ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಕೇಂದ್ರ ನಾಯಕರು ನಿರ್ಧರಿಸುತ್ತಾರೆ, ಮಠಾಧೀಶರಲ್ಲ: ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ

ಯಾವುದು ಸರಿ, ತಪ್ಪು ಅನ್ನುವ ಅರಿವು ಕೇಂದ್ರ ನಾಯಕರಿಗಿದೆ. ಏನೇ ಇದ್ದರೂ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. ಈ ಬಗ್ಗೆ ಯಾವುದೇ ಮಠಾಧೀಶರು ನಿರ್ಧಾರ ಮಾಡುವುದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಕೇಂದ್ರ ನಾಯಕರು ನಿರ್ಧರಿಸುತ್ತಾರೆ, ಮಠಾಧೀಶರಲ್ಲ: ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ
ಬಸನಗೌಡ ಪಾಟೀಲ್ ಮತ್ತು ಬಿ.ವೈ.ವಿಜಯೇಂದ್ರ
Follow us
guruganesh bhat
|

Updated on:May 31, 2021 | 6:12 PM

ಬೆಂಗಳೂರು: ಬಿಜೆಪಿ ಶಾಸಕ ಬವಸನಗೌಡ ಪಾಟೀಲ್ ಯತ್ನಾಳ್ ಫೇಸ್​ಬುಕ್​ನಲ್ಲಿ ಸಿಎಂ ಯಡಿಯೂರಪ್ಪ ಕುಟುಂಬದ ವೀರಶೈವ ಲಿಂಗಾಯತ ಮಠಾಧೀಶರ ಬೆಂಬಲ ಪಡೆಯಲು ಪ್ರಯತ್ನ ಆರೋಪ ಪೋಸ್ಟ್​ಗೆ ಸಂಬಂಧಿಸಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪರ ನಾಯಕತ್ವ ಬಗ್ಗೆ ಕೇಂದ್ರ ನಾಯಕರು ತೀರ್ಮಾನಿಸುತ್ತಾರೆ. ಈಗಾಗಲೇ ಕೇಂದ್ರ ನಾಯಕರು ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ. ಯಾವುದು ಸರಿ, ತಪ್ಪು ಅನ್ನುವ ಅರಿವು ಕೇಂದ್ರ ನಾಯಕರಿಗಿದೆ. ಏನೇ ಇದ್ದರೂ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. ಈ ಬಗ್ಗೆ ಯಾವುದೇ ಮಠಾಧೀಶರು ನಿರ್ಧಾರ ಮಾಡುವುದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಸದ್ಯ ಜಾರಿಯಲ್ಲಿರುವ ಲಾಕ್​ಡೌನ್​ನಿಂದ ಶೇ.50ರಷ್ಟು ಸೋಂಕು ಕಡಿಮೆಯಾಗಿದೆ. ಲಾಕ್​ಡೌನ್ ಇನ್ನೂ ಸ್ವಲ್ಪ ದಿನ ಮುಂದುವರೆಸಿದರೆ ಒಳ್ಳೆಯದು. ಬಳಿಕ ಹಂತಹಂತವಾಗಿ ಲಾಕ್​ಡೌನ್ ತೆರವು ಮಾಡಬೇಕು. ರಾಜ್ಯದಲ್ಲಿ ಕೊರೊನಾದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ತಜ್ಞರ ಅಭಿಪ್ರಾಯದಂತೆ ಸಿಎಂ ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬೆಂಗಳೂರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ತಿಳಿಸಿದರು.

ನಿನ್ನೆಯಷ್ಟೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ ವಿರುದ್ಧ ಟೀಕಿಸಿ ಫೇಸ್​ಬುಕ್ ಪೋಸ್ಟ್ ಹಾಕಿದ್ದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಫೇಸ್​ಬುಕ್ ಪೋಸ್ಟ್​ನಲ್ಲಿ ಏನಿತ್ತು? ಸಿಎಂ ಯಡಿಯೂರಪ್ಪ ಅವರ ಇಡೀ ಕುಟುಂಬ ಹಗಲು ದರೋಡೆಯಲ್ಲಿ ನಿರತವಾಗಿದೆ. ಭ್ರಷ್ಟಾಚಾರದಿಂದ ಗಳಿಸಿದ‌ ಹಣದಿಂದ ಏನನ್ನು ಬೇಕಾದರೂ ಖರೀದಿಸಬಹುದೆಂಬ ಅಹಂಕಾರ ಸಿಎಂ ಯಡಿಯೂರಪ್ಪ ಕುಟುಂಬದ ನೆತ್ತಿಗೇರಿದೆ. ತಮ್ಮದೇ ಜಾಲತಾಣಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಲಾಗುತ್ತಿದೆ. ಇದನ್ನು ವೀರಶೈವ ಲಿಂಗಾಯತ ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರರನ್ನು ಕುಟುಕಿದ್ದರು.

ತಂದೆ ಯಡಿಯೂರಪ್ಪ ಅವರ ಸ್ಥಾನ ಪತನದ ಮುನ್ಸೂಚನೆ ವಿಜಯೇಂದ್ರಗೆ ಸಿಕ್ಕಿದ್ದು, ಇದನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ಅವಮಾನ ಎಂಬಂತೆ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ಪಕ್ಷಕ್ಕೆ ಭಾರಿ ಹಿನ್ನಡೆ‌ ಆಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ:

ಫೇಸ್​ಬುಕ್ ಪೋಸ್ಟ್ ಮೂಲಕ ಸಿಎಂ ಯಡಿಯೂರಪ್ಪ ಕುಟುಂಬವನ್ನು ಕುಟುಕಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಕಾಶ್ಮೀರದ 370 ಸ್ಪೆಷಲ್ ಸ್ಟೇಟಸ್‌ ಯಡಿಯೂರಪ್ಪ ಫ್ಯಾಮಿಲಿಗೆ ಕೊಟ್ಟಿಲ್ಲ: ಬಸನಗೌಡ ಪಾಟೀಲ ಯತ್ನಾಳ್‌

(State BJP vice president Vijayendra says central leaders decide what is right and what is wrong, not the Mathadhish)

Published On - 6:06 pm, Mon, 31 May 21