Multibagger Penny Stock: ಒಂದೇ ತಿಂಗಳಲ್ಲಿ ಶೇ 200ರ ರಿಟರ್ನ್ಸ್ ಒದಗಿಸಿಕೊಟ್ಟಿದೆ 2 ರೂ.ಗಿಂತ ಕಡಿಮೆ ಬೆಲೆಯ ಈ ಷೇರು

2023ರ ಎಲ್ಲ ಟ್ರೇಡಿಂಗ್​ ಸೆಷನ್​ಗಳಲ್ಲಿಯೂ ಜೈಮಾತಾ ಗ್ಲಾಸ್ ಲಿಮಿಟೆಡ್ ಷೇರು ಅಪ್ಪರ್ ಸರ್ಕ್ಯೂಟ್​​ನಲ್ಲೇ ವಹಿವಾಟು ನಡೆಸಿದೆ. ಷೇರಿನ ಬೆಲೆ 0.49ರಿಂದ 1.58 ರೂ.ಗೆ ಹೆಚ್ಚಳವಾಗುವ ಮೂಲಕ ಶೇಕಡಾ 200ರಷ್ಟು ರಿಟರ್ನ್ಸ್ ತಂದುಕೊಟ್ಟಿದೆ.

Multibagger Penny Stock: ಒಂದೇ ತಿಂಗಳಲ್ಲಿ ಶೇ 200ರ ರಿಟರ್ನ್ಸ್ ಒದಗಿಸಿಕೊಟ್ಟಿದೆ 2 ರೂ.ಗಿಂತ ಕಡಿಮೆ ಬೆಲೆಯ ಈ ಷೇರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Jan 12, 2023 | 2:50 PM

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಅತಿಹೆಚ್ಚು ರಿಟರ್ನ್ಸ್ ತಂದುಕೊಟ್ಟ ಮಲ್ಟಿಬ್ಯಾಗರ್ ಸ್ಟಾಕ್​​​ಗಳ (Multibagger Stock) ಪೈಕಿ ಜೈಮಾತಾ ಗ್ಲಾಸ್ ಲಿಮಿಟೆಡ್ (Jai Mata Glass Ltd) ಕಂಪನಿಯ ಷೇರು ಮುಂಚೂಣಿಯಲ್ಲಿದೆ. ಈ ಸ್ಮಾಲ್ ಕ್ಯಾಪ್ ಷೇರು ಹೂಡಿಕೆದಾರರಿಗೆ ಒಂದೇ ತಿಂಗಳಿನಲ್ಲಿ ಶೇಕಡಾ 200ರ ರಿಟರ್ನ್ಸ್ ತಂದುಕೊಟ್ಟಿದೆ. ಈ ಷೇರು ನಿರಂತರವಾಗಿ ಉತ್ತಮ ವಹಿವಾಟು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2023ರ ಎಲ್ಲ ಟ್ರೇಡಿಂಗ್​ ಸೆಷನ್​ಗಳಲ್ಲಿಯೂ ಜೈಮಾತಾ ಗ್ಲಾಸ್ ಲಿಮಿಟೆಡ್ ಷೇರು ಅಪ್ಪರ್ ಸರ್ಕ್ಯೂಟ್​​ನಲ್ಲೇ ವಹಿವಾಟು ನಡೆಸಿದೆ. ಷೇರಿನ ಬೆಲೆ 0.49ರಿಂದ 1.58 ರೂ.ಗೆ ಹೆಚ್ಚಳವಾಗುವ ಮೂಲಕ ಶೇಕಡಾ 200ರಷ್ಟು ರಿಟರ್ನ್ಸ್ ತಂದುಕೊಟ್ಟಿದೆ. ಕಳೆದ ಆರು ತಿಂಗಳುಗಳಲ್ಲಿ ಈ ಪೆನ್ನಿ ಸ್ಟಾಕ್ 0.38ರಿಂದ 1.58 ರೂ.ವರೆಗೆ ಮೌಲ್ಯ ವೃದ್ಧಿಸಿಕೊಂಡಿದ್ದು, ಒಟ್ಟಾರೆಯಾಗಿ ಹೂಡಿಕೆದಾರರಿಗೆ ಶೇಕಡಾ 315ರ ಗಳಿಕೆ ತಂದುಕೊಟ್ಟಿದೆ. ದೀರ್ಘಾವಧಿಯ ಹೂಡಿಕೆದಾರರು ಶೇಕಡಾ 225ರ ವರೆಗೆ ರಿಟರ್ನ್ಸ್ ಗಳಿಸಿದ್ದಾರೆ.

ಷೇರು ಹೂಡಿಕೆ ಲೆಕ್ಕಾಚಾರ

ಜೈಮಾತಾ ಗ್ಲಾಸ್ ಲಿಮಿಟೆಡ್​​ನಲ್ಲಿ ಒಂದು ವಾರದ ಹಿಂದೆ ಹೂಡಿಕೆದಾರರೊಬ್ಬರು 1 ಲಕ್ಷ ರೂ. ಹೂಡಿಕೆ ಮಾಡಿದ್ದರು ಎಂದಿಟ್ಟುಕೊಂಡರೆ, ಅವರ ಸಂಪತ್ತು ಈಗ ಈಗಿನ ಷೇರು ಮೌಲ್ಯ ಲೆಕ್ಕಾಚಾರದ ಪ್ರಕಾರ, 1.20 ಲಕ್ಷ ರೂ. ಆಗಿರುತ್ತದೆ. ಒಂದು ತಿಂಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಅದೀಗ 3 ಲಕ್ಷ ರೂ. ಆಗಿರುತ್ತದೆ. ಆರು ತಿಂಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಈಗ 4.15 ಲಕ್ಷ ರೂ. ಆಗಿರುತ್ತದೆ. ಒಂದು ವರ್ಷದ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಇದೀಗ 3.25 ಲಕ್ಷ ರೂ. ರಿಟರ್ನ್ಸ್ ಬಂದಿರುತ್ತದೆ. ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಬಿಎಸ್​​ಇ (ಬಾಂಬೆ ಸ್ಟಾಕ್ ಎಕ್ಸ್​ಚೇಂಜ್) ಯಲ್ಲಿ ಮಾತ್ರ ಲಭ್ಯವಿದೆ.

ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​​​ ಎಂದರೆ…

ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಅಥವಾ ಷೇರು ಎಂದರೆ ಅತಿ ಕಡಿಮೆ ಬೆಲೆಗೆ ಷೇರು ಮಾರುಕಟ್ಟೆಯಲ್ಲಿ ದೊರೆಯುವ ಷೇರುಗಳಾಗಿವೆ. ಸಾಮಾನ್ಯವಾಗಿ ಹೂಡಿಕೆಯ ಸಂದರ್ಭದಲ್ಲಿ ಅತಿ ಕಡಿಮೆ ಮುಖ ಬೆಲೆಗೆ ಬಿಡುಗಡೆ ಮಾಡಿರುವ ಷೇರುಗಳನ್ನು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ; ಒಬ್ಬ ಹೂಡಿಕೆದಾರ ನಿರ್ದಿಷ್ಟ ಅವಧಿಗೆ 5 ರೂ. ಹೂಡಿಕೆ ಮಾಡಿ ಒಂದು ಷೇರು ಕೊಳ್ಳುತ್ತಾನೆ ಎಂದುಕೊಂಡರೆ, ಅದು ಆತನಿಗೆ 10 ರೂ. ರಿಟರ್ನ್ಸ್ ತಂದುಕೊಟ್ಟರೆ ಅದನ್ನು ಎರಡು ಬ್ಯಾಗರ್ ಷೇರು ಎಂದು ಕರೆಯಲಾಗುತ್ತದೆ. ಇದೇ ರೀತಿ ಹಲವು ಪಟ್ಟು ರಿಟರ್ನ್ಸ್ ತಂದುಕೊಡುವ ಷೇರುಗಳು ಮಲ್ಟಿಬ್ಯಾಗರ್​​ ಎಂದು ಪರಿಗಣಿಸಲ್ಪಡುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ