ನವದೆಹಲಿ, ಫೆ.29: ಹಿಮಾಚಲ ಪ್ರದೇಶ(Himachal Pradesh) ಕಾಂಗ್ರೆಸ್ ಶಾಸಕರಲ್ಲಿ ಕೆಲವು ರೀತಿಯ ವೈಫಲ್ಯ ಸಂಭವಿಸಿದ ಹಿನ್ನಲೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar) ಅವರು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ‘ದೇಶದಲ್ಲಿಯೇ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತದಲ್ಲಿದೆ. ಆ ಮೂರು ಸರ್ಕಾರಗಳಲ್ಲಿ ಡಿಕೆಶಿ ಟ್ರಬಲ್ ಶೂಟರ್ ಆಗಿದ್ದರೆ, ದೇಶಾದ್ಯಂತ ಕಾಂಗ್ರೆಸ್ಗೆ ಆಗಿರುವ ಟ್ರಬಲ್ನ್ನು ಶೂಟ್ ಮಾಡಲಿ ಎಂದು ಲೇವಡಿ ಮಾಡಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ರಿಂದ 50 ಸೀಟ್ ಗೆಲ್ಲಲ್ಲ,
ಒಂದು ವೇಳೆ ಅಷ್ಟು ಸೀಟ್ ಗೆದ್ದರೆ ಡಿಸಿಎಂ ಡಿಕೆ ಟ್ರಬಲ್ ಶೂಟರ್ ಎಂದು ಟಾಂಗ್ ಕೊಟ್ಟಿದ್ದಾರೆ.
ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕರಲ್ಲಿ ಕೆಲವು ರೀತಿಯ ವೈಫಲ್ಯ ಸಂಭವಿಸಿದ ಹಿನ್ನಲೆ ಕಾಂಗ್ರೆಸ್‌ನ ವೀಕ್ಷಕರಲ್ಲಿ ಒಬ್ಬರಾದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆಶಿ ಅವರನ್ನು ಹಿಮಾಚಲ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಮಾತನಾಡಿದ್ದ ಅವರು, ‘ವಿಧಾನಸಭೆ ಚುನಾವಣೆ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಐದರಿಂದ ಆರು ಸದಸ್ಯರೊಂದಿಗೆ ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಸರ್ಕಾರ ಸುರಕ್ಷಿತವಾಗಿದ್ದು, ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:‘ಕೆಲವು ವೈಫಲ್ಯವನ್ನು ಸಿಎಂ ಸುಖು ಒಪ್ಪಿಕೊಂಡಿದ್ದಾರೆ, ಹಿಮಾಚಲ ಕಾಂಗ್ರೆಸ್ ಬಿಕ್ಕಟ್ಟು ಮುಗಿದಿದೆ: ಡಿಕೆ ಶಿವಕುಮಾರ್
ಇನ್ನು ಹಿಮಾಚಲ ಸಿಎಂ ಸುಖವಿಂದರ್ ಸಿಂಗ್ ಸುಖು ಅವರು ‘ಕೆಲವು ವೈಫಲ್ಯ ಸಂಭವಿಸಿದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಅದು ಮುಂದುವರಿಯುವುದಿಲ್ಲ. ನಾವು ಎಲ್ಲಾ ಶಾಸಕರು, ಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಜೊತೆ ಜೊತೆ ಖುದ್ದಾಗಿ ಮಾತನಾಡಿದ್ದೇವೆ. ಹೀಗಾಗಿ ಅವರೆಲ್ಲರ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಒಟ್ಟಾಗಿ ಕೆಲಸ ಮಾಡುತ್ತೇವೆ. ಐದರಿಂದ ಆರು ಸದಸ್ಯರನ್ನೊಳಗೊಂಡ ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಮಿತಿ ರಚಿಸುತ್ತಿದ್ದೇವೆ. ಪಕ್ಷ ಉಳಿಸಲು ಮತ್ತು ಸರ್ಕಾರವನ್ನು ಉಳಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ