ರಿಲ್ಯಾಕ್ಸ್ ಮೂಡಿಗೆ ಜಾರಿದ ರಾಜಹುಲಿ ಯಡಿಯೂರಪ್ಪ, ಕುಟುಂಬದೊಂದಿಗೆ ಫ್ರೀಡಂ ಪಾರ್ಕ್, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ

Rakesh Nayak Manchi

|

Updated on:Feb 25, 2023 | 9:03 PM

ರಾಜಹುಲಿ ಎಂದೇ ಖ್ಯಾತಿ ಪಡೆದಿರುವ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ಗುಡ್​ಬೈ ಹೇಳಿ ಇದೀಗ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಅದರಂತೆ ಕುಟುಂಬದೊಂದಿಗೆ ಸುತ್ತಾಟ ಆರಂಭಿಸಿದ್ದಾರೆ.

ಶಿವಮೊಗ್ಗ: ವಿಧಾನಸಭೆಗೆ ವಿದಾಯ ಭಾಷಣದ ಬಳಿಕ ರಿಲ್ಯಾಕ್ಸ್ ಮೂಡಿಗೆ ಜಾರಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು ತಮ್ಮ ಕುಟುಂಬದೊಂದಿಗೆ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್​ ಹಾಗೂ ವಿಮಾನ ನಿಲ್ದಾಣಕ್ಕೆ (Shivamogga Airport) ಭೇಟಿ ನೀಡಿದರು. ಫೆ.27ರಂದು ಶಿವಮೊಗ್ಗದ ನೂತನ ಏರ್​ಪೋರ್ಟ್​​ ಉದ್ಘಾಟನೆ ಹಿನ್ನಲೆ ಏರ್​​ಪೋರ್ಟ್​​ಗೆ ಕುಟುಂಬ ಸಹಿತ ಆಗಮಿಸಿದ ರಾಜಹುಲಿ, ನಿಲ್ದಾಣಕ್ಕೆ ಒಂದು ರೌಂಡ್ ಹಾಕಿ ತೆರಳಿದರು. ಮಾತ್ರವಲ್ಲದೆ ಫ್ರೀಡಂ ಪಾರ್ಕ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡಿದ ಯಡಿಯೂರಪ್ಪ ಅವರು, ಟುವಿ, ಟುವ್ವಿ, ಹಾಡು ಸೇರಿದಂತೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ತಾಲಿಬಾನ್ ಅಲ್ಲ ಅಲ್ಲ ಹಾಡಿಗೆ ಸ್ಟೆಪ್ ಹಾಕಿದ ಮಕ್ಕಳ ನೃತ್ಯವನ್ನು ಕೂಡ ಅವರು ವೀಕ್ಷಿಸಿದರು.

ಇದನ್ನೂ ಓದಿ: ನನ್ನನ್ನು ಹಾಗೂ ಪಕ್ಷವನ್ನು ಕೈಬಿಡದಂತೆ ವೀರಶೈವ ಲಿಂಗಾಯತ ಸಮುದಾಯವನ್ನು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ: ಬಿಎಸ್ ಯಡಿಯೂರಪ್ಪ

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada