ಮಂಗಳೂರಿನಲ್ಲಿ ಆದಿವಾಸಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ! ಬಿಜೆಪಿ ನಾಯಕ ಸೇರಿ 9 ಜನರ ವಿರುದ್ಧ ಕೇಸ್ ದಾಖಲು

ಮಂಗಳೂರಿನಲ್ಲಿ ಆದಿವಾಸಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ! ಬಿಜೆಪಿ ನಾಯಕ ಸೇರಿ 9 ಜನರ ವಿರುದ್ಧ ಕೇಸ್ ದಾಖಲು
ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ

ಆದಿವಾಸಿ ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ವಿಡಿಯೋ ಸೆರೆಯಾಗಿದೆ. ಹಲ್ಲೆಗೊಳಗಾದ ಮಹಿಳೆ ಕುಟುಂಬ 94ಸಿ ಅಡಿ ಅರ್ಜ ಸಲ್ಲಿಸಿದ್ದರು. ಜಾಗ ಅಳತೆ ಮಾಡಲೆಂದು ಅಧಿಕಾರಿಗಲೂ ಸಹ ಬಂದಿದ್ದರು.

TV9kannada Web Team

| Edited By: sandhya thejappa

Apr 24, 2022 | 11:28 AM

ಮಂಗಳೂರು: ಆದಿವಾಸಿ ಮಹಿಳೆಯನ್ನು (Woman) ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಗುರಿಪಳ್ಳ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಬಿಜೆಪಿ ನಾಯಕ ಸೇರಿದಂತೆ ಸುಮಾರು 9 ಜನರ ವಿರುದ್ಧ ಕೇಸ್ ದಾಖಲಾಗಿದೆ. ಸಂದೀಪ್, ಸಂತೋಷ್, ಗುಲಾಬಿ, ಕುಸುಮಾ, ಲೋಕಯ್ಯ, ಸುಗುಣ, ಅನಿಲ್, ಲಲಿತಾ, ಚನ್ನಕೇಶವ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 323, 324, 504, 354, ಐಪಿಸಿ ಸೆಕ್ಷನ್ 354(B), 506, 149ರಡಿ ಪ್ರಕರಣ ದಾಖಲಾಗಿದೆ.

ಬಿಜೆಪಿ ST ಮೋರ್ಚಾ ಅಧ್ಯಕ್ಷ ಸೇರಿ ಹಲವರಿಂದ ಕೃತ್ಯ ಆರೋಪ: ಆದಿವಾಸಿ ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ವಿಡಿಯೋ ಸೆರೆಯಾಗಿದೆ. ಹಲ್ಲೆಗೊಳಗಾದ ಮಹಿಳೆ ಕುಟುಂಬ 94ಸಿ ಅಡಿ ಅರ್ಜ ಸಲ್ಲಿಸಿದ್ದರು. ಜಾಗ ಅಳತೆ ಮಾಡಲೆಂದು ಅಧಿಕಾರಿಗಲೂ ಸಹ ಬಂದಿದ್ದರು. ಜಾಗದ ಸಂಬಂಧ ಇನ್ನೊಂದು ತಂಡ ತಕರಾರು ತೆಗೆದಿದ್ದರು. ಇದರಿಂದ ಅಧಿಕಾರಿಗಳು ಅಳತೆ ಸಾಧ್ಯವಿಲ್ಲವೆಂದು ಹಿಂದಿರುಗಿದ್ದರು. ಅಧಿಕಾರಿಗಳು ತೆರಳಿದ ನಂತರ ಆದಿವಾಸಿ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಬಿಜೆಪಿ ST ಮೋರ್ಚಾ ಅಧ್ಯಕ್ಷ ಸೇರಿ ಹಲವರಿಂದ ಕೃತ್ಯ ನಡೆದಿರುವ ಆರೋಪ ಇದೆ.

16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಹಾವೇರಿ: 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಹಿರೇಕೆರೂರು ತಾಲೂಕಿನ ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಯನ್ನ ಬೆತ್ತಲೆ ಮಾಡಿ ಕೈಗೆ ಹಗ್ಗ ಕಟ್ಟಿ ಊರಲ್ಲಿ ಮೆರವಣಿಗೆ‌ ಮಾಡಿದ್ದಾರೆ. ಏಪ್ರಿಲ್​​ 21ರಂದು ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಊರಲ್ಲಿ ಮೆರವಣಿಗೆ ಮಾಡಿ ಜೀವಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.ಈ ಸಂಬಂಧ ಆರೋಪಿ ತಂದೆಯಿಂದ ಪ್ರತಿದೂರು ದಾಖಲಾಗಿದೆ.

ಗುಂಪುಗಳ ನಡುವೆ ಭೀಕರ ಕಾದಾಟ: ರಾಯಚೂರು: ಎರಡು ಗುಂಪುಗಳ ನಡುವೆ ಭೀಕರ ಕಾದಾಟ ನಡೆದಿದೆ. ಸಲಾಕೆ, ಕೊಡಲಿ, ಕಟ್ಟಿಗೆ, ಕಲ್ಲಿನಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮುಂಡರಗಿ ತಾಂಡಾದಲ್ಲಿ ಈ ಘಟನೆ ಸಂಭವಿಸಿದೆ. ಹೊಲದಲ್ಲಿ ಮೇಕೆಗಳನ್ನ ಬಿಟ್ಟಿದ್ದಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಆಗಿದೆ. ಕಾಳಗದಲ್ಲಿ ಓರ್ವನ ತಲೆಗೆ ಗಂಭೀರಗಾಯವಾಗಿದ್ದು, ಓರ್ವಳ ಕಾಲು ಮುರಿದಿದೆ. ಏಪ್ರಿಲ್ 3 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ

ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಪ್ಲಾಸ್ಟಿಕ್​ ನೀರಿನ ಬಾಟಲಿ, ಹೂವಿನ ಬೊಕ್ಕೆ ಬಳಸುವಂತಿಲ್ಲ; ಈ ರಾಜ್ಯದ ಆರೋಗ್ಯ ಸಚಿವರಿಂದ ಆದೇಶ

ಸುದೀಪ್​ ಜೀವನದಲ್ಲಿ ಬದಲಾವಣೆಗೆ ಕಾರಣವಾದ ಇಬ್ಬರು ಡೈರೆಕ್ಟರ್​ ಇವರು; ವೇದಿಕೆಯಲ್ಲಿ ವಿವರಿಸಿದ ಕಿಚ್ಚ

Follow us on

Related Stories

Most Read Stories

Click on your DTH Provider to Add TV9 Kannada