Telangana Assembly Election 2023: ಆಂಧ್ರ ಸಿಎಂ ಜಗನ್​​ಮೋಹನ್ ರೆಡ್ಡಿ ಸಹೋದರಿ ಪಲೈರ್ ಕ್ಷೇತ್ರದಿಂದ ಸ್ಪರ್ಧೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 17, 2022 | 10:44 AM

Assembly Election 2023: ವೈಎಸ್ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ವೈಎಸ್ ಶರ್ಮಿಳಾ ರೆಡ್ಡಿ ಅವರು 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಲೈರ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದರು.

Telangana Assembly Election 2023:  ಆಂಧ್ರ ಸಿಎಂ ಜಗನ್​​ಮೋಹನ್ ರೆಡ್ಡಿ ಸಹೋದರಿ ಪಲೈರ್ ಕ್ಷೇತ್ರದಿಂದ ಸ್ಪರ್ಧೆ
Telangana Assembly Election 2023 YS Sharmila Reddy Announces Contest from Palair Constituency
Image Credit source: india today
Follow us on

ಹೈದರಾಬಾದ್: ವೈಎಸ್ಆರ್ (YSR) ತೆಲಂಗಾಣ (Telangana) ಪಕ್ಷದ ಮುಖ್ಯಸ್ಥೆ ವೈಎಸ್ ಶರ್ಮಿಳಾ ರೆಡ್ಡಿ (YS Sharmila Reddy) ಅವರು 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಲೈರ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದರು. ತಮ್ಮ ತಂದೆ ದಿವಂಗತ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಕಲ್ಯಾಣ ಯೋಜನೆಗಳು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಶರ್ಮಿಳಾ ಹೇಳಿದ್ದಾರೆ.

ಖಮ್ಮಂ ಜಿಲ್ಲೆಯಲ್ಲಿ ಪಕ್ಷದ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶರ್ಮಿಳಾ, ಪಲೇರ್ ಜಲಾಶಯವನ್ನು ದಿವಂಗತ ಸಿಎಂ ರೆಡ್ಡಿ ಅವಧಿಯಲ್ಲಿ ದುರಸ್ತಿ ಮಾಡಲಾಗಿತ್ತು ಮತ್ತು ಕ್ಷೇತ್ರದಲ್ಲಿ 20,000 ಕ್ಕೂ ಹೆಚ್ಚು ಬಡವರಿಗೆ ಮನೆಗಳನ್ನು ವಿತರಿಸಲಾಯಿತು. ವಿವಿಧ ಮಂಡಲಗಳ ಸುಮಾರು 108 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸಿಕ್ಕಿದೆ. ವಿದ್ಯುತ್ ಸಬ್ಸಿಡಿಯಿಂದ ಹಿಡಿದು ಗ್ರಾನೈಟ್ ಕಾರ್ಖಾನೆಗಳವರೆಗೆ ಮೂಲಸೌಕರ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಎಲ್ಲಾ ವರ್ಗದವರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ವೈಎಸ್‌ಆರ್ ಪಕ್ಷ ಯಾವಾಗಲೂ ಕ್ಷೇತ್ರದ ಉನ್ನತಿಗಾಗಿ ಕೆಲಸ ಮಾಡುತ್ತದೆ, ಎಲ್ಲಾ ಯೋಜನೆಗಳು ಬಡವರಿಗೆ ತಲುಪುವಂತೆ ಭರವಸೆ ನೀಡಿದ್ದಾರೆ. ಆರೋಗ್ಯ ಅಥವಾ ಅಲ್ಪಸಂಖ್ಯಾತ ಮೀಸಲಾತಿಗಳು, ಉಚಿತ ವಿದ್ಯುತ್ ಶುಲ್ಕ ಮರುಪಾವತಿ ಇನ್ನೂ ಅನೇಕ ಯೋಜನೆಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಇದನ್ನು ಓದಿ:ಆಂಧ್ರ ಪ್ರದೇಶದ ಸಿಎಂ ಜಗನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾರಿಂದ ಇಂದು ನೂತನ ರಾಜಕೀಯ ಪಕ್ಷಕ್ಕೆ ಚಾಲನೆ

ಅಧಿಕಾರದಲ್ಲಿರುವ ಬಿಆರ್‌ಎಸ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೆಸಿಆರ್ ಕನಿಷ್ಠ ಪಕ್ಷ 1000 ಮನೆಗಳನ್ನು ನಿರ್ಮಿಸಿದ್ದಾರೆಯೇ, ಎಷ್ಟು ಎಕರೆಗೆ ನೀರು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದ್ದರು. ವಿದ್ಯುತ್ ಸಬ್ಸಿಡಿಯನ್ನು ಹಿಂಪಡೆದ ನಂತರ ಕೆಸಿಆರ್ ಆಡಳಿತವು ಈ ಪ್ರದೇಶದಲ್ಲಿ ಗ್ರಾನೈಟ್ ಉದ್ಯಮಕ್ಕೆ ಮರಣದ ಗಂಟೆ ಬಾರಿಸಿದೆ ಎಂದು ಅವರು ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Sat, 17 December 22