ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅಧ್ಯಕ್ಷರಾದವರು, ಇದರಲ್ಲಿ ಕನ್ನಡಿಗರಿಬ್ಬರು: ಇಲ್ಲಿದೆ ‘ಕೈ’ ಹಿಸ್ಟರಿ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕನ ಘೋಷಣೆಯಾಗಿದ್ದು, 24 ವರ್ಷದ ಬಳಿಕ ಗಾಂಧಿಯೇತರ ನಾಯಕನಿಗೆ ಅಧ್ಯಕ್ಷ ಪಟ್ಟ ದೊರೆತಂತಾಗಿದೆ. ಕಾಂಗ್ರೆಸ್ ಇತಿಹಾಸದಲ್ಲಿ ಇಬ್ಬರು ಕನ್ನಡಿಗರು ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಮುನ್ನಡೆಸಿದ್ದಾರೆ.

ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅಧ್ಯಕ್ಷರಾದವರು, ಇದರಲ್ಲಿ ಕನ್ನಡಿಗರಿಬ್ಬರು: ಇಲ್ಲಿದೆ ಕೈ ಹಿಸ್ಟರಿ
Congress Flag
Edited By:

Updated on: Oct 19, 2022 | 4:10 PM

ಬೆಂಗಳೂರು: ದೇಶದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕಾಂಗ್ರೆಸ್‌ ಅಧ್ಯಕ್ಷರ ಚುನಾವಣೆ ಫಲಿತಾಂಶ(AICC President Election Result)  ಇಂದು(ಅ.19) ಹೊರಬಿದ್ದಿದ್ದು, ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಜಯಗಳಿಸಿದ್ದಾರೆ. ಈ ಮೂಲಕ 24 ವರ್ಷದ ಬಳಿಕ ಗಾಂಧಿಯೇತರ ನಾಯಕನಿಗೆ ಅಧ್ಯಕ್ಷ ಪಟ್ಟ ದೊರೆತಂತಾಗಿದೆ.

ಈವರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 6 ಬಾರಿ ಚುನಾವಣೆ ನಡೆದಿದೆ.  1939, 1950, 1977, 1997 ಹಾಗೂ 2000ರಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಲೆಕ್ಷನ್ ನಡೆದಿತ್ತು. ಇದಾದ ಬಳಿಕ ಇದೀಗ 2022ರಲ್ಲಿ ಚುನಾವಣೆ ನಡೆದಿದೆ. ಇನ್ನು ಪ್ರಮುಖವಾದ ಅಂಶ ಅಂದ್ರೆ ಈಗ ಖರ್ಗೆಗಿಂತ ಮೊದಲೇ ಕನ್ನಡಿಗರೊಬ್ಬರು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್​ ಪಕ್ಷವನ್ನು ಮುನ್ನಡೆಸಿರುವುದು ಉಂಟು.

ಗಾಡ್ ಫಾದರ್ ಇಲ್ಲದೇ ರಾಜಕೀಯದಲ್ಲಿ ಬೆಳೆದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​ ಅಧ್ಯಕ್ಷರಾದರು! ಖರ್ಗೆ ಜೀವನಗಾಥೆ

ರಾಷ್ಟ್ರಮಟ್ಟದಲ್ಲಿ ಇಬ್ಬರು  ಕನ್ನಡಿಗರು

6 ಬಾರಿ ಚುನಾವಣೆಗಳ  ಪೈಕಿ ಈಗ ಮಲ್ಲಿಕಾರ್ಜುನ ಖರ್ಗೆ ಸೇರಿ ಕರ್ನಾಟಕದ ಇಬ್ಬರು ನಾಯಕರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಎಸ್​.ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿದ್ದರು. ಇದೀಗ ನಿಜಲಿಂಗಪ್ಪ ಬಳಿಕ ಖರ್ಗೆಗೆ ಕಾಂಗ್ರೆಸ್​​ ಅಧ್ಯಕ್ಷ ಪಟ್ಟ ಒಲಿದಿದೆ. ಇದರೊಂದಿಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಎರಡನೇ ಕನ್ನಡಿಗ ಎನ್ನುವ ಹೆಗ್ಗಳಿಕೆ ಖರ್ಗೆ ಪಾತ್ರರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿಯಾಗಿದ್ದ ಎಸ್​ ನಿಜಲಿಂಗಪ್ಪ ಅವರು 1968 ಮತ್ತು 1969ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸಿದ್ದ ಮೊದಲ ಕನ್ನಡಿಗ ಎನ್ನಿಸಿಕೊಂಡಿದ್ದರು. ಬಳಿಕ ಕೆಲ ಕಾರಣಾಂತರಗಳಿಂದ 1969ರಲ್ಲಿ ಕಾಂಗ್ರೆಸ್ ವಿಭಜನೆಯಾಯ್ತು. ಬಳಿಕ ಇಂದಿರಾ ಗಾಂಧಿ ಕಾಂಗ್ರೆಸ್(ಓ) ಪಕ್ಷವನ್ನು ಸ್ಥಾಪಿಸಿದ್ದರು,

ಹ್ಯೂಮ್ ಕಾಂಗ್ರೆಸ್ ಸ್ಥಾಪಕ

1885ರಲ್ಲಿ ನಾಗರಿಕ ಸೇವಾಧಿಕಾರಿಯಾಗಿದ್ದ ಅಲನ್ ಹ್ಯೂಮ್ ಅವರು ಭಾರತೀಯ ಕಾಂಗ್ರೆಸ್ ಸ್ಥಾಪನೆ ಮಾಡಿದ್ದರು. ಬಳಿಕ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಕಾಂಗ್ರೆಸ್ ಪ್ರಬಲ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತು. ಭಾರತದ ಮೊದಲ ಪ್ರಧಾನಿ ಜವಹರ್​ಲಾಲ್ ನೆಹರು ಅವರ ನೇತೃತ್ವದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು .

ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅಧ್ಯಕ್ಷರಾದವರು

1. ಪಿ ಸೀತರಾಮಯ್ಯ -1948-49

2. ಪುರಷೋತ್ತಮ್ ದಾಸ್ ಟೆಂಡನ್- 1950-51

3. ಜವಹಾರ್​ಲಾಲ್ ನೆಹರು- 1951-54

4.ಯು.ಎನ್.ಧೇಬರ್ 1955-58

5. ಇಂದಿರಾ ಗಾಂಧಿ 1959-60

6. ನೀಲಮ್ ಸಂಜೀವ್ ರೆಡ್ಡಿ- 1960-63

7. ಕಾಮರಾಜ್ -1964-67

8. ನಿಜಲಿಂಗಪ್ಪ 1968-69

9. ಜಗಜೀವನ್ ರಾಮ್ 1970-71

10. ಶಂಕರ್ ದಯಾಳ್ ಶರ್ಮಾ 1972-74

11. ದೇವಕಾಂತ್ ಬುರುವಾ 1975–77

12| ಇಂದಿರಾ ಗಾಂಧಿ 1978–83

13.ರಾಜೀವ್ ಗಾಂಧಿ 1985–91

14. ನರಸಿಂಹರಾವ್ 1992-94

15. ಸೀತರಾಮ್ ಕೇಸರಿ 1996-98

16. ಸೋನಿಯಾ ಗಾಂಧಿ 1999-2017

17. ರಾಹುಲ್ ಗಾಂಧಿ 2017-18

18. ಸೋನಿಯಾ ಗಾಂಧಿ 2019–2022

19 ಮಲ್ಲಿಕಾರ್ಜುನ ಖರ್ಗೆ 2022- ಪ್ರಸ್ತುತ

Published On - 4:04 pm, Wed, 19 October 22