ಮಂಗಳೂರು: ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್(Satyajit Surathkal) ಭದ್ರತೆ ವಾಪಾಸ್ ವಿಚಾರ ‘ನನ್ನ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಲಾಗಿದೆ, ನನಗೆ ನೀಡಿದ ಭಧ್ರತೆಯನ್ನು ಬಿಜೆಪಿ(BJP) ರಾಜ್ಯಾಧ್ಯಕ್ಷ ತಪ್ಪಿಸಿದ್ದಾರೆ ಎನ್ನುವ ಮೂಲಕ ನಳಿನ್ ಕುಮಾರ್ ಕಟೀಲ್(Nalin Kumar Kateel) ವಿರುದ್ಧ ಸತ್ಯಜಿತ್ ಕಿಡಿಕಾರಿದ್ದಾರೆ. ‘ಗೃಹ ಸಚಿವರು ಭದ್ರತೆ ನೀಡಲು ಹೇಳಿದರೂ ಕೊಟ್ಟಿಲ್ಲ. ಅಂದರೆ ಅದಕ್ಕೆ ನೇರ ಕಾರಣ ರಾಜ್ಯಾಧ್ಯಕ್ಷರೇ ಎಂದಿದ್ದಾರೆ.
‘ನಾನು ರಾಜ್ಯಾದ್ಯಂತ ಸಂಘಟನೆಯ ವಿಚಾರವಾಗಿ ಪ್ರವಾಸ ಮಾಡುತ್ತೇನೆ. ಮೂಲಭೂತವಾದಿಗಳಿಂದ ನಿರಂತರವಾಗಿ ಬೆದರಿಕೆ ಇದೆ. 16 ವರ್ಷದ ಹಿಂದೆ ಸರ್ಕಾರವೇ ನನಗೆ ‘ಗನ್ ಮ್ಯಾನ್’ ನೀಡಿತ್ತು. ಆದರೆ ಈಗ ಏಕಾಏಕಿ ಗನ್ ಮ್ಯಾನ್ ಹಿಂಪಡೆಯಲಾಗಿದೆ. ಮೂಲಭೂತವಾದಿಗಳಿಂದ ಹತ್ಯೆಯಾದರೆ ಅದಕ್ಕೆ ನೇರ ಹೊಣೆ ಬಿಜೆಪಿ ರಾಜ್ಯಾಧ್ಯಕ್ಷರು. ನನ್ನ ಹತ್ಯೆಯಾದರೆ ನನ್ನ ಅಂತಿಮ ದರ್ಶನಕ್ಕೆ ಬಿಜೆಪಿ ಮುಖಂಡರು, ಸಂಘ ಪರಿವಾರದ ನಾಯಕರಿಗೆ ಅವಕಾಶ ಇಲ್ಲ ಎನ್ನುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನಾನು ಯಾರಿಗೂ ಪ್ರತಿಸ್ಪರ್ಧಿಯಾಗಲು ಬಯಸುವುದಿಲ್ಲ, ಬಿಜೆಪಿಯಲ್ಲಿ ಸಿಕ್ಕಾಪಟ್ಟೆ ನಾಯಕರಿದ್ದಾರೆ: ಬಿಎಲ್ ಸಂತೋಷ್
‘ಈ ಬಗ್ಗೆ ಕಾರ್ಯಕರ್ತರಿಗೆ ಸೂಚನೆ ನೀಡುತ್ತಿದ್ದೇನೆ. ಹಿಂದುತ್ವಕ್ಕಾಗಿ ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ. ಈಗ ಹಿಂದುತ್ವದ ನೈಜ ಹೋರಾಟಗಾರರಿಗೆ ಬೆಲೆ ಇಲ್ಲ. ಹಿಂದುತ್ವ ಸ್ವಾರ್ಥ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಹಿಂದೂ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದೇನೆ.ನಿಮ್ಮ ಜೀವನಕ್ಕೆ ನೀವೇ ಹೊಣೆಗಾರರು, ಯಾರನ್ನೂ ನಂಬಿ ಹೋರಾಟಕ್ಕೆ ಇಳಿಯಬೇಡಿ. ಹಿಂದೂ ಸಂಘಟನೆಯಲ್ಲಿದ್ದವರು ಯಾವುದೇ ಕಾರಣಕ್ಕೂ ಪಕ್ಷ ಹಾಗೂ ಸರ್ಕಾರದ ವಿರುದ್ಧ ಮಾತನಾಡಬಾರದು, ಮಾತನಾಡಿದವರ ವಿರುದ್ಧ ಷಡ್ಯಂತ್ರ ಮಾಡಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಂಗಳೂರಿನಲ್ಲಿ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Fri, 21 April 23