ಸಿದ್ದರಾಮಯ್ಯಗೆ 2 ಸಲ ಪುನರ್ಜನ್ಮ ಕೊಟ್ಟಿದ್ದೇನೆ, ಇದೇ ನಾನು ಮಾಡಿದ ದೊಡ್ಡ ತಪ್ಪು: H.D.ಕುಮಾರಸ್ವಾಮಿ

| Updated By: ರಮೇಶ್ ಬಿ. ಜವಳಗೇರಾ

Updated on: Nov 13, 2022 | 5:44 PM

ಮಾಜಿ ಸಿಎಂ ಸಿದ್ದರಾಮಯ್ಯಗೆ 2 ಸಲ ಪುನರ್ಜನ್ಮ ಕೊಟ್ಟಿದ್ದೇನೆ. ಇದೇ ನಾನು ಮಾಡಿದ ದೊಡ್ಡ ತಪ್ಪು ಎಂದು ಎಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯಗೆ 2 ಸಲ ಪುನರ್ಜನ್ಮ ಕೊಟ್ಟಿದ್ದೇನೆ, ಇದೇ ನಾನು ಮಾಡಿದ ದೊಡ್ಡ ತಪ್ಪು: H.D.ಕುಮಾರಸ್ವಾಮಿ
siddaramaiah and hd kumaraswamy
Follow us on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇದೀಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರದ್ದೇ (Siddarmaiah) ಸುದ್ದಿ. ಅವರು ಇಂದು(ನ.13) ಕೋಲಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ(HD Kumaraswamy) ಅವರು ಸಿದ್ದರಾಮಯ್ಯಗೆ 2 ಸಲ ಪುನರ್ಜನ್ಮ ಕೊಟ್ಟಿದ್ದೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಯಾರೂ ಊಹೆ ಮಾಡದ ಅಚ್ಚರಿ ಅಭ್ಯರ್ಥಿ ನಿಲ್ತಾರೆ: ಶ್ರೀರಾಮುಲು ಸ್ಫೋಟಕ ಹೇಳಿಕೆ

ಬೆಂಗಳೂರಿನ ಜೆಪಿ ಭವನದಲ್ಲಿ ಇಂದು(ನ.13) ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯಗೆ 2 ಸಲ ಪುನರ್ಜನ್ಮ ಕೊಟ್ಟಿದ್ದೇನೆ. ಇದೇ ನಾನು ಮಾಡಿದ ದೊಡ್ಡ ತಪ್ಪು ಎಂದರು.

ಅವತ್ತು 2005ರಲ್ಲಿ ಚಾಮುಂಡೇಶ್ವರಿಯಲ್ಲಿ ಅವರು ಗೆದ್ದಿದ್ದು ಬರೀ ಇನ್ನೂರೋ ಇನ್ನೂರೈವತ್ತು ಮತಗಳಿಂದ. ಚಾಮುಂಡೇಶ್ವರಿ, ಬಾದಾಮಿಯಲ್ಲೂ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆದಿರೋದು. ನಾನು ಲಾಸ್ಟ್ ಮೂರು ದಿನ ಬಾದಾಮಿಗೆ ಹೋಗದೆ ಇದ್ರೆ ಹತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲುತ್ತಿದ್ದರು ಎಂದು ಹೇಳಿದರು.

ಗುಳೆದಗುಡ್ಡ ಸೇರಿದಂತೆ ಹಲವೆಡೆ ಪ್ರಚಾರ ಮಾಡಿದ್ದೆ. ಸಾಕಷ್ಟು ಜನ ಸೇರಿದ್ರು. ಬಾದಾಮಿಯಲ್ಲೂ ನನ್ನಿಂದಲೇ ಗೆದ್ದಿದ್ದು, ಇದರಲ್ಲಿ ಯಾವುದೇ ಸಂಶಯ ಇಲ್ಲ. ನಮ್ಮ ಜೆಡಿಎಸ್ ಅಭ್ಯರ್ಥಿಯೂ 28 ಸಾವಿರ ಓಟ್ ಪಡೆದಿದ್ರು. ಸಿದ್ದರಾಮಯ್ಯಗೆ ಎರಡು ಬಾರಿ ನನ್ನಿಂದ ಪುನರ್‌ಜನ್ಮ ಸಿಕ್ಕಿದೆ ಎಂದು ತಿಳಿಸಿದರು.

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡಲ್ಲ. ಅವರು ಮಾಜಿ ಸಿಎಂ ಆಗಿದ್ದಾರೆ. ಸಚಿವರಾಗಿ. ಉಪಮುಖ್ಯಮಂತ್ರಿಯಾಗಿದ್ದವರು. ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಅವರಿಗೆ ಕ್ಷೇತ್ರವೇ ಇಲ್ಲ ಎಂಬ ಕ್ಷುಲ್ಲಕ ಮಾತುಗಳು ನಮಗೆ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೋಲಾರದಲ್ಲಿ ನಮ್ಮ ಯಾವುದೇ ಸ್ಟ್ರಾಟರ್ಜಿ ಬದಲಾಗಲ್ಲ. ಕೋಲಾರದಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಾಭಿಪ್ರಾಯಕ್ಕಿಂತ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಮಿಷನ್ 123 ಗುರಿಯಲ್ಲಿ ಕೋಲಾರ ಕ್ಷೇತ್ರವೂ ಒಂದು. ಸಿದ್ದರಾಮಯ್ಯ ಅಷ್ಟೇ ಅಲ್ಲ, ಯಾರೇ ನಿಂತರೂ ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ. ಸಿದ್ದರಾಮಯ್ಯಗೆ ಮುಳುವಾಗೋದೇ ಶ್ರೀನಿವಾಸ್‌ಗೌಡ್ರು. ನೆಗೆಟೀವ್ ಪಾಯಿಂಟ್ಸ್ ಇರೋದೆ ಅಲ್ಲಿ ಎಂದು ಜೆಡಿಎಸ್​ನಿಂದ ಆಚೆ ಬಂದಿರುವ ಶ್ರೀನಿವಾಸ್ ಗೌಡಗೆ ಟಾಂಗ್ ಕೊಟ್ಟರು.