ಇಡಿ ವಿಚಾರಣೆ ಅಂತ್ಯ: ರಾಜಕೀಯ ಕದನಗಳನ್ನು ರಣರಂಗದಲ್ಲಿಯೇ ನಡೆಸಬೇಕೆಂದ ಡಿಕೆಶಿ
ಇಡಿ ವಿಚಾರಣೆ ಮುಗಿಸಿಕೊಂಡು ಹೊರಬರುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಂಸದ ಡಿಕೆ ಸುರೇಶ್ ಅವರ ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆ ಅಂತ್ಯವಾಗಿದೆ. ಯಂಗ್ ಇಂಡಿಯಾ ಹಣಕಾಸು ವ್ಯವಹಾರದ ಬಗ್ಗೆ ಇಡಿ ಅಧಿಕಾರಿಗಳು ಸಹೋದರರನ್ನು ಇಂದು(ಅ.07) ಪ್ರತ್ಯೇಕವಾಗಿ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಮುಗಿಸಿಕೊಂಡು ಡಿಕೆ ಶಿವಕುಮಾರ್ ಹೊರಬರುತ್ತಿದ್ದಂತೆಯೇ ಟ್ವಿಟ್ಟರ್ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ರಾಜಕೀಯ ಕದನಗಳನ್ನು ರಾಜಕೀಯ ರಣರಂಗದಲ್ಲಿಯೇ ನಡೆಸಬೇಕು. BJP ತನ್ನ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡಿ, ಬೆದರಿಸಲು ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಇದಕ್ಕೆ ಮೇ 2023 ರಲ್ಲಿ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ. ED ಮೂಲಕ ನಿರುದ್ಯೋಗ, ಬೆಲೆ ಏರಿಕೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎನ್ನುವುದು BJPಗೆ ಅರಿವಾಗಬೇಕಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಇಡಿ ಸಮನ್ಸ್ ಜಾರಿ: ದೆಹಲಿಯಲ್ಲಿರುವ ಇಡಿ ಕಚೇರಿಗೆ ಹಾಜರಾದ ಡಿಕೆ ಸಹೋದರರು
Political battles must be fought on the political battlefield.
The misuse of agencies by BJP to harass and intimidate political opponents will get a befitting reply from the people of Karnataka in May 2023.
BJP must understand ED can’t address unemployment and price rise.
— DK Shivakumar (@DKShivakumar) October 7, 2022
ಇನ್ನು ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ ಸಹೋದರರು. ಹತ್ತು ವರ್ಷದ ಆಸ್ತಿ ದಾಖಲೆಗಳನ್ನು ಕೇಳಿದ್ದಾರೆ. ಎಲ್ಲವನ್ನು ಇಡಿ ಕಚೇರಿಗೆ ಸಲ್ಲಿಸಲಿದ್ದೇವೆ. ಕರೆದಾಗ ಬರಬೇಕು ಎಂದು ಹೇಳಿದ್ದಾರೆ. ಮುಂದಿನ ವಿಚಾರಣೆ ದಿನಾಂಕ ಸೂಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಯಂಗ್ ಇಂಡಿಯಾ ಸಂಸ್ಥೆಗೆ 25 ಲಕ್ಷ ರೂ. ದೇಣಿಗೆ ನೀಡಿದ್ದೆ. ಅದರ ಬಗ್ಗೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದೇನೆ. ನಮ್ಮ ಕಂಪನಿಗಳಿಗೆ ಸೇರಿದ ಮತ್ತಷ್ಟು ದಾಖಲೆ ನೀಡಲು ಕೇಳಿದ್ದು, ದಾಖಲೆಗಳನ್ನು ನೀಡಲು ಕಾಲಾವಕಾಶ ಕೇಳಿದ್ದಕ್ಕೆ ಒಪ್ಪಿದ್ದಾರೆ. ಡಿಕೆಶಿ ಹಾಗೂ ನನ್ನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಮತ್ತೆ ಅಗತ್ಯ ಬಿದ್ದರೆ ವಿಚಾರಣೆಗೆ ಕರೆದರೆ ಬರುವಂತೆ ಸೂಚನೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಇದೀಗ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ಬೆಂಗಳೂರಿಗೆ ವಾಪಸ್ ಆಗಲು ನೇರವಾಗಿ ಇಡಿ ಕಚೇರಿಯಿಂದ ದೆಹಲಿ ಏರ್ಪೋರ್ಟ್ಗೆ ತೆರಳಿದರು.
ಎರಡನೇ ಸಮನ್ಸ್ ನೀಡಿದ್ದ ಇಡಿ ಯೆಸ್….ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಸುರೇಶ್ಗೆ ವಿಚಾರಣೆ ಬರುವಂತೆ ಇಡಿ ಸಮನ್ಸ್ ನೀಡಿತ್ತು. ಆದ್ರೆ, ಸಧ್ಯಕ್ಕೆ ವಿಚಾರಣೆ ಬರಲು ಆಗುವುದಿಲ್ಲ. ಮುಂದೊಂದು ದಿನ ಬರುವುದಾಗಿ ಡಿಕೆ ಬ್ರದರ್ಸ್ ಇಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದ್ರೆ, ಇಡೀ ಡಿಕೆ ಸಹೋದರರ ಮನವಿಗೆ ಒಪ್ಪದೇ ಅಕ್ಟೋಬರ್. 7ರಂದು ವಿಚಾರಣೆ ಹಾಜರಾಗಲೇಬೇಕೆಂದು ಮತ್ತೊಂದು ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಅನಿವಾರ್ಯವಾಗಿ ಡಿಕೆಶಿ ಹಾಗೂ ಸುರೇಶ್ ನಿನ್ನೆ (ಅ.06) ರಾತ್ರಿಯೇ ದೆಹಲಿಗೆ ತೆರಳಿದ್ದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ