ಸಮಾಜವಾದಿ ಪಕ್ಷದ ಎಲ್ಲಾ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಸ್ಥೆಗಳನ್ನು ವಿಸರ್ಜಿಸಿದ ಅಖಿಲೇಶ್ ಯಾದವ್

| Updated By: ರಶ್ಮಿ ಕಲ್ಲಕಟ್ಟ

Updated on: Jul 03, 2022 | 3:46 PM

ಯಾವುದೇ ಅಧಿಕೃತ ಕಾರಣವನ್ನು ನೀಡದಿದ್ದರೂ, ಪಕ್ಷದ ಭದ್ರಕೋಟೆಗಳಾದ ರಾಂಪುರ ಮತ್ತು ಅಜಂಗಢದಲ್ಲಿ ಲೋಕಸಭಾ ಉಪಚುನಾವಣೆ ಸೋಲಿನ ನಂತರ ಎಸ್‌ಪಿಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿ ಈ ಕ್ರಮವನ್ನು ನೋಡಲಾಗಿದೆ.

ಸಮಾಜವಾದಿ ಪಕ್ಷದ ಎಲ್ಲಾ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಸ್ಥೆಗಳನ್ನು ವಿಸರ್ಜಿಸಿದ ಅಖಿಲೇಶ್ ಯಾದವ್
Follow us on

ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು ಯುವಕ ಮತ್ತು ಮಹಿಳಾ ವಿಭಾಗ ಸೇರಿದಂತೆ ಅದರ ಎಲ್ಲಾ ಸಂಘಟನೆಗಳ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಸ್ಥೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾನುವಾರ ವಿಸರ್ಜಿಸಿದ್ದಾರೆ. ಯಾವುದೇ ಅಧಿಕೃತ ಕಾರಣವನ್ನು ನೀಡದಿದ್ದರೂ, ಪಕ್ಷದ ಭದ್ರಕೋಟೆಗಳಾದ ರಾಂಪುರ ಮತ್ತು ಅಜಂಗಢದಲ್ಲಿ ಲೋಕಸಭಾ ಉಪಚುನಾವಣೆ ಸೋಲಿನ ನಂತರ ಎಸ್‌ಪಿಯನ್ನು(SP) ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿ ಈ ಕ್ರಮವನ್ನು ನೋಡಲಾಗಿದೆ.ಪಕ್ಷದ ಉತ್ತರ ಪ್ರದೇಶ ಅಧ್ಯಕ್ಷ ನರೇಶ್ ಉತ್ತಮ್ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಪಕ್ಷ ಹೇಳಿದೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಪಕ್ಷದ ರಾಜ್ಯಾಧ್ಯಕ್ಷರನ್ನು ಹೊರತುಪಡಿಸಿ, ತಕ್ಷಣವೇ ಜಾರಿಗೆ ಬರುವಂತೆ ಪಕ್ಷದ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಸ್ಥೆಗಳನ್ನು ವಿಸರ್ಜಿಸಿದ್ದಾರೆ ಎಂದು ಪಕ್ಷ ಟ್ವೀಟ್ ಮಾಡಿದೆ.


ಪಕ್ಷವು 2024 ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಬಿಜೆಪಿಯನ್ನು ಪೂರ್ಣ ಬಲದಿಂದ ಎದುರಿಸಲು ಸಂಘಟನೆಯನ್ನು ಬಲಪಡಿಸುವತ್ತ ಗಮನ ಹರಿಸಲಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

Published On - 3:27 pm, Sun, 3 July 22