ರಾಜಸ್ಥಾನ ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, 7 ಸಂಸದರು ಕಣಕ್ಕೆ
ರಾಜಸ್ಥಾನ ವಿಧಾನಸಭಾ ಚುನಾವಣೆಗೆ (Rajasthan Assembly Elections) ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ, ಅದರಲ್ಲಿ 7 ಸಂಸದರನ್ನು ಕಣಕ್ಕಿಳಿಸಿದೆ ಎಂದು ವರದಿ ಹೇಳಿದೆ.
ಜೈಪುರ್, ಅ.9: ಇಂದು ಪಂಚರಾಜ್ಯಗಳ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಇದೀಗ ರಾಜಸ್ಥಾನ ವಿಧಾನಸಭಾ ಚುನಾವಣೆಗೆ (Rajasthan Assembly Elections) ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ, ಅದರಲ್ಲಿ 7 ಸಂಸದರನ್ನು ಕಣಕ್ಕಿಳಿಸಿದೆ ಎಂದು ವರದಿ ಹೇಳಿದೆ. ಈ ಪಟ್ಟಿಯಲ್ಲಿ 7 ಸಂಸದರು ಸೇರಿದಂತೆ ಒಟ್ಟು 41 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಬಾರಿಯ ರಾಜಸ್ಥಾನ ಚುನಾವಣೆಯಲ್ಲಿ ಭಾರೀ ಪೈಪೋಟಿ ನಡೆಯಲಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇನ್ನು ಈ ಪಟ್ಟಿಯಲ್ಲಿ ಹಾಲಿ ಸಂಸದರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಸಂಸದರುಗಳಾದ ರಾಜ್ಯವರ್ಧನ್ ಸಿಂಗ್ ರಾಥೋಡ್ ಝೋತ್ವಾರಾದಿಂದ, ದಿಯಾ ಕುಮಾರಿ ವಿದ್ಯಾಧರ್ ನಗರದಿಂದ, ಬಾಬಾ ಬಾಲಕನಾಥ್ ತಿಜಾರಾದಿಂದ, ನರೇಂದ್ರ ಕುಮಾರ್ ಮಾಂಡವಾದಿಂದ, ಡಾ ಕಿರೋಡಿ ಲಾಲ್ ಮೀನಾ ಸವಾಯಿ ಮಾಧೋಪುರದಿಂದ, ಭಾಗೀರಥ್ ಚೌಧರಿ ಕಿಶನ್‌ಗಢದಿಂದ ಮತ್ತು ದೇವ್ಜಿ ಪಟೇಲ್ ಸಂಚೋರ್‌ನಿಂದ ಸ್ಪರ್ಧಿಸಲಿದ್ದಾರೆ.
BJP releases a list of 41 candidates for the upcoming election in Rajasthan.
Rajyavardhan Singh Rathore to contest from Jhotwara, Diya Kumari from Vidhyadhar Nagar, Baba Balaknath from Tijara, Hansraj Meena from Sapotra and Kirodi Lal Meena to contest from Sawai Madhopur. pic.twitter.com/S68CstH35Y
— ANI (@ANI) October 9, 2023
ನವೆಂಬರ್ 23 ರಂದು ರಾಜಸ್ಥಾನದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತಏಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇಂದು ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜಸ್ಥಾನದಲ್ಲಿ 200 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇನ್ನು ಈ ಚುನಾವಣೆ ಭಾರೀ ಕುತೂಹಲ ಸೃಷ್ಟಿಸಿದ್ದು, ಬಿಜೆಪಿ ಮತ್ತು ಪ್ರಸ್ತುತ ಆಡಳಿತ ಪಕ್ಷ ಕಾಂಗ್ರೆಸ್ ನೇರ ನೇರೆ ಹಣಾಹಣಿ ನಡೆಯಲಿದೆ.
ಇದನ್ನೂ ಓದಿ: 64 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ರಾಜನಂದಗಾಂವ್‌ನಿಂದ ರಮಣ್ ಸಿಂಗ್ ಮತ್ತೆ ಸ್ಪರ್ಧೆ
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 100 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 73 ಸ್ಥಾನಗಳಲ್ಲಿ ತೃಪ್ತಿ ಪಡೆದುಕೊಂಡಿತ್ತು. ಇನ್ನು ಬಿಎಸ್ಪಿ 6 ಸ್ಥಾನ, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) 3 ಸ್ಥಾನ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ತಲಾ 2 ಸ್ಥಾನಗಳನ್ನು ಪಡೆದಿತ್ತು. ಇನ್ನು ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕಾದುನೋಡಬೇಕಿದೆ. ಕಾಂಗ್ರೆಸ್ ಆಡಳಿತದ ಅನೇಕ ವೈಪಲ್ಯಗಳು ಇದೆ ಎಂದು ಬಿಜೆಪಿ ಹೇಳಿದೆ. ಜತೆಗೆ ಬಿಜೆಪಿ ಕೂಡ ಭಾರೀ ರಣತಂತ್ರವನ್ನು ಮಾಡಿದ್ದು, ಶತಯಗತಾಯ ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಎಂದು ಶಪಥ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Mon, 9 October 23