ಜಿಲ್ಲೆಯಲ್ಲಿ ಕಾಂಗ್ರೆಸ್ 7 ಕ್ಷೇತ್ರ ಗೆದ್ರೆ ಅರ್ಧಭಾಗ ಮೀಸೆ ಬೋಳಿಸಿಕೊಳ್ತಿನಿ: ಕೈ ನಾಯಕರಿಗೆ ಬಿಜೆಪಿ ಶಾಸಕ ಸವಾಲ್

ಅರ್ಧಭಾಗ ಮೀಸೆ ಬೋಳಿಸಿಕೊಳ್ತಿನಿ ಎಂದು ಕೈ ನಾಯಕರಿಗೆ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಬಹಿರಂಗ ಸವಾಲು ಹಾಕಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ 7 ಕ್ಷೇತ್ರ ಗೆದ್ರೆ ಅರ್ಧಭಾಗ ಮೀಸೆ ಬೋಳಿಸಿಕೊಳ್ತಿನಿ: ಕೈ ನಾಯಕರಿಗೆ ಬಿಜೆಪಿ ಶಾಸಕ ಸವಾಲ್
Shivanagowda Nayak
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2022 | 5:08 PM

ರಾಯಚೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕರ್ನಾಕದಲ್ಲಿ ರಾಜಕೀಯ ಮೇಲಾಟಗಳು ಆರಂಭವಾಗಿವೆ. ಒಂದು ಪಕ್ಷದ ಮೇಲೆ ಮತ್ತೊಂದು ಪಕ್ಷದವರ ಆರೋಪ- ಪ್ರತ್ಯಾರೋಪಗಳ ಅಬ್ಬರ ಜೋರಾಗಿವೆ.

ಇದರ ಮಧ್ಯೆ ರಾಯಚೂರಿನಲ್ಲಿ ಬಿಜೆಪಿ ಶಾಸಕ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್, ಅರ್ಧಭಾಗ ಮೀಸೆ ಬೋಳಿಸಿಕೊಳ್ತಿನಿ ಎಂದು ಕಾಂಗ್ರೆಸ್​ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ರಾಯಚೂರು ನಗರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ  ಶಾಸಕ ಶಿವನಗೌಡ ನಾಯಕ್, ಜಿಲ್ಲೆಯಲ್ಲಿ ಕಾಂಗ್ರೆಸ್ 7 ಕ್ಷೇತ್ರ ಗೆದ್ದರೆ ಅರ್ಧಭಾಗ ಮೀಸೆ ಬೋಳಿಸಿಕೊಳ್ತಿನಿ ಎಂದು ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಚಾಲೆಂಜ್ ಮಾಡಿದ್ದಾರೆ.

ಇದನ್ನೂ ಓದಿ: ಇಡಿ ವಿಚಾರಣೆ ಅಂತ್ಯ: ರಾಜಕೀಯ ಕದನಗಳನ್ನು ರಣರಂಗದಲ್ಲಿಯೇ ನಡೆಸಬೇಕೆಂದ ಡಿಕೆಶಿ

ರಾಯಚೂರು ಜಿಲ್ಲೆಯಲ್ಲಿ ಏಳು ಸೀಟ್​ನಲ್ಲಿ ಏಳಕ್ಕೆ ಏಳು ಗೆದ್ದು ಬಿಡ್ತೀವಿ ಅಂತ ಕಾಂಗ್ರೆಸ್​ನವರು ಅಂತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮೂರು ಸೀಟ್ ಗೆದ್ದರೆ ನಾನು ಒತ್ತಟ್ಟಿನ(ಅರ್ಧಭಾಗ)ಮೀಸೆ ಬೋಳಿಸಿಕೊಳ್ಳಿತ್ತೇನೆ ಎಂದು ಕೈ ನಾಯಕರಿಗೆ ಬಹಿರಂಗ ಸವಾಲು ಹಾಕಿದರು.

ಕಾಂಗ್ರೆಸ್ ಏಳಕ್ಕೆ ಏಳು ಸೀಟ್ ಗೆಲ್ಲುವುದು ಅದು ಅಸಾಧ್ಯವಾದ ಮಾತು. ನಮ್ಮ ಜಿಲ್ಲೆಯಲ್ಲಿ ನಾವು ಕನಿಷ್ಠ 5 ಸೀಟ್ ಗೆಲ್ಲುತ್ತೇವೆ.ಇದು ನಮ್ಮ ವಚನ. ಶಿವನಗೌಡರೇ ನೀವು ನಿಲ್ಲೋದು ಬೇಡ ಅಂತ ಪಕ್ಷ ಹೇಳಿದರೂ ಅದಕ್ಕೆ ನಾನ್ ರೆಡಿ. ಏಳು ಕ್ಷೇತ್ರದಲ್ಲಿ ಓಡಾಡಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸೋದಕ್ಕೆ ರೆಡಿ ಎಂದು ಹೇಳಿದರು.

ಇದನ್ನೂ ಓದಿ: ಯಡಿಯೂರಪ್ಪಗೆ “ಗಿರಾಕಿ” ಎಂದು ಜರಿದ ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ .ಶಿವನಗೌಡ ನಾಯಕ್. ಮೊನ್ನೆ ಕುಮಾರಸ್ವಾಮಿ ಹೈದರಾಬಾದ್​ಗೆ ಹೋಗಿದ್ದ. ಅಲ್ಲಿ ಚುನಾವಣೆಗೆ ದುಡ್ಡು ಕೀಳೋಕೆ ಹೋಗಿದ್ದ. ಚುನಾವಣೆ ಬಂದಾಗ ಅಲ್ಲಿ ಇಲ್ಲಿ ಓಡಾಡಿ. ಹಾಗೇ ಬ್ರದರ್ ಹೀಗೆ ಬ್ರದರ್ ಅಂತ ಕಣ್ಣೀರು ಹಾಕಿ ಎಂದು ವ್ಯಂಗ್ಯವಾಡಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ