ಚಾಮರಾಜನಗರ: ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿವರ್ಷವೂ ಸೈಟ್ ಹಂಚಿಕೆ ಮಾಡುತ್ತೇವೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮುಖ್ಯಮಂತ್ರಿ ನಗರ ನಿವೇಶನ ಯೋಜನೆಯಡಿ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಗುಂಡ್ಲುಪೇಟೆಯಲ್ಲಿ 30 ವರ್ಷಗಳಿಂದ ಯಾರಿಗೂ ನಿವೇಶನ ಕೊಟ್ಟಿಲ್ಲ. ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ 600 ಕೋಟಿ ಅನುದಾನ ನೀಡಿದ್ದರು. ಆದರೆ ಅಂದಿನ ಸರ್ಕಾರ ಅದಕ್ಕೆ ಬೇಕಾದ ಜಾಗ ಹುಡುಕಲಿಲ್ಲ. ನಾನು ವಸತಿ ಸಚಿವನಾದ ಮೇಲೆ ಜಾಗ ಹುಡುಕಿ ಬೆಂಗಳೂರಿನಲ್ಲಿ 52 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಪೈಕಿ 5 ಸಾವಿರ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿದ್ದೀವಿ ಎಂದು ಹೇಳಿದರು.
ನಾನೀಗ ಯಾವ ಪಕ್ಷದ ಸದಸ್ಯನೂ ಅಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿ, ನನ್ನನ್ನು MLC ಮಾಡಿದ್ದು ಆರ್ಎಸ್ಎಸ್ ಮುಖಂಡ ಮುಕುಂದ್. ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಆ ನಂತರ ನನ್ನನ್ನು MLC ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಬರುತ್ತಿರುವುದು ಸಂತೋಷ. ಪ್ರಧಾನಿ ಕೇವಲ ವಿಮಾನ ನಿಲ್ದಾಣ ಉದ್ಘಾಟಿಸಿ ಹೋಗುವುದಲ್ಲ. VISL ಕಾರ್ಖಾನೆಯ ಕಾರ್ಮಿಕರ ಸಮಸ್ಯೆಯನ್ನೂ ಆಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ರಿಯಲ್ ಸ್ಟಾರ್ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣೆ ಆಯೋಗ
ರಾಜ್ಯದಲ್ಲಿ ಲ್ಯಾಂಡ್ ಮಾಫಿಯಾ ಹೆಚ್ಚುತ್ತಿದ್ದು, ಟಿಕೆಟ್ ಕೇಳುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಗಳನ್ನು ಗಿರಾಕಿಯಂತೆ ಪಕ್ಷಗಳು ನೋಡುತ್ತಿವೆ. ಹಿಂದೆ ಅದೆಂತಹ ರಾಜಕಾರಣಿಗಳಿದ್ದರು. ದೇವರಾಜ್ ಅರಸ್, ಎಸ್. ಎಂ ಕೃಷ್ಣ ಮತ್ತಿತರರನ್ನು ನೆನೆದರು. ಇಂದು ಮಠಾಧೀಶರನ್ನು ಕರೆದು ರಾಜಕಾರಣಿ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಸಿಟಿ ರವಿ ಮಾಂಸ ಸೇವಿಸಿ ದೇಗುಲ ಪ್ರವೇಶಿಸಿದ ಆರೋಪ; ನಳಿನ್ ಕುಮಾರ್ ಕಟೀಲ್ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ
ಕುಕ್ಕರ್, ಸೀರೆಗಾಗಿ ಮತ ಮಾರಾಟ ಮಾಡಿಕೊಳ್ಳಬೇಡಿ. ಸ್ವಾಭಿಮಾನದ ಬದುಕು ನಡೆಸಲು ಮುಂದಾಗಿ ಎಂದು ರಾಷ್ಟ್ರೀಯ ಹೋರಾಟಗಾರ್ತಿ ಸುಭಾಷಿನಿ ಅಲಿ ಹೇಳಿದರು. ದಾವಣಗೆರೆ ನಗರದ ಶಿವಯೋಗಿ ಮಂದಿರದಲ್ಲಿ ನಡೆದ ದೇವದಾಸಿ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಚುನಾವಣೆ ಬಂದಿದೆ. ಮತದಾನದ ಮಹತ್ವ ಅರುತುಕೊಳ್ಳಿ. ಬೊಮ್ಮಾಯಿ ಹಾಗೂ ನರೇಂದ್ರ ಮೋದಿಯವರ ಕೋಮುವಾದಿ ಸರ್ಕಾರಕ್ಕೆ ಪಾಠ ಕಲಿಸಿ. ದೇವದಾಸಿಯರು ಮಾಸಿಕ ಐದು ಸಾವಿರ ರೂಪಾಯಿ ಮಾಸಾಸನಕ್ಕಾಗಿ ಹೋರಾಟ ಮಾಡಿ ಎಂದು ಸುಭಾಷಿನಿ ಮಹಿಳೆಯರಿಗೆ ಕರೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:03 pm, Sat, 25 February 23