ಬೆಂಗಳೂರು: ಈ ಬಾರಿಯ ವಿಧಾನ ಸಭಾ ಚುನಾಣೆಯಲ್ಲಿ ಬಹುಮತ ಪಡೆದು ಅಧಿಕಾರ ಮರಳಿ ಪಡೆಯಲು ಕಸರತ್ತು ನಡೆಸಿರುವ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಮತ್ತಷ್ಟು ಚೈತನ್ಯ, ಹುಮ್ಮಸ್ಸು ತುಂಬಲು ಕಾಂಗ್ರೆಸ್ ನಾಯಕಿ ಮತ್ತು ಭಾರತ ಜೋಡೊ ಯಾತ್ರೆಯಲ್ಲಿ ಬ್ಯೂಸಿಯಾಗಿರುವ ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕಾ ಗಾಂಧಿ ವಾಡ್ರಾ (Priyanka Gandhi Vadra) ಇಂದು ಬೆಂಗಳೂರಿಗೆ ಅಗಮಿಸಿ ಕೆಪಿಸಿಸಿ ಹಮ್ಮಿಕೊಂಡಿರುವ ನಾ ನಾಯಕಿ (Na Nayaki) ಸಮಾವೇಶವನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ಕಾರ್ಯಕ್ರಮ ನಗರದ ಅರಮನೆ ಮೈದಾನದಲ್ಲಿ (palace grounds) ನಡೆಯಲಿದೆ. ಪ್ರಿಯಾಂಕಾ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ