AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger Penny Stock: ಒಂದು ಲಕ್ಷ ಹೂಡಿಕೆ, ಎರಡೇ ವರ್ಷಗಳಲ್ಲಿ 2.46 ಕೋಟಿ ರಿಟರ್ನ್ಸ್; ಈ ಪೆನ್ನಿ ಸ್ಟಾಕ್ ಪವಾಡ ಸೃಷ್ಟಿಸಿದೆ ನೋಡಿ

Multibagger stock; 2021ರ ಜನವರಿ 15ರಂದು 2.25 ರೂ. ಮುಖಬೆಲೆಯೊಂದಿಗೆ ಕಂಪನಿಯ ಷೇರುಗಳು ಎನ್​ಎಸ್​​ಇಯಲ್ಲಿ ವಹಿವಾಟು ಆರಂಭಿಸಿತ್ತು. ಇಂದು ಷೇರಿನ ಮುಖಬೆಲೆ 554 ರೂ. ಆಗಿದೆ. ಅಂದರೆ, ಕಳೆದ ಎರಡು ವರ್ಷಗಳಲ್ಲಿ ಷೇರು ಶೇಕಡಾ 24,500 ಗಳಿಕೆ ತಂದುಕೊಟ್ಟಂತಾಗಿದೆ.

Multibagger Penny Stock: ಒಂದು ಲಕ್ಷ ಹೂಡಿಕೆ, ಎರಡೇ ವರ್ಷಗಳಲ್ಲಿ 2.46 ಕೋಟಿ ರಿಟರ್ನ್ಸ್; ಈ ಪೆನ್ನಿ ಸ್ಟಾಕ್ ಪವಾಡ ಸೃಷ್ಟಿಸಿದೆ ನೋಡಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 13, 2023 | 2:38 PM

Share

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಅದ್ಭುತ ಗಳಿಕೆ ತಂದುಕೊಡುವ ಮೂಲಕ ಎಸ್​ಇಎಲ್​ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ (SEL Manufacturing Company) ಷೇರುಗಳು ಹೆಚ್ಚು ಸದ್ದು ಮಾಡುತ್ತಿವೆ. 2022ರ ಏಪ್ರಿಲ್​ನಲ್ಲಿ ಎನ್​ಎಸ್​ಇಯಲ್ಲಿ (NSE) ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1975.80 ರೂ.ನಂತೆ ವಹಿವಾಟು ನಡೆಸಿದ್ದ ಕಂಪನಿಯ ಷೇರು ನಂತರ ಇಳಿಮುಖವಾಗಿ ಸಾಗಿತ್ತು. ಆದರೆ, ಆರಂಭದಲ್ಲೇ ಹೂಡಿಕೆ ಮಾಡಿದ್ದವರಿಗೆ ಉತ್ತಮ ಗಳಿಕೆ ತಂದುಕೊಡುವ ಮೂಲಕ ಇಂದಿಗೂ ಮುಂಚೂಣಿಯಲ್ಲಿದೆ. ಕಳೆದ ಆರು ತಿಂಗಳುಗಳಲ್ಲಿ ಎನ್​ಎಸ್​​ಇಯಲ್ಲಿ ಶೇಕಡಾ 40ರಷ್ಟು ಮೌಲ್ಯ ಕುಸಿದಿದೆ. ಆದರೆ ಕಳೆದ ಒಂದು ವರ್ಷದಲ್ಲಿ ಭಾರೀ ರಿಟರ್ನ್ಸ್ ತಂದುಕೊಟ್ಟ ಮಲ್ಟಿಬ್ಯಾಗರ್ ಸ್ಟಾಕ್​​ಗಳ (Multibagger Stock) ಸಾಲಿನಲ್ಲಿ ಗುರುತಿಸಿಕೊಂಡಿದೆ. 2.25 ರೂ. ಮುಖಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಿದ್ದ ಷೇರಿನ ಮುಖಬೆಲೆ ಈಗ 554.10 ರೂ. ಆಗಿದೆ.

ಎಸ್​ಇಎಲ್​ ಮ್ಯಾನುಫ್ಯಾಕ್ಚರಿಂಗ್ ಷೇರು ಇತಿಹಾಸ

ಎಸ್​ಇಎಲ್​ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ ಷೇರು ಕಳೆದ ಒಂದು ತಿಂಗಳ ಅವಧಿಯಲ್ಲಿ ಶೇ 15ರಷ್ಟು ಕುಸಿತ ಕಂಡಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಷೇರು ಮೌಲ್ಯ 925 ರೂ.ನಿಂದ 554 ರೂ.ಗೆ ಇಳಿಕೆಯಾಗಿದೆ. ಕಳೆದ ಆರು ತಿಂಗಳಲ್ಲಿ ಶೇಕಡಾ 40ರಷ್ಟು ಕುಸಿತ ದಾಖಲಿಸಿದ ಹೊರತಾಗಿಯೂ ಈ ಷೇರು ಹೂಡಿಕೆದಾರರಿಗೆ ಕಳೆದ ಒಂದು ವರ್ಷದಲ್ಲಿ ಶೇಕಡಾ 750ರಷ್ಟು ಗಳಿಕೆ ತಂದುಕೊಟ್ಟಿದೆ.

ಇದನ್ನೂ ಓದಿ: Multibagger Penny Stock: ಒಂದೇ ತಿಂಗಳಲ್ಲಿ ಶೇ 200ರ ರಿಟರ್ನ್ಸ್ ಒದಗಿಸಿಕೊಟ್ಟಿದೆ 2 ರೂ.ಗಿಂತ ಕಡಿಮೆ ಬೆಲೆಯ ಈ ಷೇರು

2021ರ ಜನವರಿ 15ರಂದು 2.25 ರೂ. ಮುಖಬೆಲೆಯೊಂದಿಗೆ ಕಂಪನಿಯ ಷೇರುಗಳು ಎನ್​ಎಸ್​​ಇಯಲ್ಲಿ ವಹಿವಾಟು ಆರಂಭಿಸಿತ್ತು. ಇಂದು ಷೇರಿನ ಮುಖಬೆಲೆ 554 ರೂ. ಆಗಿದೆ. ಅಂದರೆ, ಕಳೆದ ಎರಡು ವರ್ಷಗಳಲ್ಲಿ ಷೇರು ಶೇಕಡಾ 24,500 ಗಳಿಕೆ ತಂದುಕೊಟ್ಟಂತಾಗಿದೆ.

ಹೂಡಿಕೆ ಮೇಲಿನ ಪರಿಣಾಮ

ಎಸ್​ಇಎಲ್​ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ ಷೇರು ಇತಿಹಾಸವನ್ನು ನೋಡಿದರೆ ಮತ್ತು ಲೆಕ್ಕ ಹಾಕಿದರೆ, ಈ ಷೇರಿನಲ್ಲಿ ಒಂದು ತಿಂಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದವರ ಸಂಪತ್ತು ಇಂದು 85,000 ರೂ. ಆಗಿರಲಿದೆ. ಆರು ತಿಂಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಹೂಡಿಕೆ ಮಾಡಿದ್ದರೆ ಅದೀಗ 60,000 ರೂ. ಆಗಿದೆ. ಒಂದು ವರ್ಷ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಅದೀಗ 8.50 ಲಕ್ಷ ರೂ. ಆಗಿದೆ. ಅದೇ ರೀತಿ 2 ವರ್ಷಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದಲ್ಲಿ ಅದೀಗ 2.46 ಕೋಟಿ ರೂ. ಆಗಿರಲಿದೆ.

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಬಿಎಸ್​ಇ ಮತ್ತು ಎನ್​ಎಸ್​ ಎರಡರಲ್ಲೂ ಲಭ್ಯವಿವೆ. ಇದು ಹೈ ರಿಸ್ಕ್ ಕೆಟಗರಿಯಲ್ಲಿ ಗುರುತಿಸಲಾಗಿರುವ ಷೇರು ಆಗಿದ್ದು, ಹೆಚ್ಚೆಚ್ಚು ಮಾರುಕಟ್ಟೆ ಏರಿಳಿತಗಳನ್ನು ಕಾಣುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ