ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಪ್ಲಾಸ್ಟಿಕ್ ನೀರಿನ ಬಾಟಲಿ, ಹೂವಿನ ಬೊಕ್ಕೆ ಬಳಸುವಂತಿಲ್ಲ; ಈ ರಾಜ್ಯದ ಆರೋಗ್ಯ ಸಚಿವರಿಂದ ಆದೇಶ
ಹೊಸ ಆದೇಶದ ಅನ್ವಯ, ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಪ್ಲಾಸ್ಟಿಕ್ನ ವಸ್ತುಗಳು ಬಳಕೆಯಾಗುವಂತಿಲ್ಲ. ಅತಿಥಿಗಳಿಗೆ, ಆಮಂತ್ರಿತರಿಗೆ ನೀಡಲು ಹೂವಿನ ಬೊಕ್ಕೆಗಳನ್ನೂ ತರುವಂತಿಲ್ಲ.
ಆರೋಗ್ಯ ಮತ್ತು ಕುಟುಂಬ ಇಲಾಖೆಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮದಲ್ಲಿ ಹೂವಿನ ಬೊಕ್ಕೆಗಳನ್ನು ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಕೆ ಮಾಡಬಾರದು ಎಂದು ಪಂಜಾಬ್ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಆದೇಶಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ನಿರ್ದೇಶನಾಲಯ, ಇಲಾಖೆಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮಗಳು, ಸಮಾರಂಭದಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಇಡುವಂತಿಲ್ಲ ಮತ್ತು ಹೂವಿನ ಬೊಕ್ಕೆಗಳನ್ನು ತರುವಂತಿಲ್ಲ ಎಂದು ಆರೋಗ್ಯ, ಕುಟುಂಬ ಮತ್ತು ಕಲ್ಯಾಣ ಇಲಾಖೆ ಸಚಿವರು ಹೇಳಿದ್ದಾಗಿ ತಿಳಿಸಿದೆ.
ಪ್ಲಾಸ್ಟಿಕ್ನಿಂದಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಅದನ್ನು ನಿಯಂತ್ರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ಲಾಸ್ಟಿಕ್ನಿಂದಾಗಿ ಪರಿಸರ ಮತ್ತು ಮಾನವರ ಆರೋಗ್ಯ ಹಾಳಾಗುತ್ತಿದೆ. ಪಂಜಾಬ್ನಲ್ಲಿ ವರ್ಷಕ್ಕೆ 50 ಸಾವಿರ ಟನ್ಗಳಷ್ಟು ಏಕಬಳಕೆ ಪ್ಲಾಸ್ಟಿಕ್ಗಳು ಸಿಗುತ್ತಿವೆ. ಅಂದರೆ ಮತ್ತೆ ಸಂಸ್ಕರಿಸಲಾಗದ ಬಾಟಲಿ, ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ ಶೇ.50ರಷ್ಟು ಏರಿದೆ. ಈ ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ಹೀಗೆ ಕ್ರಮ ಕೈಗೊಂಡಿದ್ದಾಗಿ ಪಂಜಾಬ್ ಆರೋಗ್ಯ ಸಚಿವ ಡಾ. ವಿಜಯ್ ಸಿಂಗ್ಲಾ ತಿಳಿಸಿದ್ದಾರೆ.
Punjab Government’s Directorate of Health & Family Welfare has issued an order regarding discontinuing the use of bouquets and plastic bottles in official events. pic.twitter.com/tYotSOxpwW
— ANI (@ANI) April 23, 2022
ಈಗ ಹೊಸ ಆದೇಶದ ಅನ್ವಯ, ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಪ್ಲಾಸ್ಟಿಕ್ನ ವಸ್ತುಗಳು ಬಳಕೆಯಾಗುವಂತಿಲ್ಲ. ಅತಿಥಿಗಳಿಗೆ, ಆಮಂತ್ರಿತರಿಗೆ ನೀಡಲು ಹೂವಿನ ಬೊಕ್ಕೆಗಳನ್ನೂ ತರುವಂತಿಲ್ಲ. ಈ ಆದೇಶವನ್ನು ಇಲಾಖೆಯ ನಿರ್ದೇಶಕರಿಂದ ಹಿಡಿದು, ಎಲ್ಲ ಸಿವಿಲ್ ಸರ್ಜನ್ಗಳೂ ಪಾಲನೆ ಮಾಡಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ: ಸುದೀಪ್ ಜೀವನದಲ್ಲಿ ಬದಲಾವಣೆಗೆ ಕಾರಣವಾದ ಇಬ್ಬರು ಡೈರೆಕ್ಟರ್ ಇವರು; ವೇದಿಕೆಯಲ್ಲಿ ವಿವರಿಸಿದ ಕಿಚ್ಚ