ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರು? ಸಿದ್ದು-ಡಿಕೆಶಿ ಮುಂದೆ ಗೊಂದಲಗಳಿಗೆ ತೆರೆ ಎಳೆದ ರಾಹುಲ್

| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2022 | 10:15 PM

ಕಾಂಗ್ರೆಸ್​ನ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಗೊಂದಲಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತೆರೆ ಎಳೆದಿದ್ದಾರೆ.

ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರು? ಸಿದ್ದು-ಡಿಕೆಶಿ ಮುಂದೆ ಗೊಂದಲಗಳಿಗೆ ತೆರೆ ಎಳೆದ ರಾಹುಲ್
Siddu And DKS
Follow us on

ತುಮಕೂರು: ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ ಆರೇಳು ತಿಂಗಳು ಬಾಕಿ ಇದ್ದು, ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರು ಎಂಬ ಕುತೂಹಲ ಮೂಡಿದೆ. ಈಗಾಗಲೇ ಮುಂದಿನ ಸಿಎಂ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ಹಲವು ಬಾರಿ ಬಹಿರಂಗವಾಗಿದೆ.

ಮುಂದಿನ​ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕಾಂಗ್ರೆಸ್​ನ ಸಭೆ-ಸಮಾವೇಶಗಳಲ್ಲೂ ಘೋಷಣೆಗಳು ಮೊಳಗುತ್ತಲೇ ಇವೆ. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್​ನ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಗೊಂದಲಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಬಹಳ ದಿನಗಳ ನಂತರ ಬಹಿರಂಗವಾಗಿ ಕಾಣಿಸಿಕೊಂಡ ದೇವೇಗೌಡ, ಎಚ್​ಡಿಕೆ ಬಗ್ಗೆ ಸ್ಫೋಟಕ ಭವಿಷ್ಯ

ತುಮಕೂರು ಜಿಲ್ಲೆಯಲ್ಲಿ ಭಾರತ್​ ಜೋಡೋ ಪಾದಯಾತ್ರೆ ನಡೆಸುತ್ತಿರುವ ರಾಹುಲ್​ ಗಾಂಧಿ ಶನಿವಾರ ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರು? ಎಂದು ಪ್ರರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್​, ಚುನಾವಣೆ ನಂತರವೇ ಸಿಎಂ ಯಾರೆಂದು ನಿರ್ಧರಿಸಲಾಗುತ್ತೆ. ಸದ್ಯಕ್ಕೆ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಘೋಷಣೆ ಇಲ್ಲ ಎಂದು ಡಿಕೆಶಿ ಮತ್ತು ಸಿದ್ದು ಎದುರೇ ಸ್ಪಷ್ಟಪಡಿಸಿದರು. ಈ ಮೂಲಕ ಮುಂದಿನ ಸಿಎಂ ಯಾರೆಂಬ ವಿವಾದಕ್ಕೆ ತೆರೆ ಎಳೆದರು.

ಮುಂದಿನ ಸಿಎಂ ವಿಚಾರಕ್ಕೆ ಡಿಕೆಶಿ-ಸಿದ್ದು ನಡುವೆ ನಡೆದ ರಾಜಕೀಯ ಬೆಳವಣಿಗೆಗಳು ಅಷ್ಟಿಷ್ಟಲ್ಲ. ಕೆಲವೊಮ್ಮೆ ಇಬ್ಬರು ನಡುವಿನ ಪರೋಕ್ಷ ಮಾತುಗಳು ತಾರಕಕ್ಕೇರಿದ್ದು ಉಂಟು. ಇನ್ನು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿದ್ದ ನಾಯಕರಿಗೆ ಡಿಕೆಶಿ ನೋಟಿಸ್ ನೀಡಿದ ಉದಾಹರಣೆಗಳು ಇವೆ.

ಇದೀಗ ಒಟ್ಟಿನಲ್ಲಿ ಪರೋಕ್ಷವಾಗಿ ಡಿಕೆಶಿ-ಸಿದ್ದರಾಮಯ್ಯನವರ ಎದುರೇ ಯಾರು ಮುಂದಿನ ಸಿಎಂ ಸಲುವಾಗಿ ಕಿತ್ತಾಡುವುದು ಬೇಡ. ಚುನಾವಣೆ ಫಲಿತಾಂಶ ಮೇಲೆ ಸಿಎಂ ಆಯ್ಕೆಯಾಗಲಿದೆ ಎಂದು ಹೇಳಿದಂತಾಯ್ತು.