ರಾಜ್ಯ ರಾಜಕಾರಣದಲ್ಲಿ ಕಂಪನ ಸೃಷ್ಟಿಸಿದ ಸಿಎಂ ಪುತ್ರನ ವಿಡಿಯೋ: ಅಧಿವೇಶನಕ್ಕೂ ಮುನ್ನವೇ ವಿಪಕ್ಷಗಳಿಗೆ ಸಿಕ್ತು ಅಸ್ತ್ರ

Yathindra Siddaramaiah Viral Video: ಈಗಾಗಲೇ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಬಿಜೆಪಿ, ATM ಸರ್ಕಾರ ಎಂದೇ ಆರೋಪ ಮಾಡುತ್ತಿದೆ. ಮತ್ತೊಂದೆಡೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮೊದಲಿನಿಂದಲೂ YST TAX ಎಂದು ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ದ ಆರೋಪ ಮಾಡಿತ್ತಿದ್ದಾರೆ. ಈ ಎಲ್ಲಾ ಬೆಳವಣಿಗಳ ಮಧ್ಯೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಲಿಸ್ಟ್ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ರಾಜ್ಯ ರಾಜಕಾರಣದಲ್ಲಿ ಕಂಪನ ಸೃಷ್ಟಿಸಿದ ಸಿಎಂ ಪುತ್ರನ ವಿಡಿಯೋ: ಅಧಿವೇಶನಕ್ಕೂ ಮುನ್ನವೇ ವಿಪಕ್ಷಗಳಿಗೆ ಸಿಕ್ತು ಅಸ್ತ್ರ
Follow us
ರಮೇಶ್ ಬಿ. ಜವಳಗೇರಾ
|

Updated on: Nov 16, 2023 | 12:37 PM

ಬೆಂಗಳೂರು, (ನವೆಂಬರ್ 16): ಸಿಎಂ ಸಿದ್ದರಾಮಯ್ಯನವರ (Siddaramaiah) ಸರ್ಕಾರದಲ್ಲಿ ಪುತ್ರನ ಹಸ್ತಕ್ಷೇಪ ಹೆಚ್ಚಾಗಿದೆ, ವೈಎಸ್‌ಟಿ ಸಂಗ್ರಹಿಸುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪದ ಬೆನ್ನಲ್ಲೇ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಂದೆಯ ಜೊತೆ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಈ ವಿಡಿಯೋ ಈಗ ಕಾಂಗ್ರಸ್​ನಲ್ಲಿ ಕಂಪನ ಸೃಷ್ಟಿಸಿದೆ. ಅಲ್ಲದೇ ಚಳಿಗಾಲದ ಅಧಿವೇಶನಕ್ಕೆ ಕೆಲವು ದಿನಗಳ ಮುನ್ನವೇ ವಿಪಕ್ಷಗಳಿಗೆ ಯತೀಂದ್ರ ವಿಡಿಯೋ ಅಸ್ತ್ರವಾಗಿ ಸಿಕ್ಕಿದ್ದು, ಈಗಾಗಲೇ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸರ್ಕಾರ ವಿರುದ್ಧ ಮುಗಿಬಿದ್ದಿದ್ದಾರೆ.

ವಿಪಕ್ಷಗಳಿಗೆ ಅಸ್ತ್ರವಾದ ಯತೀಂದ್ರ ಸಿದ್ದರಾಮಯ್ಯ ವಿಡಿಯೋ

ಈಗಾಗಲೇ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಬಿಜೆಪಿ, ATM ಸರ್ಕಾರ ಎಂದೇ ಆರೋಪ ಮಾಡುತ್ತಿದೆ. ಮತ್ತೊಂದೆಡೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮೊದಲಿನಿಂದಲೂ YST TAX ಎಂದು ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ದ ಆರೋಪ ಮಾಡಿತ್ತಿದ್ದಾರೆ. ಈ ಎಲ್ಲಾ ಬೆಳವಣಿಗಳ ಮಧ್ಯೆ ಇದೀಗ ಅಧಿವೇಶನ ಆರಂಭಕ್ಕೂ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಅವರ “ಲಿಸ್ಟ್” ವಿಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಸದನದ ಒಳಗೂ ಹೊರಗೂ ಆರೋಪ ಪ್ರತ್ಯಾರೋಪಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.

ಕೇವಲ ವಿರೋಧ ಪಕ್ಷಗಳು ಮಾತ್ರವಲ್ಲ ಪಕ್ಷದೊಳಗಿನ ಹಿತ ಶತ್ರುಗಳಿಗೂ ಸಹ ಈ ಯತೀಂದ್ರ ವಿಡಿಯೋ ಆಹಾರವಾಗಿದ್ದು. ಸಿದ್ದರಾಮಯ್ಯ ವಿರೋಧಿ ಬಣ ಸಹ ಇದನ್ನೇ ಬಳಸಿ ಒಳಗೊಳಗೇ ಅಸ್ತ್ರ ಜಳಪಿಸಬಹುದು. ಅಲ್ಲದೇ ವೈರಲ್ ವಿಡಿಯೋವನ್ನ ಶಾಸಕಾಂಗ ಪಕ್ಷದೊಳಗೇ ಸಿದ್ದರಾಮಯ್ಯ ವಿರೋಧಿಗಳು ಬಳಸಿಕೊಳ್ಳಬಹುದು. ಇನ್ನು ಸಿಎಂ ಕಚೇರಿಯೊಳಗೆ ಕೆಲ ಬದಲಾವಣೆ ಸಾಧ್ಯತೆ ಇದೆ. ಈಗಾಗಲೇ ಸಿಎಂ ಕಚೇರಿ ಸಿಬ್ಬಂದಿ ವರ್ತನೆ ಬಗ್ಗೆ ಕೆಲ ನಾಯಕರು ಸಿಟ್ಟಾಗಿದ್ದು, ಇದೀಗ ಯತೀಂದ್ರ ವಿಡಿಯೋವನ್ನು ಇಟ್ಟುಕೊಂಡು ಸಿಎಂಗೆ ದೂರು ನೀಡುವ ಸಾಧ್ಯತೆಗಳಿವೆ.

ಇನ್ನು ಈ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ವರ್ಗಾವಣೆ ದಂಧೆ ಬಗ್ಗೆ ನಾನು ಮೊದಲಿನಿಂದಲೂ ಹೇಳಿದ್ದೆ. ಇದೀಗ ಇದಕ್ಕೆ ವಿಡಿಯೋ ಸಾಕ್ಷಿ ಸಿಕ್ಕಿದೆ. ಇದಕ್ಕಿಂತ ಮತ್ತೇನು ಸಾಕ್ಷಿ ಬೇಕು. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ

ಸಿಎಂ ಪುತ್ರ ವಿಡಿಯೋ ವೈರಲ್ ವಿಚಾರವಾಗಿ ಚಿತ್ರದುರ್ಗದಲ್ಲಿಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಬಿಜೆಪಿ ಸರ್ಕಾರ 40% ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಪೂಜೆ ಮಾಡುತ್ತಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 40% ಅನುಷ್ಠಾನ ಈ ಸರ್ಕಾರ ಮಾಡುತ್ತಿದೆ. ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಐಟಿ ದಾಳಿ ಕುರಿತು ಕಾಂಗ್ರೆಸ್ ನಾಯಕರು ಸ್ವಾಗತ ಮಾಡಿಲ್ಲ. ಐಟಿ‌ರೈಡ್ ಸೀಜ್ ಆದ ಹಣ ಕಾಂಗ್ರೆಸ್ ಪಕ್ಷದ್ದು ಎಂದು ರಾಜ್ಯದ ಜನ ಚರ್ಚೆ ಮಾಡುತ್ತಿದ್ದಾರೆ. ಸರ್ಕಾರ ಬಂದ ಬಳಿಕ ಒಂದು ಯೋಜನೆ ಜಾರಿಯಾಗಿಲ್ಲ. ಅರೆಬರೆ ಬೆಂದ ಗ್ಯಾರಂಟಿ ಸ್ಕೀಮ್​ಗೆ ತುಪ್ಪ ಹಚ್ಚಿದ್ದಾರೆ. ಯತೀಂದ್ರ ವಿಡಿಯೋ ರಾಜ್ಯದ ಜನ ನೋಡುತ್ತಿದ್ದಾರೆ. ಐಟಿ ರೈಡ್ ಬಳಿಕ ಮತ್ತೊಂದು ದಾಖಲೆ ಸಿಕ್ಕಿದೆ. ಇದಕ್ಕೆಲ್ಲಾ ರಾಜ್ಯದ ಜನ ಬರುವ ದಿನ ಎಲ್ಲದಕ್ಕೂ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ರಾಜೀನಾಮೆಗೆ ಒತ್ತಾಯಿಸಿದ ಅಶ್ವತ್ಥ್​​​ ನಾರಾಯಣ

ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್​ ಬಗ್ಗೆ ಅಶ್ವತ್ಥ್​​​ ನಾರಾಯಣ ಪ್ರತಿಕ್ರಿಯಿಸಿ, ವೈಎಸ್​ಟಿ ಎಂಬ ವಿಚಾರ ಮತ್ತೆ ಬಹಿರಂಗವಾಗಿದೆ. ಇದರೊಂದಿಗೆ ವರ್ಗಾವಣೆ ಮಾಫಿಯಾ, ಎಟಿಎಂ ಸರ್ಕಾರ ಅನ್ನೋದು ಮತ್ತೆ ಸಾಬೀತಾಗಿದೆ. ಈ ಸರ್ಕಾರದಲ್ಲಿ 50 ಪರ್ಸೆಂಟ್​​ಗೂ ಹೆಚ್ಚು ವರ್ಗಾವಣೆಗಳಾಗಿವೆ. ಸಿಎಂ ಹೆಸರಿನಲ್ಲಿ ಪುತ್ರನಿಂದ ಅಧಿಕಾರ ದುರ್ಬಳಕೆ ಆಗುತ್ತಿದೆ. ಹಾಗೇ ಈ ಸರ್ಕಾರದಲ್ಲಿ ಕಾನೂನಿಗೆ ಬೆಲೆಯೇ ಇಲ್ಲ, ಎಲ್ಲೆಡೆ ಅರಾಜಕತೆ ಇದೆ ಎಂದು ಕಿಡಿಕಾರಿದರು.

ಅಧಿಕಾರಕ್ಕೆ ಬಂದಿರುವುದು ಅಭಿವೃದ್ಧಿ ಮಾಡಲು ಅಲ್ಲ ಎಂಬಂತಾಗಿದೆ. ಈ ಸರ್ಕಾರ ಎಟಿಎಂ ಸರ್ಕಾರ, ಜನರ ಕಲ್ಯಾಣಕ್ಕೆ ಈ ಸರ್ಕಾರ ಬಂದಿಲ್ಲ. ವರ್ಗಾವಣೆ ದಂಧೆ, ಭ್ರಷ್ಟಾಚಾರ, ಲೂಟಿ ಹೊಡೆಯಲು ಸರ್ಕಾರ ಬಂದಿದೆ. ಎಲ್ಲಾ ಹಂತಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದಲ್ಲಿ ಬರ ಇದೆ, ರೈತರು ಕಷ್ಟದಲ್ಲಿದ್ದಾರೆ, ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. 365 ದಿನಗಳಲ್ಲೂ ಹಣ ಲೂಟಿ ಹೊಡೆಯಲೆಂದೇ ಈ ಸರ್ಕಾರ ಬಂದಿದೆ. ಸಭೆಗಳಲ್ಲಿ ಪಾರದರ್ಶಕತೆ ಇರಬೇಕು ಎಂದು ಸಿಎಂ ಮಾತಾಡುತ್ತಾರೆ. ಡಾ.ಯತೀಂದ್ರ ಬಗ್ಗೆ ಕೇಳಿ ಬಂದ ಆರೋಪದ ಬಗ್ಗೆ ಕ್ರಮಕೈಗೊಳ್ಳಬೇಕು. ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

10ನೇಯದ್ದೋ 15ನೇಯದ್ದೋ  ಎಂದ ಅಶೋಕ್​

ಯತೀಂದ್ರ ಸಿಎಂ ಅಧಿಕಾರ ಚಲಾಯಿಸುತ್ತಿರುವುದು ಜಗಜ್ಜಾಹೀರಾಗಿದೆ. ಈಗ ಬಂದ ವಿಡಿಯೋ 10ನೇಯದ್ದೋ 15ನೇಯದ್ದೋ ಇರಬೇಕು. ಕಾಂಗ್ರೆಸ್ ಅಂದರೆ ಈ ರೀತಿ ದಂಧೆ ಮಾಡುವುದರಲ್ಲಿ ಎಕ್ಸ್​​ಪರ್ಟ್​​. ವಿಡಿಯೋ ಬಗ್ಗೆ ತನಿಖೆ ಆಗಬೇಕು. ಸಿಎಂ ರಾಜೀನಾಮೆ ಕೊಡಬೇಕು. ದಿನನಿತ್ಯ ಇದೇ ದಂಧೆ ಆಗಿಬಿಟ್ಟಿದೆ ಎಂದ ಆಕ್ರೋಶ ವ್ಯಕ್ತಪಡಿಸಿದರು.

ಯತೀಂದ್ರ ವಿಡಿಯೋನಲ್ಲೇನಿದೆ?

ಬುಧವಾರ ಯತೀಂದ್ರ ಅವರು ವರುಣ (Varuna) ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸಿ ಗ್ರಾಮದ ಜನರ ಅಹವಾಲು ಸ್ವೀಕರಿಸುತ್ತಿದ್ದರು. ಈ ವೇಳೆ ಅವರು ತಂದೆಗೆ(ಸಿದ್ದರಾಮಯ್ಯ) ಕರೆ ಮಾಡಿದ್ದರು. ಆ ವೇಳೆ ಯಾವುದೋ ವಿಷಯವನ್ನು ಪ್ರಸ್ತಾಪ ಮಾಡಿ ನಾನು ನೀಡಿದ ಲಿಸ್ಟ್‌ನದ್ದು ಮಾತ್ರ ಮಾಡಿ ಎಂದು ಸಾರ್ವಜನಿಕರ ಮುಂದೆಯೇ ತಾವು ನೀಡಿದ್ದ ಪಟ್ಟಿಯ ಬಗ್ಗೆ ಮಾತುಕತೆ ಮಾಡಿದ್ದಾರೆ.

ಆರಂಭದಲ್ಲಿ ಅಪ್ಪ ಹೇಳಿ ಎಂದು ಯತೀಂದ್ರ ಸಿದ್ದರಾಮಯ್ಯ ಮಾತು ಶುರುಮಾಡಿದ್ದಾರೆ. ಈ ವೇಳೆ “ವಿವೇಕಾನಂದ ಯಾರು?” ಎಂದು ಸಿಎಂ ಪ್ರಶ್ನೆ ಕೇಳಿದ್ದಾರೆ. ಆಗ ಯತೀಂದ್ರ, ಆ ಮಹದೇವ (ಸಿಎಂ ವಿಶೇಷ ಕರ್ತವ್ಯ ಅಧಿಕಾರಿ) ಅವರಿಗೆ‌ ಪೋನ್ ನೀಡುವಂತೆ ಸಿಎಂಗೆ ಹೇಳುತ್ತಾರೆ. ಆಗ ಸಿದ್ದರಾಮಯ್ಯ, ಮಹದೇವ್‌ಗೆ ಫೋನ್ ಕೊಟ್ಟ ತಕ್ಷಣ ಅವರನ್ನು ತರಾಟೆ ತೆಗೆದುಕೊಂಡ ಯತೀಂದ್ರ, ನಾನು ಕೊಟ್ಟಿದ್ದು ಬಿಟ್ಟು ಬೇರೆ ಯಾವುದು ಅದು ಎಂದು ಪ್ರಶ್ನಿಸಿದ್ದಾರೆ. ನನಗೆ ಅದೆಲ್ಲಾ ಗೊತ್ತಿಲ್ಲ‌. ನಾನು ಕೊಟ್ಟಿರುವ ನಾಲ್ಕು, ಐದು ಮಾತ್ರ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದ್ನನೇ ಇಟ್ಟುಕೊಂಡು ವಿಪಕ್ಷಗಳು ಸರ್ಕಾರದ ಮೇಲೆ ಬಿಗಿಬಿದ್ದಿವೆ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್