‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನಿರೂಪಿಕಿಯನ್ನು ಕೆಳಗಿನಿಂದ ಮೇಲೆ, ಮೇಲಿಂದ ಕೆಳಗೆ ಆಶ್ಚರ್ಯಚಕಿತರಾಗಿ ನೋಡಿದ್ದು ಯಾಕೋ?

TV9kannada Web Team

TV9kannada Web Team | Edited By: ಅಕ್ಷಯ್​ ಕುಮಾರ್​​

Updated on: Jan 16, 2023 | 4:44 PM

ಸಿದ್ದರಾಮಯ್ಯ ತನ್ನನ್ನು ಮೇಲಿಂದ ಕೆಳಗಿನವರೆಗೆ ನೋಡುತ್ತಿರುವುದು ನಿರೂಪಕಿಗೂ ಗೊತ್ತಾಗುತ್ತದೆ. ಅವರು ಏನು ಎಂಬಂತೆ ಮಾಜಿ ಮುಖ್ಯಮಂತ್ರಿ ಕಡೆ ನೋಡುತ್ತಾರೆ. ಸಿದ್ದರಾಮಯ್ಯ ಮಾತ್ರ ಏನನ್ನೂ ಹೇಳದೆ, ‘ಏನಮ್ಮಾ ನೀನು...! ಅನ್ನೋ ಥರ ಕೈ ಮಾಡುತ್ತಾ ಮುಂದೆ ಸಾಗುತ್ತಾರೆ.

ಬೆಂಗಳೂರು: ನಗರದ ಅರಮನೆ ಆವರಣದಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ವಾಡ್ರಾ (Priyanka Gandhi Vadra) ಸಮಕ್ಷಮ ನಡೆದ ಕೆಪಿಸಿಸಿಯ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಪಕ್ಷದ ಪುರುಷ ನಾಯಕರಿಗೆ ಅವಕಾಶವಿರಲಿಲ್ಲ. ಆದರೆ ಕಾಂಗ್ರೆಸ್ ಜ್ಯೋತಿ ಬೆಳಗಿಸುವ ಸಮಯದಲ್ಲಿ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ವೇದಿಕೆಯಿಂದ ನಿರ್ಗಮಿಸುವಾಗ ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ಕಾರ್ಯಕ್ರಮದ ನಿರೂಪಕಿಯನ್ನು (anchor) ಕೆಳಗಿನಿಂದ ಮೇಲೆ, ಮೇಲಿಂದ ಕೆಳಗೆ ನೋಡುತ್ತಾ ಸಾಗುತ್ತಾರೆ. ಅವರು ಯಾಕೆ ಹಾಗೆ ನೋಡಿದರೆ ಅಂತ ಅವರಿಂದಲೇ ನಮಗೆ ಗೊತ್ತಾಗಬೇಕು. ನಿರೂಪಕಿ ಮೈಕ್ ಎದುರು ನಿಂತು ಅಪದ್ಧವಾದದ್ದೇನೂ ಹೇಳಲಿಲ್ಲ. ಅಕ್ಕೈ ಪದ್ಮಶಾಲಿ ಅವರು ಸಭೆಯನ್ನು ಉದ್ದೇಶಿಸಿ ಮಾತಾಡಲಿದ್ದಾರೆ ಅಂತ ಹೇಳುವಾಗ ಸಿದ್ದರಾಮಯ್ಯನವರ ಹಿಂಬದಿಯಿಂದ ನೋಡುವ ಕಾರ್ಯಕ್ರಮ ಶುರುವಾಗುತ್ತದೆ. ನಿರೂಪಕಿ ಯಾರು ಅಂತ ಗೊತ್ತಾಗದೆ ಹಾಗೆ ನೋಡಿದರೆ? ಇರಲಿಕ್ಕಿಲ್ಲ. ಯಾಕೆಂದರೆ, ವೇದಿಕೆಗೆ ಬರುವ ಮೊದಲು ಅವರು ಅದರ ಮುಂಭಾಗದ ಸಾಲಿನಲ್ಲಿ ಇತರ ನಾಯಕರೊಂದಿಗೆ ಆಸೀನರಾಗಿದ್ದರು. ಹಾಗಾದರೆ, ಅವರು ಯಾಕೆ ಹಾಗೆ ಆಶ್ಚರ್ಯಚಕಿತರಾಗಿ ನೋಡಿದರು ಅನ್ನೋ ಪ್ರಶ್ನೆ ಹಾಗೆಯೇ ಉಳಿದುಬಿಡುತ್ತದೆ ಮಾರಾಯ್ರೇ.

ಸಿದ್ದರಾಮಯ್ಯ ತನ್ನನ್ನು ಮೇಲಿಂದ ಕೆಳಗಿನವರೆಗೆ ನೋಡುತ್ತಿರುವುದು ನಿರೂಪಕಿಗೂ ಗೊತ್ತಾಗುತ್ತದೆ. ಅವರು ಏನು ಎಂಬಂತೆ ಮಾಜಿ ಮುಖ್ಯಮಂತ್ರಿ ಕಡೆ ನೋಡುತ್ತಾರೆ. ಸಿದ್ದರಾಮಯ್ಯ ಮಾತ್ರ ಏನನ್ನೂ ಹೇಳದೆ, ‘ಏನಮ್ಮಾ ನೀನು…! ಅನ್ನೋ ಥರ ಕೈ ಮಾಡುತ್ತಾ ಮುಂದೆ ಸಾಗುತ್ತಾರೆ. ಅವರು ನೋಡಿದ ಕಾರಣ ಏನೇ ಇರಲಿ ಈ ವಿಡಿಯೋ ಟ್ರೋಲ್ ಆಗೋದು ಅವರ ಬಗ್ಗೆ ಅವರ ‘ನೋಟ’ದ ಬಗ್ಗೆ ವಿಧವಿಧದ ಕಾಮೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ಶತಸಿದ್ದ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada