ಎಸ್.ಆರ್ ಪಾಟೀಲ್-ಸಿದ್ದರಾಮಯ್ಯ ನಡುವಿನ ಅಂತರಕ್ಕೆ ಬ್ರೇಕ್: ಬಹಿರಂಗ ವೇದಿಕೆಯಲ್ಲೇ ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಸಿದ್ದು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 18, 2023 | 3:51 PM

ಕಾಂಗ್ರೆಸ್​ನ ಹಿರಿಯ ನಾಯಕ ಎಸ್.ಆರ್ ಪಾಟೀಲ್​ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಅಸಮಾಧಾನವಿತ್ತು ಎನ್ನಲಾಗುತ್ತಿದ್ದು, ಈ ಕುರಿತಾಗಿ ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದರು.

ಎಸ್.ಆರ್ ಪಾಟೀಲ್-ಸಿದ್ದರಾಮಯ್ಯ ನಡುವಿನ ಅಂತರಕ್ಕೆ ಬ್ರೇಕ್: ಬಹಿರಂಗ ವೇದಿಕೆಯಲ್ಲೇ ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಸಿದ್ದು
ಸಿದ್ಧರಾಮಯ್ಯ, ಎಸ್​​. ಆರ್ ಪಾಟಿಲ್
Follow us on

ಬಾಗಲಕೋಟೆ: ಮತ್ತೊಮ್ಮೆ ವಿಧಾನ ಪರಿಷತ್​ಗೆ ಆಯ್ಕೆ ಮಾಡಿಲ್ಲವೆಂದು ಕಾಂಗ್ರೆಸ್​ನ ಹಿರಿಯ ನಾಯಕ ಎಸ್.ಆರ್ ಪಾಟೀಲ್ (SR Patil)​​ ಅಸಮಾಧಾನಗೊಂಡಿದ್ದು, ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದಿದ್ದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ರಿಂದ ಅಂತರ ಕಾಯ್ದುಕೊಂಡಿದ್ದರು. ಕಾಂಗ್ರೆಸ್​​ನ ಹಿರಿಯ ನಾಯಕರು ಸಹ ಎಸ್.ಆರ್ ಪಾಟೀಲ್​ ಅವರ ಮನವೊಲಿಸುವ ಕೆಲಸ ಮಾಡಿದ್ದರು. ಆದರೆ ಅದು ಯಾವುದು ಪ್ರಯೋಜನವಾಗಿರಲಿಲ್ಲ. ಸದ್ಯ ಈ ಕುರಿತಾಗಿ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಮ್ಮ ನಡುವೆ ಯಾವುದೇ ಮುನಿಸು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂಗೆ ಸೃಷ್ಟಿ ಮಾಡೋದು ನೀವು. ಈಗ ನಾನು ಅವ್ರು ಒಂದು ಹತ್ತು ದಿನ ಭೇಟಿ ಆಗದೇ ಹೋದ್ರೆ, ಇವರಿಗೂ ಅವರಿಗೂ ಒಳಗಡೆ ಆಂತರಿಕ ಯುದ್ಧ ಇದೆ ಅಂತೀರಿ. ಯಾವ ಮುಸುಕಿನ ಗುದ್ದಾಟನೂ ಇಲ್ಲ, ಏನೂ ಇಲ್ಲ. ನಾವೆಲ್ಲರೂ ಒಂದು. ವಿ ಆರ್​ ಆಲ್​ ಯುನೈಟೆಡ್, ಮುಂದಿನ ಚುನಾವಣೆಯನ್ನು ಎಲ್ಲರೂ ಯುನೈಟೆಡ್ ಆಗಿ ಎದುರಿಸ್ತೇವೆ ಎಂದರು. ಈ ಮೂಲಕ ಎಸ್​ಆರ್​ ಪಾಟೀಲ್ ಹಾಗೂ ಸಿದ್ದು ನಡುವಿನ ಅಂತರಕ್ಕೆ ಬ್ರೇಕ್ ಬಿದ್ದಿದೆ.

130ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಎಸ್​ಆರ್​ ಪಾಟಿಲ್  

ಎಸ್​ಆರ್​ ಪಾಟಿಲ್ ಪ್ರತಿಕ್ರಿಯೆ ನೀಡಿದ್ದು, ಈ ಸಮಾವೇಶಕ್ಕೆ ಸೇರಿದ ಜನರ ಉತ್ಸಾಹ ನೋಡಿದರೆ, ಮುಂದಿನ ಚುನಾವಣೆಯಲ್ಲಿ 7 ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಅನಿಸುತ್ತದೆ. ನಮ್ಮ ಸರಕಾರ ಬಂದರೆ ಅನ್ನುವ ಪ್ರಶ್ನೆಯೆ ಇಲ್ಲ. 130ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು‌ ಖಚಿತ. ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೇ ಖಚಿತ. ಉತ್ತರ ಕರ್ನಾಟಕದ ಕೃಷ್ಣಾ, ಮಹಾದಾಯಿ ಯೋಜನೆ ಪೂರ್ಣಗೊಳಿಸಿಯೇ ತೀರುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಕೊಪ್ಪಳದಲ್ಲಿ ಅಬ್ಬರಿಸಿದ ಸಿದ್ದರಾಮಯ್ಯ; ಭಾಷಣದುದ್ದಕ್ಕೂ ಮೋದಿ, ಬಿಜೆಪಿ ವಿರುದ್ಧ ಟೀಕಾ ಪ್ರಹಾರ

ನಾವು ನುಡಿದಂತೆ ನಡೆದಿದ್ದೇವೆ

ಈಗಾಗಲೇ ‌ಮಾತಾಡಿದ ಎಲ್ಲ ನಾಯಕರು ಪ್ರಜಾಧ್ವನಿ ಯಾತ್ರೆ ಬಗ್ಗೆ ಅನೇಕ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಪ್ರಜಾಧ್ವನಿ ಅಂದರೆ ಅದು ನಮ್ಮ ಧ್ವನಿಯಲ್ಲ, ಇಡೀ ರಾಜ್ಯದ ಜನರ ಧ್ವನಿ. ಇಂದು‌ ನಿಮ್ಮೆಲ್ಲರ ಭೇಟಿ ಮಾಡಿ ನಾವು ಏನು ಮಾಡಿದ್ದೆವು. ಮುಂದೆ ಏನು ಮಾಡುತ್ತೇವೆ ಎಂದು ಹೇಳಿದ್ದಾರೆ. ನಾನು 2018ರ ಕೊನೆ ಬಜೆಟ್ ಮಾಡಿದೆ. ಬಜೆಟ್ ಪುಸ್ತಕ ನೀವೆಲ ಓದಬೇಕು. ನಾನು ಸಿಎಂ ಆದಾಗ 165 ಭರವಸೆ ಕೊಟ್ಟಿದ್ದೆವು. 158 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಆದರೆ ಬಿಜೆಪಿಗರು 2014ರಲ್ಲಿ ಮೋದಿ ಅನೇಕ ಭರವಸೆ ಕೊಟ್ಟಿದ್ದರು. ಅದೇ ರೀತಿ 2018 ರಲ್ಲಿ ಬಿಜೆಪಿ 600 ಭರವಸೆ ಕೊಟ್ಟಿತ್ತು. ಆದರೆ ಏನು ಮಾಡಿದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಮಿಸ್ಟರ್ ಬೊಮ್ಮಾಯಿ ಮೂರು ವರ್ಷ ಏನು ‌ಮಾಡಿದ್ರಿ?

ನಾವು ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ಕೊಡೊದಾಗಿ ಹೇಳಿದ‌ ಮೇಲೆ ಮಾರನೇ ದಿನ ಒಂದು ಜಾಹಿರಾತು ಕೊಟ್ರು‌. ಮಹಿಳೆಯರಿಗೆ ಅದು ಮಾಡ್ತಿವಿ ಇದು ಮಾಡ್ತಿವಿ ಅಂದರು. ಮಿಸ್ಟರ್ ಬೊಮ್ಮಾಯಿ ಮೂರು ವರ್ಷ ಏನು ‌ಮಾಡಿದ್ರಿ ಎಂದು ಪ್ರಶ್ನಿಸಿದರು. ವರ್ಷಕ್ಕೆ 24 ಸಾವಿರ ರೂಪಾಯಿ ಸಂಸಾರಕ್ಕೆ ಸಾಕಾಗುತ್ತಾ ಎಂದು ವೇದಿಕೆಯಿಂದಲೇ ಪ್ರಶ್ನೆ ಮಾಡಿದ ಸಿದ್ದರಾಮಯ್ಯ, 24 ಸಾವಿರ ಕೊಡ್ತಿವಿ ಅಂದರೆ ಅಕ್ಷರಶಃ ಕೊಟ್ಟೇ ಕೊಡುತ್ತೇವೆ. ಎಷ್ಟೇ ಕಷ್ಟ ಆಗಲಿ. ನಮ್ಮ ಕಾರ್ಯಕರ್ತರು ಪ್ರತಿ ‌ಮನೆಗೆ ಬರ್ತಾರೆ. ಯಾರು ಯಜಮಾನಿ ಅಂತ ಗುರುತಿಸಿ, ಎರಡು ಸಾವಿರ ಹಣ ಕೊಡ್ತಾರೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.