ಯುವ ನಿಧಿ ಪ್ರಚಾರಕ್ಕೆ ಅಂತರ್ಜಾಲದಿಂದ ಯುವಕನ ಫೋಟೋ ಬಳಕೆ: ಯತ್ನಾಳ್ ಕಿಡಿ

| Updated By: Rakesh Nayak Manchi

Updated on: Nov 28, 2023 | 9:03 PM

Yuva Nidhi Scheme: ಕರ್ನಾಟಕದಲ್ಲಿ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ವ್ಯಾಪಕ ಪ್ರಚಾರ ನಡೆಸಲಾಗುತ್ತಿದ್ದು, ಪಂಚರಾಜ್ಯ ಚುನಾವಣೆಗಳಲ್ಲೂ ಇದೇ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಈ ನಡುವೆ, ಯುವ ನಿಧಿ ಯೋಜನೆ ಪ್ರಚಾರಕ್ಕೆ ಅಂತರ್ಜಾಲದಿಂದ ಯುವಕನ ಫೋಟೋ ಕದ್ದು ಫಲಾನುಭವಿ ಅಂತ ತೋರಿಸುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.

ಯುವ ನಿಧಿ ಪ್ರಚಾರಕ್ಕೆ ಅಂತರ್ಜಾಲದಿಂದ ಯುವಕನ ಫೋಟೋ ಬಳಕೆ: ಯತ್ನಾಳ್ ಕಿಡಿ
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿದ್ದರಾಮಯ್ಯ
Follow us on

ಬೆಂಗಳೂರು, ನ.28: ತನ್ನ ಐದನೇ ಗ್ಯಾರಂಟಿ ಯೋಜನೆಯಾಗಿರುವ ಯುವ ನಿಧಿಯನ್ನು (Yuva Nidhi Scheme) ಜನವರಿ ತಿಂಗಳಲ್ಲಿ ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಆದರೆ, ಜಾಹೀರಾತುಗಳಲ್ಲಿ ಫಲಾನುಭವಿ ಎಂದು ತೋರಿಸುತ್ತಿರುವ ಯುವಕನ ಫೋಟೋ ಅಂತರ್ಜಾಲದಿಂದ ಕದ್ದಿರುವುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.

ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಜಾರಿ ಮಾಡಿ ಹಣಕಾಸಿನ ಕೊರತೆಯಿಂದ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಹರಸಾಹಸಪಡುತ್ತಿರುವ ಕಾಂಗ್ರೆಸ್, ತನ್ನ ಐದನೇ ಗ್ಯಾರಂಟಿಯಾಗಿರುವ ಯುವ ನಿಧಿ ಯೋಜನೆ ಜಾರಿಗೆ ಚಿಂತನೆ ನಡೆಸುತ್ತಿದೆ. ಅದರಂತೆ ಯುವಕನೊಬ್ಬನ ಫೋಟೋ ಹಾಕಿ ಜಾಹೀರಾತು ಕೂಡ ನೀಡಲಾಗುತ್ತಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್: ಸರ್ಕಾರದ ನಡೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಯತ್ನಾಳ್

ಈ ಬಗ್ಗೆ ಟ್ವೀಟ್ ಮಾಡಿದ ಯತ್ನಾಳ್, ಪ್ರಚಾರದ ಗೀಳಿಗೆ ಬಿದ್ದಿರುವ ಸಿದ್ದರಾಮಯ್ಯ ಅವರ ತಂಡ ಅಂತರ್ಜಾಲದಿಂದ ಯಾವುದೋ ಯುವಕನ ಫೋಟೋ ಕದ್ದು, ಈತ ಯುವನಿಧಿಯ ಫಲಾನುಭವಿ ಅಂತ ತೋರಿಸುತ್ತಿರುವುದು ಇವರ ಕಳ್ಳಾಟಕ್ಕೆ ಹಿಡಿದ ಕೈಗನ್ನಡಿ ಎಂದು ಹೇಳಿದ್ದಾರೆ.

ಜನವರಿ ವೇಳೆಗೆ ಯುವ ನಿಧಿ ಯೋಜನೆಯನ್ನೂ ಜಾರಿಗೆ ತರುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಗ್ಯಾರಂಟಿ ಯೋಜನೆಗಳ ಫಲ ಜನರಿಗೆ ತಲುಪಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ನ.28ರಂದು ಸಮಿತಿ ರಚನೆ ಮಾಡುತ್ತೇವೆ. ಗ್ಯಾರೆಂಟಿಗಳ ಮೇಲ್ವಿಚಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಜವಾಬ್ದಾರಿ ನೀಡಿದ್ದೇವೆ. ಪ್ರತಿ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪಿದೆಯೇ, ಇಲ್ಲವೇ ಎಂದು ಪರಿಶೀಲಿಸಲಾಗುವುದು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Tue, 28 November 23