AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನಾ? ಹಸುಗಳನ್ನು ನೆನೆದು ಮಾಜಿ ಸಚಿವ ಭಾವುಕ

ಧಾರವಾಡ ಬಿಜೆಪಿ ಮುಖಂಡ ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿನ ಮೇಲೆ ಹೊರಬಂದಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನಾ?  ಹಸುಗಳನ್ನು ನೆನೆದು ಮಾಜಿ ಸಚಿವ ಭಾವುಕ
vinay kulkarni
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2022 | 7:04 PM

ಬೆಳಗಾವಿ: ಧಾರಾವಾಡದ ತಮ್ಮ ಫಾರ್ಮ್‌ನಲ್ಲಿರುವ ಹಸುಗಳನ್ನು ನೆನೆದು ಮಾಜಿ ಸಚಿವ ವಿನಯ್‌ ಕುಲಕರ್ಣಿ ಭಾವುಕರಾಗಿರುವ ಪ್ರಸಂಗ ನಡೆದಿದೆ.

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನಾನೊಬ್ಬ ರಾಜಕಾರಣಿ ಅಷ್ಟೇ ಅಲ್ಲ, ನಾನೊಬ್ಬ ರೈತ, ನನ್ನ ಫಾರ್ಮ್‌ನಲ್ಲಿ ಐದು ಸಾವಿರ ಜಾನುವಾರುಗಳಿವೆ. ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಅವುಗಳನ್ನು ಸಾಕಿದ್ದೇನೆ ಎಂದು ಭಾವುಕರಾದರು.

ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಹಸುಗಳನ್ನು ಸಾಕಿದ್ದೇನೆ. ಧಾರವಾಡದಲ್ಲಿದ್ದಾಗ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಫಾರ್ಮ್‌ಗೆ ಹೋಗುತ್ತಿದ್ದೆ. ಬೆಂಗಳೂರು ಪ್ರವಾಸದಲ್ಲಿದ್ದಾಗ ಮಾತ್ರ ನನ್ನ ಫಾರ್ಮ್‌ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಧಾರವಾಡದಲ್ಲಿದ್ದಾಗ ಪ್ರತಿದಿನ ತಪ್ಪದೇ ಫಾರ್ಮ್‌ಗೆ ಹೋಗಿ ಹಸುಗಳ ಆರೈಕೆ ಮಾಡ್ತಿದ್ದೆ. ಇಷ್ಟು ದಿನ ಫಾರ್ಮ್‌ಗೆ ಹೋಗದೇ ಇರುವುದು ತುಂಬಾ ನೋವು ತರಿಸಿದೆ ಎಂದರು.

ಇದನ್ನೂ ಓದಿ: ಜಿಲ್ಲೆಯಲ್ಲಿ ಕಾಂಗ್ರೆಸ್ 7 ಕ್ಷೇತ್ರ ಗೆದ್ರೆ ಅರ್ಧಭಾಗ ಮೀಸೆ ಬೋಳಿಸಿಕೊಳ್ತಿನಿ: ಕೈ ನಾಯಕರಿಗೆ ಬಿಜೆಪಿ ಶಾಸಕ ಸವಾಲ್

ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನಾ? ಸದ್ಯ ಜಾನುವಾರುಗಳನ್ನು ನನ್ನ 22 ವರ್ಷದ ಪುತ್ರಿ ನೋಡಿಕೊಳ್ಳುತ್ತಿದ್ದಾಳೆ. ಎರಡು, ಮೂರು ಹಸು ಕಟ್ಟಿದ ರೈತರೇ ಒಂದು ದಿನ ಮನೆ ಬಿಟ್ಟು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಂತಹದರಲ್ಲಿ ಸಾವಿರಾರು ಹಸುಗಳನ್ನು ಕಟ್ಟಿದ ನಾನು ಮನೆಗೆ ಹೋಗದಿದ್ದರೇ ಮುಖ ಪ್ರಾಣಿಗಳ ಕಥೆ ಏನಾಗಬೇಕು ಎಂದು ಎಂದು ಹೇಳಿದರು.

ಯೋಗೇಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ದೇಶದ ಕಾನೂನಿಗೆ ಗೌರವಿಸುತ್ತೇನೆ. ಕಾನೂನು ಹೋರಾಟ ಮುಂದುವರಿಸುತ್ತೇನೆ. ಬರುವ ದಿನಗಳಲ್ಲಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವ ವಿಶ್ವಾಸವಿದೆ‌. ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ‌. ವಿನಯ್ ಕುಲಕರ್ಣಿ ಕ್ಷೇತ್ರ ಬದಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಧಾರವಾಡ ಪ್ರವೇಶಕ್ಕೆ ‌ಅನುಮತಿ ಸಿಗದಿದ್ದರೂ ಹೊರಗೆ ಇದ್ದೇ ಕಣಕ್ಕಿಳಿಯುತ್ತೇನೆ. ಯಾವುದೇ ಕಾರಣಕ್ಕೂ ಧಾರವಾಡ ಗ್ರಾಮೀಣ ಕ್ಷೇತ್ರ ಬದಲಿಸುವುದಿಲ್ಲ ಎಂದು ತಮ್ಮ ನಿಲುವು ಪ್ರಕಟಿಸಿದರು.

ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಇದೆ. ಕೋರ್ಟ್ ಅನುಮತಿ ಇಲ್ಲದೇ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಪ್ರಗತಿ ಹೊಂದುವರು
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಪ್ರಗತಿ ಹೊಂದುವರು
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್