ಕಾಶ್ಮೀರದಲ್ಲಿ 24ಗಂಟೆಯಲ್ಲಿ ಐವರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆಗಳು; ಮುಂದುವರಿದ ಕಾರ್ಯಾಚರಣೆ
ಕಾಶ್ಮೀರದ ಪೊಲೀಸ್ ಇಲಾಖೆ ಈ ಉಗ್ರರ ವಿರುದ್ಧ ಕಾರ್ಯಾಚರಣೆಯ ಬಗ್ಗೆ ಕಾಲಕಾಲಕ್ಕೆ ಟ್ವಿಟರ್ ಮೂಲಕ ಮಾಹಿತಿ ನೀಡಲಿದೆ. ಇಂದು ಮುಂಜಾನೆ ಮತ್ತೆ ಇಬ್ಬರು ಅಪರಿಚಿತ ಉಗ್ರರು ಭದ್ರತಾ ಪಡೆಗಳ ದಾಳಿಗೆ ಹತರಾಗಿದ್ದಾರೆ.
ಜಮ್ಮು-ಕಾಶ್ಮೀರದ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ಕಳೆದ 24ಗಂಟೆಯಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಬಗ್ಗೆ ಪೊಲೀಸರೇ ಅಧಿಕೃತ ಮಾಹಿತಿ ನೀಡಿದ್ದು, ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದೂ ತಿಳಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಸದ್ಯ ಪುಲ್ವಾಮಾದ ಪುಚಾಲ್ನಲ್ಲಿ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆದಿದೆ. 24ಗಂಟೆಯಲ್ಲಿ ಕಾಶ್ಮೀರದಲ್ಲಿ ಐವರು ಉಗ್ರರ ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳಲ್ಲಿ ಯಾರ ಪ್ರಾಣಿ ಹಾನಿಯೂ ಆಗಿಲ್ಲ. ಇದು ಅಭಿನಂದನಾರ್ಹ ಎಂದು ಕಾಶ್ಮೀರ ವಲಯದ ಐಜಿ ವಿಜಯ್ಕುಮಾರ್ ತಿಳಿಸಿದ್ದಾರೆ.
ಕಾಶ್ಮೀರದ ಪೊಲೀಸ್ ಇಲಾಖೆ ಈ ಉಗ್ರರ ವಿರುದ್ಧ ಕಾರ್ಯಾಚರಣೆಯ ಬಗ್ಗೆ ಕಾಲಕಾಲಕ್ಕೆ ಟ್ವಿಟರ್ ಮೂಲಕ ಮಾಹಿತಿ ನೀಡಲಿದೆ. ಇಂದು ಮುಂಜಾನೆ ಮತ್ತೆ ಇಬ್ಬರು ಅಪರಿಚಿತ ಉಗ್ರರು ಭದ್ರತಾ ಪಡೆಗಳ ದಾಳಿಗೆ ಹತರಾಗಿದ್ದಾರೆ. ಅವರ ಬಳಿ ಇದ್ದ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೀಗೆ ಹತ್ಯೆಯಾದವರೆಲ್ಲ ಬಹುತೇಕ ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ ಉಗ್ರಸಂಘಟನೆಗೆ ಸೇರಿದವರೇ ಆಗಿದ್ದಾರೆಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ; ಜಾಗೋ ಮೈಸೂರು ಅಧ್ಯಕ್ಷರಿಂದ ಪ್ರಧಾನಿ ಮೋದಿಗೆ ರಕ್ತದ ಪತ್ರ
Five militants killed in 24 hours in Kashmir