Multibagger stock: ಲಕ್ಷ ರೂಪಾಯಿ ಹೂಡಿಕೆಯನ್ನು ಈ ಕಂಪೆನಿ ಷೇರು 2 ಕೋಟಿ ಮಾಡಿಕೊಟ್ಟಿದ್ದು ಕಂಡಿರಾ?
ಈ ಮಲ್ಟಿಬ್ಯಾಗರ್ ಷೇರಿನಲ್ಲಿ 20 ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಇವತ್ತಿಗೆ 2.21 ಕೋಟಿ ರೂಪಾಯಿ ಆಗಿರುತ್ತಿತ್ತು. ಯಾವುದು ಆ ಸ್ಟಾಕ್ ಎಂಬ ವಿವರಣೆ ಇಲ್ಲಿದೆ.
ಕೇವಲ ಷೇರುಗಳ ಖರೀದಿ ಮತ್ತು ಮಾರಾಟದಲ್ಲಿ ಹಣ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಸರಿಯಾದ ಬೆಲೆ ಸಿಗುವ ತನಕ ಕಾಯಬೇಕು. ಆಗಷ್ಟೇ ಒಳ್ಳೆ ಲಾಭ ನೋಡುವುದಕ್ಕೆ ಸಾಧ್ಯ. ‘ಖರೀದಿಸಿ, ಇಟ್ಟುಕೊಳ್ಳಿ ಮತ್ತು ಮರೆತುಬಿಡಿ’ ತಂತ್ರವನ್ನು ಅನುಸರಿಸಿದಲ್ಲಿ ಬಹಳ ಕಡಿಮೆ ಮೊತ್ತವನ್ನೂ ಬಹಳ ದೊಡ್ಡ ಗಾತ್ರಕ್ಕೆ ಹೆಚ್ಚಿಸಬಹುದು. ಈ ಮಾತಿಗೆ ಅದಾನಿ ಸಮೂಹದ ಸ್ಟಾಕ್ – ಅದಾನಿ ಎಂಟರ್‌ಪ್ರೈಸಸ್ ಒಂದು ಸ್ಪಷ್ಟ ಉದಾಹರಣೆ. ಕಳೆದ 20 ವರ್ಷಗಳಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರಿನ ಬೆಲೆಯು ರೂ. 9.41ರಿಂದ ರೂ. 2082.10 ಮಟ್ಟಕ್ಕೆ ಏರಿದೆ. ಅಲ್ಲಿಗೆ ಈ ಅವಧಿಯಲ್ಲಿ ಸುಮಾರು 221 ಪಟ್ಟು ಏರಿಕೆ ಆದಂತೆ ಆಯಿತು. ಇದರರ್ಥ, ಕಳೆದ 20 ವರ್ಷಗಳಲ್ಲಿ ಈ ಮಲ್ಟಿಬ್ಯಾಗರ್ (Multibagger) ಸ್ಟಾಕ್ ತನ್ನ ಷೇರುದಾರರಿಗೆ ಸುಮಾರು ಶೇ 22,000ದಷ್ಟು ಲಾಭವನ್ನು ನೀಡಿದೆ.
ಅದಾನಿ ಎಂಟರ್‌ಪ್ರೈಸಸ್ ಷೇರು ಬೆಲೆ ಇತಿಹಾಸ
ಈ ಅದಾನಿ ಸ್ಟಾಕ್ ಈ ವರ್ಷದಲ್ಲಿ ಇಲ್ಲಿಯ ತನಕ (Year To Date) ಜನವರಿಯಿಂದ ಜೂನ್ನಲ್ಲಿ ರೂ. 1717ರಿಂದ ರೂ. 2082ರ ಮಟ್ಟಕ್ಕೆ ಏರಿದೆ. ಇದು 2022ರಲ್ಲಿ ಶೇ 21ರಷ್ಟು ಏರಿಕೆಯನ್ನು ದಾಖಲಿಸಿದೆ. ಕಳೆದ ಒಂದು ವರ್ಷದಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರಿನ ಬೆಲೆ ರೂ. 1500ರಿಂದ ರೂ. 2082ರ ಮಟ್ಟಕ್ಕೆ ಏರಿದ್ದು, ಸುಮಾರು ಶೇ 40ರಷ್ಟು ಹೆಚ್ಚಳವಾಗಿದೆ. ಅದೇ ರೀತಿ, ಕಳೆದ 5 ವರ್ಷಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಪ್ರತಿ ಹಂತಕ್ಕೆ ರೂ. 130ರಿಂದ ರೂ. 2082ಕ್ಕೆ ಹೆಚ್ಚಳವಾಗಿದ್ದು, ಈ ಅವಧಿಯಲ್ಲಿ ಸುಮಾರು ಶೇ 1500ರಷ್ಟು ಏರಿಕೆಯಾಗಿದೆ.
ಕಳೆದ 10 ವರ್ಷಗಳಲ್ಲಿ ಅದಾನಿ ಎಂಟರ್‌ಪ್ರೈಸಸ್ ಸುಮಾರು ರೂ. 222ರಿಂದ ರೂ. 2082ಕ್ಕೆ ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಶೇ 850ರಷ್ಟು ಮೇಲೇರಿದೆ. ಇನ್ನು ಕಳೆದ 20 ವರ್ಷಗಳಲ್ಲಿ ಈ ಮಲ್ಟಿಬ್ಯಾಗರ್ ಅದಾನಿ ಸ್ಟಾಕ್ ರೂ. 9.41ರಿಂದ ರೂ. 2082.10 ಮಟ್ಟಕ್ಕೆ ಏರಿದ್ದು, ಈ ಎರಡು ದಶಕಗಳ ಅವಧಿಯಲ್ಲಿ ಶೇ 22,000ದಷ್ಟು ಹೆಚ್ಚಳವಾಗಿದೆ.
ಹೂಡಿಕೆ ಮೇಲೆ ಪರಿಣಾಮ
2022ರ ಆರಂಭದಲ್ಲಿ ಹೂಡಿಕೆದಾರರು ಈ ಮಲ್ಟಿಬ್ಯಾಗರ್ ಅದಾನಿ ಸ್ಟಾಕ್‌ನಲ್ಲಿ ರೂ. 1 ಲಕ್ಷವನ್ನು ಹೂಡಿಕೆ ಮಾಡಿದ್ದಲ್ಲಿ ಇಲ್ಲಿಯ ತನಕ ಆ ಷೇರು ಹಾಗೇ ಉಳಿಸಿಕೊಂಡಿದ್ದರೆ ರೂ. 1.21 ಲಕ್ಷಕ್ಕೆ ಬದಲಾಗುತ್ತಿತ್ತು. ಹೂಡಿಕೆದಾರರು ಒಂದು ವರ್ಷದ ಹಿಂದೆ ಇದೇ ಮೊತ್ತ ಹೂಡಿಕೆ ಮಾಡಿದ್ದರೆ ಇಂದು ರೂ. 1.40 ಲಕ್ಷ ಆಗಿರುತ್ತಿತ್ತು. 5 ವರ್ಷಗಳ ಹಿಂದೆ ಅದಾನಿ ಎಂಟರ್‌ಪ್ರೈಸಸ್ ಷೇರುಗಳಲ್ಲಿ ರೂ. 1 ಲಕ್ಷ ಹಾಕಿದ್ದಲ್ಲಿ ಅದರ ಮೌಲ್ಯ ಈಗ ರೂ. 16 ಲಕ್ಷ.
ಹೂಡಿಕೆದಾರರು 10 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಅದೀಗ ರೂ. 9.50 ಲಕ್ಷವಾಗಿರುತ್ತಿತ್ತು. 20 ವರ್ಷಗಳ ಹಿಂದೆ ಅದಾನಿ ಎಂಟರ್‌ಪ್ರೈಸಸ್ ಷೇರುಗಳಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಅದೇ ರೂ. 1 ಲಕ್ಷ ಇಂದು ರೂ. 2.21 ಕೋಟಿಗೆ ತಲುಪಿರುತ್ತಿತ್ತು.
ಅದಾನಿ ಎಂಟರ್‌ಪ್ರೈಸಸ್ ಷೇರುಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ರೂ. 2.45 ಲಕ್ಷ ಕೋಟಿ ಮತ್ತು ಸೋಮವಾರದ ವಹಿವಾಟಿನ ಪ್ರಮಾಣ ಸುಮಾರು 17.64 ಲಕ್ಷ. ಅದಾನಿ ಎಂಟರ್‌ಪ್ರೈಸಸ್ ಷೇರಿನ ಪ್ರತಿ ಷೇರಿನ ಪ್ರಸ್ತುತ ಬುಕ್ ವ್ಯಾಲ್ಯೂ 228 ರೂಪಾಯಿಗಿಂತ ಸ್ವಲ್ಪ ಮೇಲಿದೆ. ಎನ್‌ಎಸ್‌ಇಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರುಗಳ 52 ವಾರದ ಗರಿಷ್ಠ ಮೌಲ್ಯ ರೂ. 2,420.95 ಆಗಿದ್ದರೆ, ಅದರ 52 ವಾರಗಳ ಕನಿಷ್ಠ ಮಟ್ಟ ರೂ. 1201.20 ಆಗಿದೆ.
(ಎಚ್ಚರಿಕೆ: ಈ ಲೇಖನವು ಮಾಹಿತಿ ಉದ್ದೇಶದಿಂದಲೇ ಹೊರತು ಖರೀದಿಸುವುದಕ್ಕೆ ಶಿಫಾರಸಲ್ಲ. ಷೇರು ಖರೀದಿ ಮತ್ತು ಮಾರಾಟ ಹಣಕಾಸಿನ ವಿಚಾರ ಒಳಗೊಂಡಿರುವುದರಿಂದ ಸಂಬಂಧ ಪಟ್ಟ ತಜ್ಞರ ಸಲಹೆ ಪಡೆದು, ಆ ನಂತರ ಸ್ವಂತ ತೀರ್ಮಾನ ಕೈಗೊಳ್ಳುವುದು ಉತ್ತಮ)
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ
Published On - 10:44 am, Tue, 14 June 22