Karnataka Poll 2023: ಕಾಂಗ್ರೆಸ್​ಗೆ ಬಿಗ್ ಶಾಕ್ ಕೊಟ್ಟ ಹಾವೇರಿ ಕೈ ಟಿಕೆಟ್​ ಆಕಾಂಕ್ಷಿ ಎಂ.ಎಂ.ಹಿರೆಮಠ

|

Updated on: Mar 28, 2023 | 12:14 PM

ಹಾವೇರಿ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ಎಂ.ಎಂ.ಹಿರೆಮಠ, ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

Karnataka Poll 2023: ಕಾಂಗ್ರೆಸ್​ಗೆ ಬಿಗ್ ಶಾಕ್ ಕೊಟ್ಟ ಹಾವೇರಿ ಕೈ ಟಿಕೆಟ್​ ಆಕಾಂಕ್ಷಿ ಎಂ.ಎಂ.ಹಿರೆಮಠ
ಎಂ.ಎಂ. ಹಿರೆಮಠ
Follow us on

ಹಾವೇರಿ:  ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್, ಜೆಡಿಎಸ್​​ ಹಾಗೂ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಮತ್ತೊಂದೆಡೆ ಭಿನ್ನಮತ, ಅಸಮಾಧಾನಗಳು ಸ್ಫೋಟಗೊಳ್ಳಿತ್ತಿವೆ. ಅದರಂತೆ ಹಾವೇರಿ ಕಾಂಗ್ರೆಸ್​ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಹಾವೇರಿ ಕಾಂಗ್ರೆಸ್​​ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂ.ಎಂ.ಹಿರೆಮಠ(MM Hiremath) ರಾಜಿನಾಮೆ ನೀಡಿದ್ದಾರೆ. ಅಲ್ಲದೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಗುಡ್​ಬೈ ಹೇಳಿದ್ದಾರೆ. ಈ ಕುರಿತಂತೆ .ಹಿರೆಮಠ ಅವರು ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ​ ಅವರಿಗೆ ರವಾನಿಸಿದ್ದಾರೆ.

ಇದನ್ನೂ ಓದಿ: ಕೇಸರಿ ಪಡೆಗೆ ಮತ್ತೊಂದು ಶಾಕ್​: ಕಾಂಗ್ರೆಸ್​ನತ್ತ ಮುಖ ಮಾಡಿದ ಬಿಜೆಪಿ ಹಾಲಿ ಶಾಸಕ, ಮಾತುಕತೆ ಫೈನಲ್​

ಇಲ್ಲಿವರೆಗೂ ಪಕ್ಷ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಆದ್ರೆ, ಕಳೆದ ಕೆಲವು ದಿನಗಳಿಂದ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದು, ಇದನ್ನು ಅಂಗೀಕರಿಸಬೇಕೆಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಾವೇರಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದ ಎಂ.ಎಂ.ಹಿರೆಮಠ ಅವರು ರುದ್ರಪ್ಪ ಲಮ್ಮಾಣಿಯನ್ನು ಹೊರತುಪಡಿಸಿ ಬೇರೆಯಾರಿಗಾದರೂ ಟಿಕೆಟ್ ಕೊಡಿ ಎಂದು ರಾಜ್ಯ ಕೈ ನಾಯಕರಿಗೆ ಮನವಿ ಮಾಡಿದ್ದರು. ಅಲ್ಲದೇ ಈ ಬಾರಿ ಸ್ಪರ್ಧಿಸುವುದಾಗಿ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ಸಹ ರೆಡಿ ಮಾಡಿಕೊಂಡಿದ್ದರು. ಆದ್ರೆ, ಹಾವೇರಿ ಕ್ಷೇತ್ರಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಹೆಸರು ಘೋಷಣೆ ಮಾಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಹಿರೆಮಠ ಹಾವೇರಿ ಜಿಲ್ಲಾಧ್ಯಕ್ಷ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಇನ್ನು ಕಾಂಗ್ರೆಸ್​ಗೆ ಗುಡ್​ಬೈ ಹೇಳಿರುವ ಹಿರೆಮಠ ಅವರು ಮುಂದೆ ಬಿಜೆಪಿ ಅಥವಾ ಜೆಡಿಎಸ್​ ಸೇರುತ್ತಾರಾ?  ಎನ್ನುವುದು ಕಾದುನೋಡಬೇಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ