ಕಲೋಲ್: ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ನೀಡಿರುವ ಪ್ರಧಾನಿ ಮೋದಿ ಅವರು ರಾವಣನಂತೆ 100 ತಲೆಯನ್ನು ಹೊಂದಿದ್ದೀರಾ? ಎಂಬ ಹೇಳಿಕೆಗೆ ಪ್ರಧಾನಿ ಮೋದಿ ಪ್ರಕ್ರಿಯೆ ನೀಡಿದ್ದಾರೆ. ಮೋದಿಯನ್ನು ಯಾರು ಹೆಚ್ಚು ನಿಂದಿಸಬಹುದು ಎಂಬುದಕ್ಕೆ ಕಾಂಗ್ರೆಸ್‌ನಲ್ಲಿ ಸ್ಪರ್ಧೆ ನಡೆಯುತ್ತಿದೆ ಎಂದು ಮೋದಿ ಅವರು ಗುಜರಾತ್‌ನ ಕಲೋಲ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಜರಾತ್ ಚುನಾವಣಾ ರ್ಯಾಲಿ ಸಮಯದಲ್ಲಿ ಪ್ರಧಾನಿ ಮೋದಿಯವರು ತಮ್ಮ ಕೆಲಸವನ್ನು ಮರೆತು, ಕಾರ್ಪೊರೇಷನ್ ಚುನಾವಣೆಗಳಲ್ಲಿ, ಎಂಎಲ್ಎ ಚುನಾವಣೆಗಳಲ್ಲಿ, ಎಂಪಿ ಚುನಾವಣೆಗಳಲ್ಲಿ, ಎಲ್ಲೆಡೆ ಪ್ರಚಾರ ಮಾಡುತ್ತಾರೆ. ಪ್ರತಿ ಭಾಷಣದಲ್ಲೂ ತಮ್ಮ ಬಗ್ಗೆ ಮಾತ್ರ ಮಾತನಾಡುತ್ತಾರೆ. ಬೇರೆ ಯಾರನ್ನೂ ನೋಡಬೇಡಿ ನನ್ನನ್ನೂ ನೋಡಿ, ನನ್ನ ಮುಖವನ್ನು ನೋಡಿ ಮತದಾನ ನೀಡಿ ಎಂದು ಹೇಳುತ್ತೀರಾ, ಆದರೆ ನಾವು ನಿಮ್ಮ ಮುಖವನ್ನು ಎಷ್ಟು ಬಾರಿ ನೋಡಬೇಕು? ನಿಮಗೆ ಎಷ್ಟು ರೂಪಗಳಿವೆ? ನಿಮಗೆ ರಾವಣನಂತೆ 100 ತಲೆಗಳಿವೆಯೇ? ಎಂದು ಖರ್ಗೆ ಹೇಳಿದ್ದಾರೆ.
ಇದನ್ನು ಓದಿ:Gujarat Elections 2022: ಪ್ರಧಾನಿ ಮೋದಿ ರಾವಣನಂತೆ 100 ತಲೆ ಹೊಂದಿದ್ದೀರಾ? ಖರ್ಗೆ ಮಾತಿಗೆ ಬಿಜೆಪಿ ಆಕ್ರೋಶ
ಈ ಹೇಳಿಕೆಗೆ ಬಿಜೆಪಿಯು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಪ್ರಧಾನಿ ಮೋದಿ ಗುಜರಾತ್ ಚುನಾವಣಾ ಪ್ರಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿಯನ್ನು ಯಾರು ಹೆಚ್ಚು ನಿಂದಿಸಬಹುದು ಎಂಬುದಕ್ಕೆ ಕಾಂಗ್ರೆಸ್‌ನಲ್ಲಿ ಸ್ಪರ್ಧೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಗುಜರಾತ್ ನನಗೆ ನೀಡಿದ ಶಕ್ತಿ ಕಾಂಗ್ರೆಸ್‌ಗೆ ತೊಂದರೆಯಾಗಿದೆ. ಕಾಂಗ್ರೆಸ್ ನಾಯಕರೊಬ್ಬರು ಇಲ್ಲಿಗೆ ಬಂದು ಈ ಚುನಾವಣೆಯಲ್ಲಿ ಮೋದಿಯವರಿಗೆ ನಮ್ಮ ತಾಕತ್ ತೋರಿಸುತ್ತೇವೆ ಎಂದು ಹೇಳಿದರು. ಕಾಂಗ್ರೆಸ್‌ಗೆ ಇನ್ನೂ ಹೆಚ್ಚು ಏನಾದರೂ ಹೇಳಬೇಕು ಎಂದು ಅನ್ನಿಸಿದೆ ಅದಕ್ಕೆ ಕಾಂಗ್ರೆಸ್ ಖರ್ಗೆ ಅವರನ್ನು ಇಲ್ಲಿಗೆ ಕಳುಹಿಸಿದ್ದಾರೆ. ನಾನು ಖರ್ಗೆ ಅವರನ್ನು ಗೌರವಿಸುತ್ತೇನೆ ಆದರೆ ಅವರು ಕೇಳಿದಕ್ಕೆ ನಾನು ಪ್ರತಿಕ್ರಿಯೆ ನೀಡಲೇಬೇಕು. ಗುಜರಾತ್ ರಾಮಭಕ್ತರ ರಾಜ್ಯ ಎಂಬುದು ಕಾಂಗ್ರೆಸ್ಸಿಗೆ ಗೊತ್ತಿಲ್ಲ. ಇಲ್ಲಿ ಮೋದಿ 100 ತಲೆಗಳ ರಾವಣ ಎಂದು ಹೇಳಿದ್ದಾರೆ ಎಂದು ಮೋದಿ ಹೇಳಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Thu, 1 December 22