ರಾಜಕಾರಣಕ್ಕೆ ಪಕ್ಷಾಂತರವೇ ದೊಡ್ಡ ಸಮಸ್ಯೆ: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು
ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷಗಳಿಗೆ ಹೋಗುತ್ತಾರೆ. ಪಕ್ಷಾಂತರ ಮಾಡಿ ಬರುವವರಿಗೆ ಯಾವುದೇ ಹುದ್ದೆ ನೀಡಬಾರದು ಎಂದು ಅವರು ಒತ್ತಾಯಿಸಿದರು.
ಬೆಂಗಳೂರು: ಇಂದಿನ ರಾಜಕಾರಣದಲ್ಲಿ ಪಕ್ಷಾಂತರವೇ ದೊಡ್ಡ ಸಮಸ್ಯೆಯಾಗಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟರು. ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರಿಗೆ ಪಕ್ಷಾಂತರ ಮಾಡುವುದೇ ಕೆಲಸವಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯ ಆಶಯವು ಸಂಪೂರ್ಣವಾಗಿ ಸಫಲವಾಗಿಲ್ಲ. ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷಗಳಿಗೆ ಹೋಗುತ್ತಾರೆ. ಪಕ್ಷಾಂತರ ಮಾಡಿ ಬರುವವರಿಗೆ ಯಾವುದೇ ಹುದ್ದೆ ನೀಡಬಾರದು. ಕಾನೂನಿನಲ್ಲಿ ಸ್ಪಷ್ಟತೆ ಇದ್ದರೆ ಇದಕ್ಕೆ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟರು. ಮಾಧ್ಯಮಗಳಲ್ಲಿ ಸುದ್ದಿ ಮತ್ತು ಅಭಿಪ್ರಾಯ (ನ್ಯೂಸ್ ಅಂಡ್ ವೀವ್ಸ್) ನಡುವೆ ಅಂತರ ಇರಬೇಕು. ಇವೆರೆಡನ್ನೂ ಒಂದೇ ಮಾಡಿದರೆ ನ್ಯಾಯ ಒದಗಿಸಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಲೋಕಸಭೆ ಕಲಾಪವನ್ನು ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರೂ ನೋಡುತ್ತಿರುತ್ತಾರೆ. ಅಲ್ಲಿ ನಡೆಯುವ ಕೆಳಹಂತದ ನಡವಳಿಕೆಗಳನ್ನು ಹೇಳುವುದಕ್ಕೂ ಸಾಧ್ಯವಿಲ್ಲ. ಜನರ ಹಿತಕ್ಕೆ ಧಕ್ಕೆ ತರುವ ಕೆಟ್ಟ (ಅಬ್ಸಸ್ಟ್ರಕ್ಟಿವ್ ನೆಗೆಟಿವ್) ಸುದ್ದಿಗಳಿಗೆ ಈಗ ಹೆಚ್ಚಿನ ಮಾನ್ಯತೆ ಸಿಗುತ್ತಿದೆ. ಯಾರೋ ಒಬ್ಬ ಜನಪ್ರತಿನಿಧಿ ಒಳ್ಳೆಯ ಭಾಷಣ ಮಾಡಿದರೆ ಮಾಧ್ಯಮಗಳು ಅದನ್ನು ಪ್ರಧಾನವಾಗಿ ಬಿಂಬಿಸುವುದಿಲ್ಲ. ಜನಪ್ರತಿನಿಧಿಗಳ ಉತ್ತಮ ಕಾರ್ಯಗಳನ್ನೂ ಕೂಡ ಮಾಧ್ಯಮಗಳು ತೋರಿಸಬೇಕು. ಮೀಡಿಯಾ ಹೆಡ್ಲೈನ್ಗಳು ಈಗ ಡೆಡ್ಲೈನ್ಗಳಾಗಿವೆ ಎಂದರು.
ಇಂದು ಪಂಚಾಯತ್ ರಾಜ್ ದಿವಸ. ಭಾರತ ದೇಶವು ಮೂರು ಹಂತದ ಆಡಳಿತ ವ್ಯವಸ್ಥೆಯನ್ನು (ಥ್ರಿ ಟಯರ್ ಸಿಸ್ಟಂ) ಅಳವಡಿಸಿಕೊಂಡಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಭದ್ರಗೊಳಿಸುವಲ್ಲಿ ಈ ವ್ಯವಸ್ಥೆ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಪಂಚಾಯತ್ ರಾಜ್ ವ್ಯವಸ್ಥೆ ಸದೃಢಗೊಳಿಸಬೇಕು ಎಂದು ರಾಜ್ಯಗಳಿಗೆ ಕರೆ ನೀಡುತ್ತೇನೆ. ದೇಶದ ಬೆಳವಣಿಗೆಯಲ್ಲಿ ಮಾಧ್ಯಮಗಳು ಸಹ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಇನ್ಫರ್ಮೇಶನ್ ಅನ್ನು ಕನ್ಫರ್ಮೇಶನ್ ಜೊತೆಗೆ ಜನರಿಗೆ ತಲುಪಿಸಬೇಕು.
ಕರ್ನಾಟಕ ಜನರ ಸ್ನೇಹಪರ ಮನೋಭಾವ ನನಗೆ ಬಹಳ ಇಷ್ಟ. ಜನಾರ್ದನ ಹೊಟೇಲ್ ದೋಸೆ ನನ್ನ ಫೆವರಿಟ್. ಇದೊಂದು ಸುಂದರ ನಗರ, ಸುಂದರ ಸ್ಥಳ. ಕಾರ್ಯರೂಪದಲ್ಲಿರುವ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ನಮ್ಮದು. ಇಲ್ಲಿ ಪ್ರಜಾಪ್ರಭುತ್ವ ಸರಿಯಾಗಿ ಕೆಲಸ ಮಾಡಬೇಕಾದರೆ ಮಾಧ್ಯಮದ ಪಾತ್ರ ನಿರ್ಣಾಯಕವಾಗಿದೆ. ಈಗ ಎಲ್ಲ ಕ್ಷೇತ್ರಗಳಲ್ಲೂ ನೈತಿಕತೆ ಕುಸಿಯುತ್ತಿದೆ. ಜಾತಿ, ಸಮುದಾಯ, ಅಪರಾಧ, ಹಣದ ಅಕ್ರಮ ಬಳಕೆಯ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಎಲ್ಲರೂ ಪ್ರವೇಶ ಪಡೆಯುತ್ತಿದ್ದಾರೆ ಎಂದು ವಿಷಾದಿಸಿದರು.
ಬೆಂಗಳೂರು ಪ್ರೆಸ್ಕ್ಲಬ್ಗೆ ಭೇಟಿ ಭೇಟಿ ನೀಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಲ್ಲಿನ ರಿಜಿಸ್ಟರ್ನಲ್ಲಿ ಸಹಿ ಮಾಡಿದರು. ನಂತರ ಕ್ಲಬ್ ಆವರಣದಲ್ಲಿ ಶ್ರೀಗಂಧದ ಸಸಿ ನೆಟ್ಟು ನೀರೆರೆದರು. ಈ ವೇಳೆ ಪ್ರೆಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ಎಚ್.ವಿ.ಕಿರಣ್, ಪ್ರೆಸ್ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮತ್ತು ಪ್ರೆಸ್ಕ್ಲಬ್ ಪದಾಧಿಕಾರಿಗಳು, ವಿವಿಧ ಪತ್ರಿಕೆಗಳ ಸಂಪಾದಕರು, ಸುದ್ದಿಮಾಧ್ಯಮಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
The Vice President, Shri M. Venkaiah Naidu being welcomed by the Governor of Karnataka, Shri Thaawarchand Gehlot, Minister of Youth Empowerment and Sports, Dr. Narayana Gowda and other dignitaries on his arrival in Bengaluru today. pic.twitter.com/phRhMqrEhr
— Vice President of India (@VPSecretariat) April 23, 2022
ಇದನ್ನೂ ಓದಿ: viral video: ಇದು ಮುಖವಾಡವೋ ಅಥವಾ ಗಡ್ಡವೋ..! ಗೊಂದಕ್ಕೀಡಾದ ಸಭಾಪತಿ ವೆಂಕಯ್ಯ ನಾಯ್ಡು
ಇದನ್ನೂ ಓದಿ: ಶಿಕ್ಷಣವನ್ನು ಕೇಸರಿಕರಣಗೊಳಿಸುವ ಬಗ್ಗೆ ಆರೋಪವೇಕೆ, ಅದರಲ್ಲಿ ತಪ್ಪೇನಿದೆ?: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು