40 ಪರ್ಸೆಂಟ್ ಆರೋಪ! ಬಹಿರಂಗ ಚರ್ಚೆಗೆ ಬರುವಂತೆ ಸಿದ್ದರಾಮಯ್ಯಗೆ ಸವಾಲ್ ಹಾಕಿದ ದಕ್ಷಿಣ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಎನ್ಆರ್ ರಮೇಶ್
97 ಹಗರಣಗಳ ಪೈಕಿ 26 ಪ್ರಕರಣಗಳಲ್ಲಿ ನಮ್ಮ ಹೋರಾಟದಿಂದ ಗೆಲುವು ಸಿಕ್ಕಿದೆ. ನಿಮ್ಮ ಸರ್ಕಾರದ ನಾಯಕರು ಕಬಳಿಸಿದ್ದ 8,350 ಕೋಟಿ ಮೌಲ್ಯದ ಸರ್ಕಾರಿ ಸ್ವತ್ತುಗಳು ಮರಳಿ ಸರ್ಕಾರದ ವಶಕ್ಕೆ ಬಂದಿವೆ ಎಂದಿದ್ದಾರೆ.
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬಳಿಕ ವಿರೋಧ ಪಕ್ಷದ ನಾಯಕರು 40 ಪಸೆಂಟ್ ಸರ್ಕಾರ (Government) ಅಂತ ಆರೋಪಿಸುತ್ತಿದ್ದಾರೆ. ಭ್ರಷ್ಟಾಚಾರದ ಸರ್ಕಾರ ಅಂತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ದಕ್ಷಿಣ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಎನ್ಆರ್ ರಮೇಶ್ (NR Ramesh) ಸಿದ್ದರಾಮಯ್ಯಗೆ ಪತ್ರ ಬರೆದು ಬಹಿರಂಗ ಚರ್ಚೆಗೆ ಬರುವಂತೆ ಸವಾಲ್ ಹಾಕಿದ್ದಾರೆ. ಕಳೆದ 15 ದಿನಗಳಿಂದ ಬಿಜೆಪಿ ನಾಯಕರುಗಳ ಬಗ್ಗೆ ಸಾಕ್ಷ್ಯವಿಲ್ಲದೆ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲು ಆಹ್ವಾನಿಸುತ್ತೇವೆ ಅಂತ ಪತ್ರದಲ್ಲಿ ತಿಳಿಸಿದ್ದಾರೆ.
2013ರಿಂದ 2018ರ ತನಕ ಅಂದರೆ 5 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲು ಯತ್ನಿಸಿದ ಹಲವು ಯೋಜನೆಗಳಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ಮತ್ತು 30 ಪರ್ಸೆಂಟ್ ಕಿಕ್ ಬ್ಯಾಕ್ ಅನ್ನು ಪಡೆದು ನಿಮ್ಮ ಸಚಿವರು ಲೂಟಿ ಮಾಡಿರುವ ಬಗ್ಗೆ ದಾಖಲೆಗಳ ಸಮೇತ 97 ದೂರುಗಳನ್ನ ತಮಗೆ ಸಲ್ಲಿಸಲಾಗಿತ್ತು ಅಂತ ಪತ್ರದಲ್ಲಿ ತಿಳಿಸಿದ್ದಾರೆ.
97 ಹಗರಣಗಳ ಪೈಕಿ 26 ಪ್ರಕರಣಗಳಲ್ಲಿ ನಮ್ಮ ಹೋರಾಟದಿಂದ ಗೆಲುವು ಸಿಕ್ಕಿದೆ. ನಿಮ್ಮ ಸರ್ಕಾರದ ನಾಯಕರು ಕಬಳಿಸಿದ್ದ 8,350 ಕೋಟಿ ಮೌಲ್ಯದ ಸರ್ಕಾರಿ ಸ್ವತ್ತುಗಳು ಮರಳಿ ಸರ್ಕಾರದ ವಶಕ್ಕೆ ಬಂದಿವೆ ಎಂದಿದ್ದಾರೆ.
ತಮ್ಮ ಸರ್ಕಾರದಲ್ಲಿ ಯಾವುದೇ ಹರಗಣ ನಡೆದಿಲ್ಲದಿದ್ದರೆ, ತಾವು ಮತ್ತು ತಮ್ಮ ಸಚಿವರು ಪ್ರಾಮಾಣಿಕರಾಗಿದ್ದರೆ ನಮ್ಮ ಸವಾಲನ್ನು ಸ್ವೀಕರಿಸುತ್ತೀರ ಎಂದು ಪತ್ರದಲ್ಲಿ ದಕ್ಷಿಣ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಎನ್ಆರ್ ರಮೇಶ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ
Micromax IN2c: ಸ್ಮಾರ್ಟ್ಫೋನ್ ಮಾರುಕಟ್ಟೆಗೆ ನಾಳೆ ಅಪ್ಪಳಿಸಲಿದೆ ಬೊಂಬಾಟ್ ಫೀಚರ್ಸ್ನ ದೇಶೀಯ ಫೋನ್