ಬಾಗಲಕೋಟೆ: ಸಿದ್ದರಾಮಯ್ಯ (Siddaramaiah) ಅವರು ಯಾರು ಆ್ಯಂಕರಿಂಗ್ ಮಾಡುತ್ತಿದ್ದಾರೆ ಎಂದು ನೋಡಿದ್ದಾರೆ. ಅವರು ಯಾವ ಕೆಟ್ಟ ದೃಷ್ಟಿಯಿಂದ ನೋಡಿಲ್ಲ. ಬಿಜೆಪಿ ನಾಯಕರ ರೀತಿ ಕೆಟ್ಟದಾಗಿ ವರ್ತಿಸಿಲ್ಲ ಎಂದು ವೇದಿಕೆಯಲ್ಲಿ ಸಿದ್ದರಾಮಯ್ಯ ಅವರು ನಿರೂಪಕಿಯನ್ನು ನೋಡಿ ಟ್ರೋಲ್ (Siddaramaiag Troll) ಆದ ವಿಚಾರಕ್ಕೆ ನಿರೂಪಕಿಯೂ ಆಗಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ ಹೇಳಿದ್ದಾರೆ. ಹೊಟ್ಟೆ ಕಿಚ್ಚಿಗೆ ಯಾವುದೇ ಔಷಧವಿಲ್ಲ. ಹೊಟ್ಟೆಕಿಚ್ಚಿನಿಂದ ಟ್ರೋಲ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಲಾವಣ್ಯ ಎಂಬುವರು ಆ್ಯಂಕರಿಂಗ್ ಮಾಡುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಯಾರು ಆ್ಯಂಕರ್ ಅಂತ ನೋಡಿ ಇವರಾ ಅಂತ ಕೈ ಮಾಡಿ ಹೋಗಿದ್ದಾರೆ. ಆದರೆ ಕೆಲವರು ಹೊಟ್ಟೆ ಕಿಚ್ಚಿನಿಂದ ವಿಡಿಯೋವನ್ನು ತಮಗೆ ಬೇಕಾದಂತೆ ಎಡಿಟ್ ಮಾಡಿ ಟ್ರೋಲ್ ಮಾಡಿದ್ದಾರೆ. ನಾನು ಸ್ಥಳದಲ್ಲೇ ಇದ್ದೆ. ಸಿದ್ದರಾಮಯ್ಯ ಎಲ್ಲಾ ಮಹಿಳಾ ನಾಯಕಿಯರನ್ನು ಮಾತಾಡಿಸಿ ನಮಸ್ಕಾರ ಹೇಳಿ ಹೋಗುತ್ತಿದ್ದರು ಎಂದರು.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಬಂದು ಹೋದರೂ ಡಿಕೆ ಶಿವಕುಮಾರ ಮತ್ತು ಸಿದ್ದರಾಮಯ್ಯ ಮಾತ್ರ ‘ನಾನೊಂದು ತೀರ ನೀನೊಂದು ತೀರ!’
ಬಿಜೆಪಿ ಅವರಿಗೆ ಬೇರೆ ಕೆಲಸವಿಲ್ಲ. ಮಹಿಳೆಯರ ಕಷ್ಟ ಗೊತ್ತಿಲ್ಲ. ಬರಿ ಇಂತಹ ಸಣ್ಣ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಾರೆ. ಸಿದ್ದರಾಮಯ್ಯ ಸಿಂಹ ಇದ್ದಹಾಗೆ, ಯಾವಾಗಲೂ ಘರ್ಜಿಸುತ್ತಾರೆ. ಬಿಜೆಪಿಗರಿಗೆ ಮೇಕೆದಾಟು, ಸಿದ್ದರಾಮೋತ್ಸವ, ಭಾರತ ಜೋಡೋ, ಎಸ್ಸಿ ಎಸ್ಟಿ ಸಮಾವೇಶ, ನಾ ನಾಯಕಿ ಸಮಾವೇಶ ಸೇರಿದಂತೆ ಎಲ್ಲ ಕಡೆ ಬೃಹತ್ ಜನ ಬೆಂಬಲ ನೋಡಿ ಈ ತರಹ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ನಿನ್ನೆ ನಡೆದ ನಾ ನಾಯಕಿ ಕಾರ್ಯಕ್ರಮಕ್ಕೆ ಸಚಿವ ಅಶ್ವತ್ಥನಾರಾಯಣ ನಾಲಾಯಕ್ ಅಂದಿದ್ದರು. ನಾಲಾಯಕ್ ಅಂದಂತಹ ಅಶ್ವತ್ಥ ನಾರಾಯಣ ಹಾಗೂ ಬಿಜೆಪಿಗೆ ಜನರು ಬುದ್ದಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ವೇದಿಕೆಯನ್ನು ಆಗಿದ್ದೇನು?
ಬೆಂಗಳೂರು ನಗರದ ಅರಮನೆ ಆವರಣದಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸಮಕ್ಷಮ ನಡೆದ ಕೆಪಿಸಿಸಿಯ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಪಕ್ಷದ ಪುರುಷ ನಾಯಕರಿಗೆ ಅವಕಾಶವಿರಲಿಲ್ಲ. ಆದರೆ ಕಾಂಗ್ರೆಸ್ ಜ್ಯೋತಿ ಬೆಳಗಿಸುವ ಸಮಯದಲ್ಲಿ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ವೇದಿಕೆಯಿಂದ ನಿರ್ಗಮಿಸುವಾಗ ಹಿರಿಯ ನಾಯಕಸಿದ್ದರಾಮಯ್ಯ ಕಾರ್ಯಕ್ರಮದನಿರೂಪಕಿಯನ್ನು ಕೆಳಗಿನಿಂದ ಮೇಲೆ, ಮೇಲಿಂದ ಕೆಳಗೆ ನೋಡುತ್ತಾ ಸಾಗುತ್ತಾರೆ. ಅಲ್ಲದೆ ಸ್ವಲ್ಪ ಮುಂದೆ ಹೋಗಿ ಮಹಿಳೆಯ ಮುಖ ನೋಡಿ ಕೈ ತೋರಿಸಿ ವೇದಿಕೆಯಿಂದ ನಿರ್ಗಮಿಸುತ್ತಾರೆ.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ