ದೂರವಾಣಿ ಕರೆ: ಸಿದ್ದರಾಮಯ್ಯಗೆ ಸಹಕಾರ ಕೇಳಿದ ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸಹಕಾರ ಕೇಳಿದ್ದಾರೆ.
ಬೆಂಗಳೂರು/ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರು ಕೊನೆಗೂ ನಿರೀಕ್ಷೆಯಂತೆ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಸೋಲಿಸಿ ಎಐಸಿಸಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುಣ ಖರ್ಗೆ ಅವರಿಗೆ ಕರ್ನಾಟಕ ಕಾಂಗ್ರೆಸ್ ನಾಯರು ದೂರವಾಣಿ ಕರೆ ಮೂಲಕ ಹಾಗೂ ಸಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಅದರಂತೆ ಸಿದ್ದರಾಮಯ್ಯ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ತಿಳಿಸಿದ್ದು, ಇಬ್ಬರು ನಾಯಕರ ಫೋನ್ ಮಾತುಕತೆ ಹೇಗಿತ್ತು ಎನ್ನುವುದು ಈ ಕೆಳಗಿದೆ.
ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅಧ್ಯಕ್ಷರಾದವರು, ಇದರಲ್ಲಿ ಕನ್ನಡಿಗರಿಬ್ಬರು: ಇಲ್ಲಿದೆ ‘ಕೈ’ ಹಿಸ್ಟರಿ
ಎಐಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರವಾಣಿ ಕರೆ ಮಾಡಿ ವಿಶ್ ಮಾಡಿದರು.
Congratulations ಖರ್ಗೆ ಜೀ ಎಂದು ಸಿದ್ದರಾಮಯ್ಯ ವಿಶ್ ಮಾಡಿದ್ದಾರೆ. ಇದಕ್ಕೆ ಖರ್ಗೆ ಥ್ಯಾಂಕ್ಯೂ.. ಇದು ಅಧಿಕಾರ ಅಲ್ಲ ಜವಾಬ್ದಾರಿ. ನಿನ್ನ ಸಹಕಾರ ಇರಲಿ ಎಂದು ಹೇಳಿದ್ದಾರೆ. ಬಳಿಕ ಸಿದ್ದರಾಮಯ್ಯ ಮಾತನಾಡಿ, ನಮ್ಮ ಸಹಕಾರ ಇರುತ್ತೆ ಖರ್ಗೆ ಜೀ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿರುವ ಖರ್ಗೆ ಅವರ ಮುಂದೆ ಹಲವು ರಾಜಕೀಯ ಸವಾಲು ಇದ್ದು, ಅವುಗಳೆಲ್ಲವನ್ನು ಎದುರಿಸಲು ಎಲ್ಲಾ ನಾಯಕರ ಸಲಹೆ-ಸಹಕಾರಗಳು ಬೇಕಾಗುತ್ತವೆ. ಈ ಹಿನ್ನೆಲೆಯಲ್ಲಿ ಖರ್ಗೆ ಅವರು ಸಿದ್ದರಾಮಯ್ಯನವರ ಸಹಕಾರ ಕೇಳಿದ್ದಾರೆ ಎಂದು ವಿಶ್ಲೇಷಿಸಬಹುದು.
ಸಿದ್ದರಾಮಯ್ಯ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತಮ್ಮದೇಯಾದ ಒಂದು ಹಿಡಿತ ಇಟ್ಟುಕೊಂಡಿದ್ದಾರೆ. ಸ್ವಜಾತಿ ಜೊತೆ ಜೊತೆಗೆ ಇತರೆ ಹಿಂದೂಳಿದ ವರ್ಗಗಳ ನಾಯಕ ಎನಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಿಮ್ಮ ಸಹಕಾರ ಇರಲಿ ಎನ್ನುವ ಅರ್ಥದಲ್ಲಿ ಖರ್ಗೆ ಹೇಳಿದಂತಿದೆ.
ಸಿದ್ದು- ಖರ್ಗೆ ನಂಟು ಅಷ್ಟಕಷ್ಟೇ
ಹೌದು…ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ನಡುವಿನ ರಾಜಕೀಯ ಬಾಂಧವ್ಯ ಅಷ್ಟ-ಕಷ್ಟೇ. ಮಲ್ಲಿಕಾರ್ಜುಣ ಖರ್ಗೆ ಅವರು ಡಿಕೆ ಶಿವಕುಮಾರ್ ಬಣದ ಪರ ಇದ್ದಾರೆ ಎನ್ನುವುದು ರಾಜ್ಯ ರಾಜಕಾರಣದಲ್ಲಿ ಹಲವರು ವಿಶ್ಲೇಷಣೆ ಮಾಡಿದ್ದಾರೆ. ಅದು ಹೇಗೆ ಅಂದರೆ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕಿತ್ತು. ಆದ್ರೆ, ಸಿದ್ದರಾಮಯ್ಯನವರು ಬಂದು ಖರ್ಗೆ ಅವರ ಸ್ಥಾನವನ್ನು ಕಸಿದುಕೊಂಡಿದ್ದಾರೆ ಎನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಹರಿದಾಡಿದ್ದವು. ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಈ ಬಗ್ಗೆ ಸಾಕಷ್ಟು ಬಾರಿ ಚರ್ಚೆಗಳು ಆಗಿದ್ದು ಉಂಟು.
Published On - 4:58 pm, Wed, 19 October 22