ಶಿವಮೊಗ್ಗ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಬಿಜೆಪಿ ನಾಯಕರು ತಪ್ಪಿನಿಂದ ಬಚಾವ್ ಆಗಲು ಕಾಂಗ್ರೆಸ್ (Congress) ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಬೇಡ. ಪ್ರಕರಣದಲ್ಲಿ ಯಾರೇ ಇರಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಕಲಬುರಗಿ ನಗರದ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ. ಬಿಜೆಪಿ ನಾಯಕಿಗೆ ಸೇರಿದ ಶಾಲೆಯಲ್ಲಿ ಅಕ್ರಮ ನಡೆದಿದೆ. ಆಕೆ ತಲೆಮರೆಸಿಕೊಂಡಿದ್ದಾರೆ, ಪತಿಯನ್ನು ಬಂಧಿಸಲಾಗಿದೆ ಎಂದರು.
ಇನ್ನು ಇದೇ ವೇಳೆ ಹರ್ಷ ಕೊಲೆ ಪ್ರಕರಣದ ಬಗ್ಗೆಯೂ ಹೇಳಿಕೆ ನೀಡಿದ ಸಿದ್ದರಾಮಯ್ಯ, ಗಲಾಟೆ ಮಾಡಿದ್ದು, ಶವ ಯಾತ್ರೆ ಮಾಡಿದ್ದು, ಅವರಿಗೆ 25 ಲಕ್ಷ ಕೊಡಿಸಿದ್ದು ಯಾರು? ನಾನು ಹರ್ಷ ಕೊಲೆ ಖಂಡಿಸಿರುವೆ. ಕೊಲೆಗಾರರು ಯಾರೆ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಬಾರದು ಎಂದರು.
ಬೆಳ್ತಂಗಡಿಯಲ್ಲಿ ದಿನೇಶ್ ಕೊಲೆ ನಡೆಯಿತು. ಆತನ ಕೊಲೆ ಮಾಡಿದ್ದು ಭಜರಂಗದಳದವರು. ನರಗುಂದದಲ್ಲಿ ಒಬ್ಬ ಮುಸ್ಲಿಂ ಕೊಲೆ ನಡೆಯಿತು. ಅವನ್ನು ಕೊಲೆ ಮಾಡಿದ್ದು ಶ್ರೀರಾಮ ಸೇನೆಯವರು. ಈ ಕುಟುಂಬಕ್ಕೆ ಎಷ್ಟು ಲಕ್ಷ ಪರಿಹಾರ ಕೊಟ್ಟರಿ? ನಯಾ ಪೈಸಾ ಅವರಿಗೆ ಪರಿಹಾರ ಕೊಟ್ಟಿಲ್ಲ ಅಂತ ವಾಗ್ದಾಳಿ ನಡೆಸಿದರು.
ಯಾವುದೇ ಸಂದರ್ಭದಲ್ಲಿ ಚುನಾವಣೆ ಆದರೆ ನಾವು ಎದುರಿಸಲು ರೆಡಿ. ಚುನಾವಣೆ ಸಿದ್ಧತೆಗಳು ನಡೆಯುತ್ತಿವೆ. ಭ್ರಷ್ಟಾಚಾರವೇ ಅತೀ ದೊಡ್ಡ ಚುನಾವಣೆ ವಿಚಾರ ಆಗಿದೆ. ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಈಗ ಈಶ್ವರಪ್ಪ ಯಾಕೇ ರಾಜೀನಾಮೆ ಕೊಟ್ಟರು? ಸುಮ್ಮ ಸುಮ್ಮನೆ ಖುಷಿಗೆ ರಾಜೀನಾಮೆ ಕೊಟ್ಟರಾ? ಶಿವಮೊಗ್ಗ ಸೇರಿದಂತೆ ಎಲ್ಲಿಯೂ ಪಕ್ಷದಲ್ಲಿ ಅಸಮಾಧಾನ ಇಲ್ಲ. ಮೊದಲು ಶ್ರೀರಾಮ್ ಸೇನೆ, ಬಜರಂಗದಳ, ಹಿಂದೂ ಮಹಾಸಭಾ ಇವರಿಗೆ ಬುಲ್ಡೋಜರ್ ಮಾಡಬೇಕು ಅಂತ ಸಿದ್ದರಾಮಯ್ಯ ಹೇಳಿದರು.
ಹಿಜಾಬ್, ಹಲಾಲ್, ಜಟ್ಕಾ, ಅಜಾನ್ ಈ ವಿಚಾರ ಹುಟ್ಟಿ ಹಾಕಿದ್ದು ಯಾರು? ರಾಜ್ಯದಲ್ಲಿ ಅಶಾಂತಿ ಮಾಡುತ್ತಿರುವವರು ಯಾರು? ಧಾರ್ಮಿಕ ವಿಚಾರ ಕೆರಳಿಸಿ, ಜನರ ಭಾವನೆ ಕೆರಳಿಸವುದು. ಸಂಘ ಪರಿಹಾರದವರು ಈ ಎಲ್ಲ ಕೆಲಸ ಮಾಡಿದ್ದಾರೆ. ಬಜರಂಗದಳ, ಶ್ರೀರಾಮ್ ಸೇನೆ, ಆರ್ಎಸ್ಎಸ್ ಇವರಿಂದ ಅಶಾಂತಿ ವಾತಾವರಣ ನಿರ್ಮಾಣವಾಗಿದೆ ಅಂತ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
WhatsApp: ಮುಂದಿನ ಅಪ್ಡೇಟ್ಗೆ ವಾಟ್ಸ್ಆ್ಯಪ್ ಗ್ರೂಪ್ ಕಾಲ್ನಲ್ಲಿ ಬರಲಿದೆ ಅಚ್ಚರಿಯ ಫೀಚರ್
Published On - 2:01 pm, Sun, 24 April 22