ನಗರಸಭೆ ಸದಸ್ಯನ ಕೊಲೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ, ಹಂತಕ ಆರೋಪಿಯ ಪತ್ನಿಯೂ ಕಣದಲ್ಲಿ

ಮುಳಬಾಗಿಲು ನಗರದ ಮುತ್ಯಾಲಪೇಟೆ 2ನೇ ವಾರ್ಡಿನಲ್ಲಿ‌ ಬಿರುಸಿನ‌ ಪ್ರಚಾರ‌ ಆರಂಭವಾಗಲಿದೆ. ಈ ನಡುವೆ ಜಗನ್​ ಮೋಹನ್​​ ರೆಡ್ಡಿ ಕೊಲೆ ಮಾಡಿಸಿದ್ದ ಎನ್ನಲಾಗಿರುವ ಪೇಂಟರ್​ ರಮೇಶ್​ ಅವರ ಕುಟುಂಬದಿಂದ ರಮೇಶ್​ ಪತ್ನಿ ಮಾಲತಿ ಕೂಡಾ ಚುನಾವಣೆಗೆ ಸ್ವರ್ಧಿಸುವ ನಿಟ್ಟಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ನಗರಸಭೆ ಸದಸ್ಯನ ಕೊಲೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ, ಹಂತಕ ಆರೋಪಿಯ ಪತ್ನಿಯೂ ಕಣದಲ್ಲಿ
ನಗರಸಭೆ ಸದಸ್ಯನ ಕೊಲೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ! ಹಂತಕ ಆರೋಪಿಯ ಪತ್ನಿಯೂ ಕಣದಲ್ಲಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 19, 2022 | 3:48 PM

ಮುಳಬಾಗಿಲು ನಗರಸಭೆ ಸದಸ್ಯನ ಬರ್ಬರ ಕೊಲೆಯಿಂದಾಗಿ ತೆರವಾಗಿರುವ ನಗರಸಭೆ ಸದಸ್ಯನ ಸ್ಥಾನಕ್ಕಾಗಿ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಹಾಗೂ ನಾಮಪತ್ರ ಪರಿಶೀಲನೆ ಕಾರ್ಯವೂ ಮುಕ್ತಾಯವಾಗಿದ್ದು ಕಾಂಗ್ರೆಸ್​ ಮತ್ತು ಜೆಡಿಎಸ್​‌ ಪಕ್ಷಗಳ ನಡುವೆ‌ ಮುಖಾಮುಖಿ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ ಅವಿರೋಧ ಆಯ್ಕೆ ಮಾಡುವ ಕಸರತ್ತು ಕೂಡಾ ನಡೆದಿದೆ.

ನಗರಸಭೆ ಸದಸ್ಯನ ಕೊಲೆಯಾದ ನಂತರ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ..!

ಜೂನ್​ 7, 2022 ರಂದು ಕೋಲಾರ ಜಿಲ್ಲೆ ಮುಳಬಾಗಿಲು ನಗರಸಭೆ ಸದಸ್ಯ ಹಾಗೂ ಸ್ಥಾಯಿ ಸಮಿತಿ ಸದಸ್ಯರಾಗಿದ್ದ ಜಗನ್ ಮೋಹನ್​ ರೆಡ್ಡಿಯನ್ನು ಬೆಳ್ಳಂಬೆಳಿಗ್ಗೆಯೇ ಮನೆಯ ಪಕ್ಕದಲ್ಲೇ ಇದ್ದ ಗಂಗಮ್ಮ ದೇವಸ್ಥಾನದ ಎದುರಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆ ಇಡೀ ಜಿಲ್ಲೆಯಲ್ಲಿ ಸಾಕಷ್ಟು ‌ಸಂಚಲನ ಸೃಷ್ಟಿ‌ ಮಾಡಿತ್ತು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಗನ್​ ಮೋಹನ್​ ರೆಡ್ಡಿಯವರನ್ನು ಕೊಲೆ ಮಾಡಲಾಗಿತ್ತು. ಈ ಘಟನೆ ಇನ್ನೂ ಹಸಿಯಾಗಿರುವಾಗಲೇ‌ ಈಗ‌ ಮೊತ್ತಮ್ಮೆ ಚುನಾವಣೆ ಮೂಲಕ ಮೃತ ಜಗನಮೋಹನ್ ರೆಡ್ಡಿ‌ ಹೆಸರು ಮುನ್ನೆಲೆಗೆ‌ ಬರುತ್ತಿದೆ. ಜಗನ್‌ ಮೋಹನ ರೆಡ್ಡಿ ಕೊಲೆಯಿಂದ ತೆರವಾದ ಮುಳಬಾಗಿಲು ನಗರಸಭೆ ಎರಡನೇ ವಾರ್ಡ್​ ಸದಸ್ಯ ಸ್ಥಾನಕ್ಕೆ‌ (Town Municipal Council in Mulbagal, Kolar) ಉಪಚುನಾವಣೆ‌ ಘೋಷಣೆಯಾಗಿದೆ. (ವಿಶೇಷ ವರದಿಗಾರ- ರಾಜೇಂದ್ರಸಿಂಹ, ಟಿವಿ 9, ಕೋಲಾರ)

ಕಾವೇರುತ್ತಿದೆ ಚುನಾವಣಾ ಕಣ..!

ಅಕ್ಟೋಬರ್​ 10 ರಿಂದ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ, 17 ಕ್ಕೆ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯವಾಗಿ, 18 ರಂದು ನಾಮಪತ್ರ ಪರಿಶೀಲನೆ ಕೂಡಾ ಮುಕ್ತಾಯವಾಗಿದ್ದು, 19 ರಂದ ನಾಮಪತ್ರ ವಾಪಸ್​ ಪಡೆಯಲು ಅಂತಿಮ ದಿನವಾಗಿದ್ದು, ಇದೇ ಅಕ್ಟೋಬರ್ 28 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಸದ್ಯ ಒಟ್ಟು 13 ನಾಮಪತ್ರಗಳು ಸ್ವೀಕೃತಗೊಂಡಿವೆ. ಈ ಪೈಕಿ ಒಟ್ಟು 10 ಜನ ಅಭ್ಯರ್ಥಿಗಳ 13 ನಾಮಪತ್ರಗಳಿದ್ದು ಇಂದು ಸಂಜೆಯ ವೇಳೆಗೆ ಅಂತಿಮ ಕಣದಲ್ಲಿ ಎಷ್ಟು ಜನ ಅಭ್ಯರ್ಥಿಗಳು ಕಣದಲ್ಲಿ ಉಳಿಯಲಿದ್ದಾರೆ ಅನ್ನೋದು ತಿಳಿಯಲಿದೆ.

ಅವಿರೋಧ ಆಯ್ಕೆ ಮಾಡಲು ಕೊತ್ತೂರು ಮಂಜುನಾಥ್​ ಪ್ರಯತ್ನ..!

ಈ ನಡುವೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್​ ಅವರ ಬೆಂಬಲಿಗ ಹಾಗೂ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದ ಕೊಲೆಯಾದ ಜಗನ್​ ಮೋಹನ್​ ರೆಡ್ಡಿ ಅವರ ಪತ್ನಿ ನಿರುಪಮಾ ಅವರನ್ನು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿದ್ದು, ಜಗನ್​ ಮೋಹನ್​ ಅವರ ಕೊಲೆಯಾಗಿದ್ದು ಅವರ ಸಮಾಜಮುಖಿ ಜನಪರ ಕಾರ್ಯಕಗಳನ್ನು ನೋಡಿ, ಹಾಗೂ ಜಗನ್​ ಮೊಹನ್​ ರೆಡ್ಡಿ ತಮ್ಮ ವಾರ್ಡ್​ನಲ್ಲಿ ತಾವು ಅಂದುಕೊಂಡಿದ್ದ ಹಲವಾರು ಕೆಲಸಗಳು ಬಾಕಿ ಇದ್ದು, ಇನ್ನುಳಿದ ಎರಡುವರೆ ವರ್ಷದಲ್ಲಿ ಅವರ ಆಶಯದಂತೆ ಬಾಕಿ ಇರುವ ಕೆಲವೊಂದು ಕೆಲಸಗಳನ್ನು ಪೂರೈಸಲು ಅವರ ಪತ್ನಿ ಇಚ್ಚೆಪಟ್ಟಿದ್ದಾರೆ. ಅದರಂತೆ ಅವರ ಕುಟುಂಬಕ್ಕೊಂದು ಅವಕಾಶ ಕೊಡಬೇಕೆಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಎಲ್ಲಾ ಪಕ್ಷಗಳ ಮುಖಂಡರ ಜೊತೆ ಮಾತುಕತೆ ನಡೆಸಿ ನಿರುಪಮಾ ಅವರನ್ನು ಅವಿರೋಧ ಆಯ್ಕೆಗೂ ಸಾಕಷ್ಟು ಪ್ರಯತ್ನ ಮಾಡಿದರಾದರೂ ಅದು ಸಫಲವಾಗಿಲ್ಲ. ಪರಿಣಾಮ ಚುನಾವಣಾ ಕಣ ರಂಗೇರಿದ್ದು ಜೆಡಿಎಸ್​ ಹಾಗೂ ಕಾಂಗ್ರೇಸ್ ಅಭ್ಯರ್ಥಿಗಳ ನಡುವೆ ಹಣಾಹಣಿ ಏರ್ಪಡಲಿದೆ.

ಪ್ರಮುಖ ಮೂರು ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕೆ..!

ಈ ನಡುವೆ ಜಗನ್​ ಮೋಹನ್​ ರೆಡ್ಡಿ ಪತ್ನಿಯನ್ನು ಅವಿರೋಧ ಆಯ್ಕೆಗೆ ಜೆಡಿಎಸ್​ ಒಪ್ಪದ ಹಿನ್ನೆಲೆಯಲ್ಲಿ, ಕಾಂಗ್ರೇಸ್​ನಿಂದ ಜಗನ್​ ಮೋಹನ್​ ರೆಡ್ಡಿ ಪತ್ನಿ ನಿರುಪಮ, ಜೆಡಿಎಸ್​ ಪಕ್ಷದಿಂದ ಎಂ.ಆರ್​.ಮುರಳಿ, ಬಿಜೆಪಿಯಿಂದ ಮನು, ಹಾಗೂ ಜಗನ್​ ಮೊಹನ್​ ರೆಡ್ಡಿಯಿಂದ ಕೊಲೆಯಾದ ಎನ್ನಲಾದ ಪೇಂಟರ್ ರಮೇಶ್​ ಪತ್ನಿ ಮಾಲತಿ ಕೂಡಾ ನಾಮಪತ್ರ ಸಲ್ಲಿಸಿದ್ದಾರೆ.

ನಮಗೊಂದು ಅವಕಾಶ ಕೊಡಿ ಎಂದು ರಮೇಶ್​ ಪತ್ನಿ..!

ಇನ್ನು ನಾಮಪತ್ರಗಳ ಪರಿಶೀಲನೆಯಲ್ಲಿ‌ ಎಲ್ಲಾ ರಾಷ್ಟ್ರೀಯ ಪಕ್ಷಗಳ‌ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತಗೊಂಡಿದ್ದು, ಮುಳಬಾಗಿಲು ನಗರದ ಮುತ್ಯಾಲಪೇಟೆ 2ನೇ ವಾರ್ಡಿನಲ್ಲಿ‌ ಬಿರುಸಿನ‌ ಪ್ರಚಾರ‌ ಆರಂಭವಾಗಲಿದೆ. ಈ ನಡುವೆ ಜಗನ್​ ಮೋಹನ್​​ ರೆಡ್ಡಿ ಕೊಲೆ ಮಾಡಿಸಿದ್ದ ಎನ್ನಲಾಗಿರುವ ಪೇಂಟರ್​ ರಮೇಶ್​ ಅವರ ಕುಟುಂಬದಿಂದ ರಮೇಶ್​ ಪತ್ನಿ ಮಾಲತಿ ಕೂಡಾ ಚುನಾವಣೆಗೆ ಸ್ವರ್ಧಿಸುವ ನಿಟ್ಟಿನಲ್ಲಿ ನಾಮಪತ್ರ ಸಲ್ಲಿಸಿದ್ದು ನಮಗೆ ಜಗನ್​ ಮೋಹನ್​ ರೆಡ್ಡಿಯಿಂದ ಅನ್ಯಾಯವಾಗಿದೆ, ಹಾಗಾಗಿ ಚುನಾವಣೆಯಲ್ಲಿ ಜನರು ನಮ್ಮ ಪರವಾಗಿ ಮತ ಹಾಕುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡುತ್ತಾರೆ ಅನ್ನುವುದು ಕೊಲೆಯಾದ ಪೇಂಟರ್​ ರಮೇಶ್​ ಅವರ ಅಣ್ಣ ಮಂಜುನಾಥ್​ ಅವರ ವಿಶ್ವಾಸದ ಮಾತು.

ಒಟ್ಟಾರೆ ಹತ್ತಾರು ರೋಚಕ ತಿರುವುಗಳನ್ನು ಪಡೆದುಕೊಂಡ ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣ, ಈಗ‌ ಮತ್ತೊಮ್ಮೆ ಚುನಾವಣೆಯ ಮೂಲಕ ರಂಗೇರಿದ್ದು, ಸದ್ಯ ಈಗ ಅವರಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಅದೃಷ್ಟ ಲಕ್ಷ್ಮೀ ಯಾರಿಗೆ‌ ಒಲಿಯಲಿದೆ ಅನ್ನೋದನ್ನು ಕಾದು ನೋಡಬೇಕಾಗಿದೆ.

Published On - 3:47 pm, Wed, 19 October 22

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್