ರಿಯಲ್ ಸ್ಟಾರ್ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣೆ ಆಯೋಗ

ರಾಜ್ಯ ರಾಜಕಾರಣದಲ್ಲಿ ಡಿಫ್ರೆಂಟ್​ ಆಗಿ ಗಮನಸೆಳೆದಿರುವ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಚುನಾವಣೆ ಆಯೋಗ ಅಧಿಕೃತ ಚಿಹ್ನೆಯನ್ನು ನೀಡಿದೆ.

ರಿಯಲ್ ಸ್ಟಾರ್ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣೆ ಆಯೋಗ
Follow us
ರಮೇಶ್ ಬಿ. ಜವಳಗೇರಾ
|

Updated on:Feb 24, 2023 | 4:54 PM

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023)ಸಮೀಪಿಸುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಮತಬೇಟೆಗಿಳಿದಿವೆ. ಇನ್ನೂ ದಿನಾಂಕ ಘೋಷಣೆಗೂ ಮುನ್ನವೇ ಪಕ್ಷಗಳು ಅಬ್ಬರ ಪ್ರಚಾರವನ್ನ ಶುರುಮಾಡಿಕೊಂಡಿವೆ. ಈ ನಡುವೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ (Uttama Prajaakeeya Party) ಆಟೋ ರಿಕ್ಷಾ ಚಿಹ್ನೆ ಲಭಿಸಿದೆ.

ಈ ಕುರಿತು ಚುನಾವಣಾ ಆಯೋಗ (Election Commission)ಆದೇಶ ಹೊರಡಿಸಿದ್ದು, ಚುನಾವಣಾ ಆಯೋಗದ ಆದೇಶವನ್ನು ನಟ ಹಾಗೂ ರಾಜಕಾರಣಿ ಉಪೇಂದ್ರ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್ “ಆಟೋ ರಿಕ್ಷಾ ” ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು ಎಂದು ಟ್ವೀಟ್‌ ಮಾಡಿದ್ದಾರೆ.

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಹಲವು ವರ್ಷಗಳೇ ಕಳೆದಿವೆ. ಉತ್ತಮ ಪ್ರಜಾಕೀಯ ಪಾರ್ಟಿ ಹೆಸರಿನಲ್ಲಿ ಅವರು ಪಕ್ಷವೊಂದನ್ನು ಶುರು ಮಾಡುವ ಮೂಲಕ ರಾಜ್ಯಾದ್ಯಂತ ಪ್ರವಾಸ ಕೂಡ ಮಾಡಿದ್ದಾರೆ. ಈ ಪಕ್ಷದಿಂದ ಈಗಾಗಲೇ ಪಂಚಾಯತಿ ಚುನಾವಣೆಯನ್ನು ಅವರು ಎದುರಿಸಿದ್ದರು. ಈ ಪಕ್ಷದಿಂದ ಪಂಚಾಯತಿ ಚುನಾವಣೆಯಲ್ಲಿ ಒಬ್ಬ ಸದಸ್ಯ ಕೂಡ ಗೆದ್ದಿದ್ದಾನೆ. ಆದರೆ, ಅಧಿಕೃತವಾಗಿ ಈ ಪಕ್ಷಕ್ಕೆ ಚಿಹ್ನೆ ಇರಲಿಲ್ಲ. ಇದೀಗ ಕೇಂದ್ರ ಚುನಾವಣೆ ಆಯೋಗ ಪಕ್ಷಕ್ಕೆ ಚಿಹ್ನೆ ನೀಡಿದೆ.

2018 ರಿಂದ ತಮ್ಮದೇ ಆದ ಸಿದ್ಧಾಂತ ಮೂಲಕ ಉಪೇಂದ್ರ ತಮ್ಮ ಪಕ್ಷಕ್ಕೆ ಅಭ್ಯರ್ಥಿಗಳನ್ನು ಸೆಳೆಯುತ್ತಿದ್ದಾರೆ. ಅಲ್ಲದೇ ಡಿಫ್ರೆಂಟ್​ನೊಂದಿಗೆ ಅಭ್ಯರ್ಥಿಯಗಳ ಆಯ್ಕೆ ಮಾಡುವ ಮೂಲಕ ಗಮನಸೆಳೆದಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದರು. ರಾಜೀಯಕ ಪಕ್ಷಗಳು ಸಾಕು ತ್ತಮ ಪ್ರಜಾಕೀಯ ಪಕ್ಷ ಬೇಕೆ ಎನ್ನುವ ಟ್ರೆಂಡ್ ಶುರುವಾಗಿತ್ತು.

Published On - 4:51 pm, Fri, 24 February 23

ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
"ನನ್ನ ಕೊಲೆ ಮಾಡುವ ಸಂಚು ನಡೆಸಿದ್ದೀರಿ" ಪೊಲೀಸರ ವಿರುದ್ಧ ಸಿಟಿ ರವಿ ಗರಂ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ
ಮತ್ತೆ ಕಳಪೆಪಟ್ಟ ಪಡೆದ ಚೈತ್ರಾ; ಕ್ಯಾಪ್ಟನ್ ಪಟ್ಟಕ್ಕೇರಿದ ಭವ್ಯಾ ಗೌಡ
ಮತ್ತೆ ಕಳಪೆಪಟ್ಟ ಪಡೆದ ಚೈತ್ರಾ; ಕ್ಯಾಪ್ಟನ್ ಪಟ್ಟಕ್ಕೇರಿದ ಭವ್ಯಾ ಗೌಡ
ಮಕ್ಕಳ ಕೈಗೆ ಕಪ್ಪು ಮಣಿ, ತಾಮ್ರದ ಕಡಗ ಹಾಕುವುದೇಕೆ? ಇಲ್ಲಿದೆ ಕಾರಣ
ಮಕ್ಕಳ ಕೈಗೆ ಕಪ್ಪು ಮಣಿ, ತಾಮ್ರದ ಕಡಗ ಹಾಕುವುದೇಕೆ? ಇಲ್ಲಿದೆ ಕಾರಣ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ