AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರ ಪ್ರದೇಶದ ಸಿಎಂ ಜಗನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾರಿಂದ ಇಂದು ನೂತನ ರಾಜಕೀಯ ಪಕ್ಷಕ್ಕೆ ಚಾಲನೆ

YS Sharmila: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಜಗನ್ ಮೋಹನ್ ಮತ್ತು ಶರ್ಮಿಳಾ ಅವರ ತಂದೆ ಎಸ್ ರಾಜಶೇಖರ ರೆಡ್ಡಿ ಅವರ ಜನ್ಮ ದಿನಾಚರಣೆಯ ದಿನವೇ ಪಕ್ಷಕ್ಕೆ ಚಾಲನೆ ಲಭಿಸಲಿದೆ.

ಆಂಧ್ರ ಪ್ರದೇಶದ ಸಿಎಂ ಜಗನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾರಿಂದ ಇಂದು ನೂತನ ರಾಜಕೀಯ ಪಕ್ಷಕ್ಕೆ ಚಾಲನೆ
ವೈ ಎಸ್ ಶರ್ಮಿಳಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 08, 2021 | 11:21 AM

ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್.ಶರ್ಮಿಳಾ ಅವರು ಇಂದು ಹೊಸ ಪಕ್ಷವನ್ನು ಆರಂಭಿಸಲಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುವ ಖಾಸಗಿ ಸಮಾರಂಭದಲ್ಲಿ ರಾಜಕೀಯ ಪಕ್ಷಕ್ಕೆ ಚಾಲನೆ ಸಿಗಲಿದೆ. ಕೊವಿಡ್ -19 ಸಾಂಕ್ರಾಮಿಕ ರೋಗದ ನಡುವೆ ನಡೆಯಲಿರುವ ಸರಳ ಸಮಾರಂಭದಲ್ಲಿ ಶರ್ಮಿಳಾ ಅವರು ಪಕ್ಷದ ಕಾರ್ಯಸೂಚಿ ಮತ್ತು ಧ್ವಜವನ್ನು ಬಿಡುಗಡೆ ಮಾಡಲಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಜಗನ್ ಮೋಹನ್ ಮತ್ತು ಶರ್ಮಿಳಾ ಅವರ ತಂದೆ ಎಸ್ ರಾಜಶೇಖರ ರೆಡ್ಡಿ ಅವರ ಜನ್ಮ ದಿನಾಚರಣೆಯ ದಿನವೇ ಪಕ್ಷಕ್ಕೆ ಚಾಲನೆ ಲಭಿಸಲಿದೆ. ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಕ್ಷದ ನಿಷ್ಠಾವಂತರೊಂದಿಗೆ ತಾಯಿ ವೈ.ಎಸ್.ವಿಜಯಮ್ಮ ಹಾಜರಾಗಲಿದ್ದಾರೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ .

ಶರ್ಮಿಳಾ ಏಪ್ರಿಲ್‌ನಲ್ಲಿ ತಮ್ಮ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಆಗ ಮಾತನಾಡಿದ ಶರ್ಮಿಳಾ, ವೈಎಸ್‌ಆರ್‌ನಂತೆಯೇ ಸಾಗಲು ಬಯಸುತ್ತೇನೆ ಎಂದು ಹೇಳಿದ್ದರು. ನಿಖರವಾಗಿ ಏಪ್ರಿಲ್ 9, 18 ವರ್ಷಗಳ ಹಿಂದೆ ಚೆವೆಲ್ಲಾದಿಂದ ವೈ.ಎಸ್.ರಾಜಶೇಖರ ರೆಡ್ಡಿ ಅವರು ಪಾದಯಾತ್ರೆ ಪ್ರಾರಂಭಿಸಿದರು. ಅವರು ಪ್ರತಿದಿನ 22 ಕಿಲೋಮೀಟರ್ ನಡೆದು ಹೋಗಿದ್ದರು. ಜನರ ಸಮಸ್ಯೆಗಳನ್ನು ಆಲಿಸುತ್ತಾ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ವೈಎಸ್ಆರ್ ನಂತರ ವಿವಿಧ ಯೋಜನೆಗಳನ್ನು ಚಾಲನೆ ನೀಡಿದ್ದರು. ವೈಎಸ್ಆರ್​ನ ಹಾದಿಯಲ್ಲಿಯೇ ನಾನು ನಡೆಯಲು ಅವರು ಬಯಸುತ್ತೇನೆ. ಆದ್ದರಿಂದ ರಾಜಕೀಯಕ್ಕೆ ಪ್ರವೇಶಿಸುತ್ತಿರುವುದಾಗಿ ಅವರು ಹೇಳಿದ್ದರು. ವೈಎಸ್ಆರ್ ನ ಅದೇ ರೀತಿಯ ಆಳ್ವಿಕೆಯನ್ನು ಮರಳಿ ತರುವ ಉದ್ದೇಶವನ್ನು ಹೊಂದಿದ್ದೇನೆ ಎಂದಿದ್ದರು ಶರ್ಮಿಳಾ.

ತೆಲಂಗಾಣ ರಾಜ್ಯದಲ್ಲಿ 119 ಸ್ಥಾನಗಳಿಗೆ ವಿಧಾನಸಭಾ ಚುನಾವಣೆ 2023 ರಲ್ಲಿ ನಡೆಯಲಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಕೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯು ಗೆದ್ದು ಸದನದಲ್ಲಿ 88 ಸ್ಥಾನಗಳನ್ನು ಗಳಿಸಿತು.

ಇದನ್ನೂ ಓದಿ:  ಶರ್ಮಿಲಾ ತಮ್ಮ ವೈಎಸ್ಆರ್ ತೆಲಂಗಾಣ ಪಾರ್ಟಿಯನ್ನು ಜುಲೈ 8ರಂದು ಲಾಂಚ್ ಮಾಡಲಿದ್ದಾರೆ

ಇದನ್ನೂ ಓದಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಸೋದರಿ ಶರ್ಮಿಳಾರಿಂದ ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಆರಂಭದ ಘೋಷಣೆ

(YS Sharmila set to launch a political party today launch event scheduled for 3pm)

Published On - 11:19 am, Thu, 8 July 21