ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ (BSE) ಲಿಸ್ಟ್ ಆಗಿರುವ ಡೀಪ್ ಡೈಮಂಡ್ ಇಂಡಿಯಾ (Deep Diamond India) ಷೇರುಗಳು ಕಳೆದ ಒಂದು ವರ್ಷದಿಂದ ಉತ್ತಮ ಗಳಿಕೆ ದಾಖಲಿಸುತ್ತಿವೆ. 118 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿರುವ ಈ ಸ್ಮಾಲ್ಕ್ಯಾಪ್ ಷೇರು ವರ್ಷದಿಂದ ವರ್ಷಕ್ಕೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ. ಇತ್ತೀಚೆಗೆ ಷೇರುಗಳನ್ನು 1:10 ಅನುಪಾತದಲ್ಲಿ ವಿಂಗಡಿಸಿರುವುದು ದೀರ್ಘಾವಧಿಯ ಹೂಡಿಕೆದಾರರ ಷೇರುಗಳಲ್ಲಿ 10 ಪಟ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಡೀಪ್ ಡೈಮಂಡ್ ಇಂಡಿಯಾ ಷೇರುಗಳು ಜನವರಿ 19ರಿಂದಲೂ ನಿರಂತರವಾಗಿ ಅಪ್ಪರ್ ಸರ್ಕ್ಯೂಟ್ನಲ್ಲಿವೆ. ಸತತ 12 ಟ್ರೇಡಿಂಗ್ ಅವಧಿಯಲ್ಲಿ ಅಪ್ಪರ್ ಸರ್ಕ್ಯೂಟ್ನಲ್ಲಿವೆ.
ಡೀಪ್ ಡೈಮಂಡ್ ಇಂಡಿಯಾ ಷೇರುಗಳು ಕಳೆದ ಒಂದು ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 75ರ ರಿಟರ್ನ್ಸ್ ತಂದುಕೊಟ್ಟಿದೆ. ತಿಂಗಳ ಅವಧಿಯಲ್ಲಿ ಷೇರು ಮೌಲ್ಯ 13.75 ರೂ.ನಿಂದ 24.60 ರೂ.ಗೆ ಹೆಚ್ಚಳವಾಗಿದೆ. ವರ್ಷದ ಅವಧಿಯಲ್ಲಿ ಷೇರು ಮೌಲ್ಯದಲ್ಲಿ ಶೇ 96ರಷ್ಟು ಹೆಚ್ಚಳವಾಗಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 375ರಷ್ಟು ರಿಟರ್ನ್ಸ್ ಗಳಿಸಿಕೊಟ್ಟಿದೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರು ಮೌಲ್ಯ 1.27 ರೂ.ನಿಂದ 24.60 ರೂ.ಗೆ ತಲುಪಿದೆ. 2019ರ ಅಂತ್ಯದಲ್ಲೇ ಷೇರು ಬೆಲೆ 1 ರೂ. ಆಸುಪಾಸಿನಲ್ಲಿತ್ತು. ಮೂರು ವರ್ಷಗಳಲ್ಲಿ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಆಗಿ ಪರಿವರ್ತನೆ ಹೊಂದಿದೆ.
2023ರ ಜನವರಿ 23ರಂದು ಬಿಎಸ್ಇಯಲ್ಲಿ ಡೀಪ್ ಡೈಮಂಡ್ ಇಂಡಿಯಾ ಷೇರುಗಳನ್ನು 1:10 ಅನುಪಾತದಲ್ಲಿ ವಿಂಗಡಿಸಲಾಯಿತು. ಪರಿಣಾಮವಾಗಿ ಒಂದು ಷೇರು ಹೊಂದಿದ್ದವರ ಷೇರುಗಳ ಸಂಖ್ಯೆ 10 ಆಗಿ ಪರಿವರ್ತನೆಗೊಂಡಿತು.
ಮೂರು ವರ್ಷಗಳ ಹಿಂದೆ ಷೇರಿನ ಬೆಲೆ 1 ರೂ. ಇತ್ತು. ಪ್ರಸ್ತುತ 24.60 ರೂ. ಆಗಿದೆ. ಮೂರು ವರ್ಷಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿ 1 ಲಕ್ಷ ಷೇರುಗಳನ್ನು ಖರೀದಿಸಿದ್ದವರ ಷೇರುಗಳ ಸಂಖ್ಯೆ, ಷೇರು ವಿಂಗಡಣೆಯ ಬಳಿಕ 10 ಲಕ್ಷ ಆಯಿತು. ಈಗ ಷೇರಿನ ಮುಖಬೆಲೆ 24.60 ರೂ. ಆದ ಕಾರಣ 10 ಲಕ್ಷ ಷೇರುಗಳಿಗೆ ಒಟ್ಟು 2.46 ಕೋಟಿ ರೂ. ದೊರೆತಂತಾಯಿತು.
ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಈ ಮಲ್ಟಿಬ್ಯಾಗರ್ ಷೇರುದಾರ ಕಂಪನಿಯ ಮಾರುಕಟ್ಟೆ ಬಂಡವಾಳ 118 ಕೋಟಿ ರೂ. ಇದ್ದು, ಷೇರಿನ ವಹಿವಾಟು 52 ವಾರಗಳ ಹಾಗೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ