AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣವನ್ನು ಕೇಸರಿಕರಣಗೊಳಿಸುವ ಬಗ್ಗೆ ಆರೋಪವೇಕೆ, ಅದರಲ್ಲಿ ತಪ್ಪೇನಿದೆ?: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ನಾವು ನಮ್ಮ ಪರಂಪರೆ, ನಮ್ಮ ಸಂಸ್ಕೃತಿ, ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಬೇರುಗಳಿಗೆ ಹಿಂತಿರುಗಬೇಕು. ನಾವು ನಮ್ಮ ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸಬೇಕು ಮತ್ತು ನಮ್ಮ ಮಕ್ಕಳಿಗೆ ಅವರ ಭಾರತೀಯ ಗುರುತಿನ ಬಗ್ಗೆ ಹೆಮ್ಮೆ ಪಡುವಂತೆ ಕಲಿಸಬೇಕು.

ಶಿಕ್ಷಣವನ್ನು ಕೇಸರಿಕರಣಗೊಳಿಸುವ ಬಗ್ಗೆ ಆರೋಪವೇಕೆ, ಅದರಲ್ಲಿ ತಪ್ಪೇನಿದೆ?: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Mar 19, 2022 | 5:19 PM

Share

ಹರಿದ್ವಾರ( ಉತ್ತರಾಖಂಡ): ಭಾರತದ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು(M Venkaiah Naidu)  ಅವರು ಇಂದು ದೇಶದ ಜನರು ತಮ್ಮ “ವಸಾಹತುಶಾಹಿ ಮನಸ್ಥಿತಿ” (colonial mindset) ತ್ಯಜಿಸಿ ತಮ್ಮ ಸ್ವಂತ ಗುರುತಿನ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಯಬೇಕೆಂದು ಕೇಳಿಕೊಂಡರು. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯನ್ನು(Macaulay system of education) ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಕರೆ ನೀಡಿದ ಅವರು, ದೇಶದಲ್ಲಿ ವಿದೇಶಿ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಿ ಶಿಕ್ಷಣವನ್ನು ಗಣ್ಯರಿಗೆ ಸೀಮಿತಗೊಳಿಸಿದರು. “ಶತಮಾನಗಳ ವಸಾಹತುಶಾಹಿ ಆಳ್ವಿಕೆಯು ನಮ್ಮನ್ನು ಕೀಳು ಜನಾಂಗವಾಗಿ ನೋಡುವುದನ್ನು ಕಲಿಸಿತು. ನಮ್ಮದೇ ಸಂಸ್ಕೃತಿ, ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಧಿಕ್ಕರಿಸಲು ನಮಗೆ ಕಲಿಸಲಾಯಿತು. ಇದು ರಾಷ್ಟ್ರವಾಗಿ ನಮ್ಮ ಬೆಳವಣಿಗೆಯನ್ನು ನಿಧಾನಗೊಳಿಸಿತು. ನಮ್ಮ ಶಿಕ್ಷಣ ಮಾಧ್ಯಮವಾಗಿ ವಿದೇಶಿ ಭಾಷೆಯ ಹೇರಿಕೆಯು ಶಿಕ್ಷಣವನ್ನು ಸಮಾಜದ ಒಂದು ಸಣ್ಣ ವರ್ಗಕ್ಕೆ ಸೀಮಿತಗೊಳಿಸಿತು. ಇದು ಹೆಚ್ಚಿನ ಜನಸಂಖ್ಯೆಯ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹರಿದ್ವಾರದಲ್ಲಿರುವ ದೇವ ಸಂಸ್ಕೃತಿ ವಿಶ್ವ ವಿದ್ಯಾಲಯದಲ್ಲಿ ಸೌತ್ ಏಷ್ಯನ್ ಇನ್ಸಿಟ್ಯೂಟ್ ಆಫ್ ಪೀಸ್ ಆಂಡ್ ರಿಕಾನ್ಸಿಲಿಷನ್​​ಯನ್ನು ಉದ್ಘಾಟಿಸಿದ ನಂತರ ಉಪರಾಷ್ಟ್ರಪತಿ ನಾಯ್ಡು ಹೇಳಿದರು.”ನಾವು ನಮ್ಮ ಪರಂಪರೆ, ನಮ್ಮ ಸಂಸ್ಕೃತಿ, ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಬೇರುಗಳಿಗೆ ಹಿಂತಿರುಗಬೇಕು. ನಾವು ನಮ್ಮ ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸಬೇಕು ಮತ್ತು ನಮ್ಮ ಮಕ್ಕಳಿಗೆ ಅವರ ಭಾರತೀಯ ಗುರುತಿನ ಬಗ್ಗೆ ಹೆಮ್ಮೆ ಪಡುವಂತೆ ಕಲಿಸಬೇಕು. ನಾವು ಸಾಧ್ಯವಾದಷ್ಟು ಭಾರತೀಯ ಭಾಷೆಗಳನ್ನು ಕಲಿಯಬೇಕು. ನಾವು ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ಜ್ಞಾನದ ನಿಧಿಯಾಗಿರುವ ನಮ್ಮ ಧರ್ಮಗ್ರಂಥಗಳನ್ನು ತಿಳಿಯಲು ನಾವು ಸಂಸ್ಕೃತವನ್ನು ಕಲಿಯಬೇಕು,’’ ಎಂದು ಉಪರಾಷ್ಟ್ರಪತಿ ಹೇಳಿದರು.

ಮಾತೃಭಾಷೆಯನ್ನು ಪ್ರಚಾರ ಮಾಡಲು ಯುವಕರನ್ನು ಪ್ರೋತ್ಸಾಹಿಸಿದ ಅವರು, “ಎಲ್ಲಾ ಗ್ಯಾಜೆಟ್ ಅಧಿಸೂಚನೆಗಳನ್ನು ಆಯಾ ರಾಜ್ಯದ ಮಾತೃಭಾಷೆಯಲ್ಲಿ ಹೊರಡಿಸುವ ದಿನಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ. ನಿಮ್ಮ ಮಾತೃಭಾಷೆಯು ನಿಮ್ಮ ದೃಷ್ಟಿ ಇದ್ದಂತೆ, ಆದರೆ ವಿದೇಶಿ ಭಾಷೆಯ ಜ್ಞಾನವು ನಿಮ್ಮ ಕನ್ನಡಕವಿದ್ದಂತೆ.” ಶಿಕ್ಷಣ ವ್ಯವಸ್ಥೆಯ ಭಾರತೀಕರಣವು ಭಾರತದ ಹೊಸ ಶಿಕ್ಷಣ ನೀತಿಯ ಕೇಂದ್ರವಾಗಿದೆ, ಇದು ಮಾತೃಭಾಷೆಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ಉಪರಾಷ್ಟ್ರಪತಿ ನಾಯ್ಡು ಹೇಳಿದರು. ಭಾರತಕ್ಕೆ ಬರುವ ವಿದೇಶಿ ಗಣ್ಯರು ತಮ್ಮ ಭಾಷೆಯ ಬಗ್ಗೆ ಹೆಮ್ಮೆ ಪಡುವ ಕಾರಣ ತಿಳಿದಿದ್ದರೂ ಇಂಗ್ಲಿಷ್ ಬದಲಿಗೆ ತಮ್ಮ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ ಎಂದು ಅವರು ಹೇಳಿದರು.

ಶಿಕ್ಷಣವನ್ನು ಕೇಸರಿಕರಣಗೊಳಿಸುವ ಬಗ್ಗೆ ಆರೋಪವೇಕೆ, ಆದರೆ ಕೇಸರಿಯಲ್ಲಿ ತಪ್ಪೇನು? ಸರ್ವೇ ಭವಂತು ಸುಖಿನಃ (ಎಲ್ಲರೂ ಸಂತೋಷವಾಗಿರಲಿ) ಮತ್ತು ವಸುಧೈವ್ ಕುಟುಂಬಕಂ (ಜಗತ್ತೇ ಒಂದು ಕುಟುಂಬ) ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಅಡಕವಾಗಿರುವ ತತ್ತ್ವಚಿಂತನೆಗಳು ಇಂದಿಗೂ ಭಾರತದ ವಿದೇಶಾಂಗ ನೀತಿಯ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ಉಪರಾಷ್ಟ್ರಪತಿ ನಾಯ್ಡು ಹೇಳಿದರು.

“ಭಾರತವು ಸಾಮಾನ್ಯ ಬೇರುಗಳನ್ನು ಹೊಂದಿರುವ ಬಹುತೇಕ ಎಲ್ಲಾ ದಕ್ಷಿಣ ಏಷ್ಯಾದ ದೇಶಗಳೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ. ಸಿಂಧೂ ಕಣಿವೆ ನಾಗರಿಕತೆಯು ಅಫ್ಘಾನಿಸ್ತಾನದಿಂದ ಗಂಗಾ ಬಯಲಿನವರೆಗೆ ವಿಸ್ತರಿಸಿದೆ. ಯಾವುದೇ ದೇಶದ ಮೇಲೆ ಮೊದಲು ದಾಳಿ ಮಾಡದಿರುವ ನಮ್ಮ ನೀತಿಯನ್ನು ಪ್ರಪಂಚದಾದ್ಯಂತ ಗೌರವಿಸಲಾಗುತ್ತದೆ. ಇದು ಯೋಧರ ದೇಶವಾಗಿದೆ.  ಹಿಂಸಾಚಾರಕ್ಕಿಂತ ಅಹಿಂಸೆ ಮತ್ತು ಶಾಂತಿಯನ್ನು ಆರಿಸಿಕೊಂಡ ಮಹಾನ್  ರಾಜ ಅಶೋಕನ ದೇಶ ಇದು.

“ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳಾದ ನಳಂದಾ ಮತ್ತು ತಕ್ಷಶಿಲಾದಲ್ಲಿ ಅಧ್ಯಯನ ಮಾಡಲು ಪ್ರಪಂಚದಾದ್ಯಂತದ ಜನರು ಬಂದರು. ಆದರೆ ಅದರ ಸಮೃದ್ಧಿಯ ಉತ್ತುಂಗದಲ್ಲಿಯೂ ಸಹ, ಭಾರತವು ಯಾವುದೇ ದೇಶದ ಮೇಲೆ ದಾಳಿ ಮಾಡಲು ಯೋಚಿಸಲಿಲ್ಲ ಏಕೆಂದರೆ ಜಗತ್ತಿಗೆ ಶಾಂತಿ ಬೇಕು ಎಂದು ನಾವು ದೃಢವಾಗಿ ನಂಬುತ್ತೇವೆ ಎಂದು ನಾಯ್ಡು ಹೇಳಿದ್ದಾರೆ.

ಇದನ್ನೂ ಓದಿ:ಹಣದುಬ್ಬರ ಎಲ್ಲಾ ಭಾರತೀಯರ ಮೇಲೆ ಹೇರಿದ ತೆರಿಗೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Published On - 5:18 pm, Sat, 19 March 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?