ ಉಳಿದುಕೊಳ್ಳುತ್ತಾರೆ ಎಂದು ಎಂ​ಎಲ್​ಸಿ ಪ್ರಜ್ವಲ್​ ರೇವಣ್ಣ ಹೇಳಿದರು.

ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಸುಪ್ರೀಂಕೋರ್ಟ್​​​ನ ಮೊರೆ ಹೋಗಬೇಕು; ಹೆಚ್​ಡಿ ದೇವೇಗೌಡ
ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ
ಮಂಜುನಾಥ ಕೆಬಿ
| Edited By: ವಿವೇಕ ಬಿರಾದಾರ|

Updated on: Sep 02, 2023 | 1:59 PM

Share

ಹಾಸನ: ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ (Prajwal Revanna) ಅನರ್ಹವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​​ ​ತೀರ್ಪಿನ ಪ್ರತಿ ನೋಡದೆ ಮಾತನಾಡಲು ಆಗುವುದಿಲ್ಲ. ಮಾಜಿ ಪ್ರಧಾನಿಯಾಗಿ ಆದೇಶ ನೋಡದೆ ಮಾತನಾಡೋದು ಸರಿಯಲ್ಲ. ಸ್ವಾಭಾವಿಕವಾಗಿ ಸುಪ್ರೀಂಕೋರ್ಟ್​​​ನ ಮೊರೆ ಹೋಗಬೇಕಾಗುತ್ತದೆ. ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಪ್ರಜ್ವಲ್ ರೇವಣ್ಣ​​ ಬೆಂಗಳೂರಿಗೆ ಹೋಗಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ (HD Devegowda) ಹೇಳಿದರು.

ಪ್ರಜ್ವಲ್ ರೇವಣ್ಣ​ ಕಾನೂನು ಹೋರಾಟ ಮುಂದುವರಿಸಲಿದ್ದಾರೆ: ಸೂರಜ್​ ರೇವಣ್ಣ

ಪ್ರಜ್ವಲ್ ರೇವಣ್ಣ​ ಕಾನೂನು ಹೋರಾಟ ಮುಂದುವರಿಸಲಿದ್ದಾರೆ. ಇದೇನು ತಲೆಕೆಡಿಸಿಕೊಳ್ಳಬೇಕಾದ ವಿಷಯವಲ್ಲ. ಹೈಕೋರ್ಟ್​​ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕು. ‘ಸುಪ್ರೀಂ’ನಲ್ಲಿ ‌ಪ್ರಜ್ವಲ್‌ ರೇವಣ್ಣ ಪರ ತೀರ್ಪು ಬರುವ ವಿಶ್ವಾಸವಿದೆ. ಪ್ರಜ್ವಲ್​ ರೇವಣ್ಣ ಸಂಸದರಾಗಿಯೇ ಉಳಿದುಕೊಳ್ಳುತ್ತಾರೆ. ಸುಪ್ರೀಂಕೋರ್ಟ್‌ನಲ್ಲಿ ಸ್ಟೇ ತೆಗೆದುಕೊಳ್ಳಬೇಕು. ಮುಂದಿನ ಕಾನೂನು ಹೋರಾಟ ಏನಿದೆ ಎಂದು ತಿಳಿದು ಪ್ರಕ್ರಿಯೆ ಮಾಡುತ್ತೇವೆ ಎಂದು ಎಂ​ಎಲ್​ಸಿ ಪ್ರಜ್ವಲ್​ ರೇವಣ್ಣ ಹೇಳಿದರು.

ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇದೇನು ತಲೆಕೆಡಿಸಿಕೊಳ್ಳಬೇಕಾದ ವಿಷಯವಲ್ಲ. ಅವರೇನಾದರು ಅಕ್ರಮ, ಭ್ರಷ್ಟಾಚಾರ ಮಾಡಿದ್ದಾರಾ ? ಏನು ಇಲ್ಲಾ. ಏನೋ ಅಫಿಡೆವಿಟ್‌ನಲ್ಲಿ ಒಂದು ಸಣ್ಣ ಪ್ರಾಬ್ಲಂ ಇರೋದನ್ನು ಸಲ್ಲಿಸಿದ್ದಾರೆ. ಅಂತಹ ಸಾವಿರಾರು ಅರ್ಜಿಗಳು ಬರುತ್ತವೆ ಎಂದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅನರ್ಹ; ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದ ಜೆಡಿಎಸ್ ಶಾಸಕ ಎ ಮಂಜು

ತೀರ್ಪು ಬಂದ ನಂತರ ಎ.ಮಂಜು ಜೊತೆ ಚರ್ಚೆ ಮಾಡಿದ್ದಾರಾ ಎಂಬ ವಿಚಾರವಾಗಿ ಮಾತನಾಡಿದ ಅವರು ತೀರ್ಪಿನ ಪೂರ್ತಿ ಕಾಫಿ ಮಧ್ಯಾಹ್ನ ಅಪ್‌ಲೋಡ್ ಆಗುತ್ತೆ. ಈ ವಿಷಯವಾಗಿ ಯಾರ ಜೊತೆಗೂ ಮಾತನಾಡಿಲ್ಲ. ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ತೀರ್ಪಿನ ಪೂರ್ತಿ ಕಾಫಿ ನೋಡಿ ಮಾತನಾಡುತ್ತೇನೆ: ಹೆಚ್​​​ಡಿ ರೇವಣ್ಣ

ಪ್ರಜ್ವಲ್‌ ರೇವಣ್ಣ ಅವರದ್ದು ಕೇಸ್​ ಏನಿದೆ, ಕಾನೂನು ಏನು ಹೇಳುತ್ತೆ ಅಂತ ನೋಡುತ್ತೇವೆ. ತೀರ್ಪಿನ ಪೂರ್ತಿ ಕಾಫಿ ನೋಡಿ ಹೇಳುತ್ತೇವೆ. ಆರ್ಡರ್ ಕಾಫಿ ಬರಲಿ, ಅದೇನಿದೆ ಗೊತ್ತಿಲ್ಲ ನನಗೆ. ನನಗೆ ಯಾವ ಸೂಚನೆಯೂ ಬಂದಿಲ್ಲ. ಕಾನೂನಿಗೆ ನಾವೆಲ್ಲ ತಲೆ ಬಾಗಬೇಕು, ಆ ರೀತಿ ನಾವು ಇದ್ದೇವೆ. ಮುಂದೆ ಏನು ಮಾಡಬೇಕು ವಕೀಲರನ್ನು ಕೇಳಿ ಮಾಡುತ್ತೇವೆ ಎಂದು ಮಾವಿನಕೆರೆ ಗ್ರಾಮದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More