Social Media: ನಕಲಿ ಖಾತೆಗಳ ತಡೆಗಟ್ಟಲು ಸಾಮಾಜಿಕ ಮಾಧ್ಯಮಗಳಿಗೆ ಯುರೋಪಿಯನ್ ಒಕ್ಕೂಟದಿಂದ ಹೊಸ ನಿಯಮಾವಳಿ, ತಪ್ಪಿದಲ್ಲಿ ದಂಡ
ನಕಲಿ ಹಾಗೂ ಗುರುತು ಮರೆ ಮಾಡಿದಂಥ ಖಾತೆಗಳನ್ನು ನಿಗ್ರಹಿಸುವ ಉದ್ದೇಶದೊಂದಿಗೆ ಯುರೋಪಿಯನ್ ಒಕ್ಕೂಟದಿಂದ ಸಾಮಾಜಿಕ ಮಾಧ್ಯಮಗಳಿಗೆ ಹೊಸ ನಿಯಮಾವಳಿ ಬರುತ್ತಿದೆ. ಒಂದು ವೇಳೆ ಇದಕ್ಕೆ ತಪ್ಪಿದಲ್ಲಿ ದಂಡ ತೆರಬೇಕಾಗುತ್ತದೆ.
ಗೂಗಲ್ (Google), ಫೇಸ್ಬುಕ್ ಇಂಕ್ (Facebook Inc), ಟ್ವಿಟ್ಟರ್ ಇಂಕ್ (Twitter Inc) ಮತ್ತು ಇತರ ಟೆಕ್ ಕಂಪೆನಿಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ತಿರುಚಲಾದ ಮತ್ತು ನಕಲಿ ಖಾತೆಗಳನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಇದಕ್ಕೆ ತಪ್ಪಿದಲ್ಲಿ ಬದಲಾವಣೆ ಮಾಡಲಾದ ಯುರೋಪಿಯನ್ ಒಕ್ಕೂಟದ ಕೋಡ್ ಆಫ್ ಪ್ರಾಕ್ಟೀಸ್ ಅಡಿಯಲ್ಲಿ ಭಾರಿ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಯುರೋಪಿಯನ್ ಒಕ್ಕೂಟದ ದಾಖಲೆಗಳನ್ನು ನೋಡಿ, ವರದಿ ಮಾಡಲಾಗಿದೆ. ಯುರೋಪಿಯನ್ ಕಮಿಷನ್ ನಕಲಿ ಸುದ್ದಿ ವಿರುದ್ಧದ ಶಿಸ್ತುಕ್ರಮದ ಭಾಗವಾಗಿ ಗುರುವಾರ ತಪ್ಪಾದ ಮಾಹಿತಿಯ ಕುರಿತು ನವೀಕರಿಸಿದ ಪದ್ಧತಿಯ ಸಂಹಿತೆ ಪ್ರಕಟಿಸುವ ನಿರೀಕ್ಷೆಯಿದೆ. 2018ರಲ್ಲಿ ಪರಿಚಯಿಸಲಾದ ಸ್ವಯಂಪ್ರೇರಿತ ಸಂಹಿತೆ ಈಗ ಸಹ ನಿಯಂತ್ರಣ ಯೋಜನೆಯಾಗಿ ಮಾರ್ಪಟ್ಟಿದ್ದು, ನಿಯಂತ್ರಕರು ಮತ್ತು ಸಂಹಿತೆಗೆ ಸಹಿ ಮಾಡುವವರ ಮಧ್ಯೆ ಜವಾಬ್ದಾರಿಯನ್ನು ಹಂಚಿಕೊಳ್ಳಲಾಗುತ್ತದೆ.
ನವೀಕರಿಸಿದ ಸಂಹಿತೆಯು ತಿರುಚಲಾದ ಮತ್ತು ನಕಲಿ ಖಾತೆಗಳಂತಹ ಉದಾಹರಣೆಗಳನ್ನು ವಿವರಿಸುತ್ತದೆ, ಅದನ್ನು ಸಹಿ ಮಾಡಿದವರು ನಿಭಾಯಿಸಬೇಕಾಗುತ್ತದೆ. “ಸಂಬಂಧಿತ ಸಹಿದಾರರು ದುರುದ್ದೇಶಪೂರಿತ ಬಳಕೆದಾರರು ಬಳಸುವ ನಡವಳಿಕೆಗಳು ಮತ್ತು ಕಾರ್ಯತಂತ್ರಗಳು, ತಂತ್ರಗಳು ಮತ್ತು ಕಾರ್ಯವಿಧಾನಗಳ (TTPs) ಇತ್ತೀಚಿನ ಪುರಾವೆಗಳ ಆಧಾರದ ಮೇಲೆ ತಮ್ಮ ಸೇವೆಗಳಲ್ಲಿ ಅನುಮತಿಸಲಾಗದ ಕುಶಲ ನಡವಳಿಕೆಗಳು ಮತ್ತು ಅಭ್ಯಾಸಗಳ ಬಗ್ಗೆ ಸ್ಪಷ್ಟವಾದ ನೀತಿಗಳನ್ನು ಅಳವಡಿಸಿಕೊಳ್ಳುತ್ತಾರೆ, ಬಲಪಡಿಸುತ್ತಾರೆ ಮತ್ತು ಕಾರ್ಯಗತಗೊಳಿಸುತ್ತಾರೆ,” ಎಂದು ದಾಖಲೆ ಹೇಳಿದೆ.
ತಿರುಚಲಾದಂಥವು ಕಂಪ್ಯೂಟರ್ ತಂತ್ರಗಳಿಂದ ರಚಿಸಲಾದ ಹೈಪರ್ ರಿಯಲಿಸ್ಟಿಕ್ ಫೋರ್ಜರಿಗಳಾಗಿದ್ದು, ಅವುಗಳು ರಾಜಕೀಯ ಸನ್ನಿವೇಶದಲ್ಲಿ ಬಳಸಿದಾಗ ವಿಶ್ವಾದ್ಯಂತ ಎಚ್ಚರಿಕೆ ಉಂಟುಮಾಡುತ್ತವೆ. ಈ ವರ್ಷದ ಆರಂಭದಲ್ಲಿ 27 ದೇಶಗಳ ಯುರೋಪಿಯನ್ ಒಕ್ಕೂಟ ಒಪ್ಪಿಕೊಂಡಿರುವ ಡಿಜಿಟಲ್ ಸೇವೆಗಳ ಕಾಯ್ದೆ (DSA) ಎಂದು ಕರೆಯುವ ಕಠಿಣವಾದ ಹೊಸ ಯುರೋಪಿಯನ್ ಒಕ್ಕೂಟದ ನಿಯಮಗಳಿಗೆ ಸಂಹಿತೆಯನ್ನು ಜೋಡಣೆ ಮಾಡಲಾಗುತ್ತದೆ. ಇದು ತಪ್ಪು ಮಾಹಿತಿ ವಿರುದ್ಧ ಹೋರಾಡುವ ವಿಭಾಗವನ್ನು ಹೊಂದಿದೆ. ಪರಿಣಾಮವಾಗಿ, ಸಂಹಿತೆ ಅಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಪೂರೈಸಲು ವಿಫಲವಾದ ಕಂಪೆನಿಗಳು ಡಿಎಸ್ಎ ನಿಯಮಗಳ ಆಧಾರದ ಮೇಲೆ ತಮ್ಮ ಜಾಗತಿಕ ವಹಿವಾಟಿನ ಶೇ 6ರಷ್ಟು ದಂಡವನ್ನು ಎದುರಿಸಬೇಕಾಗುತ್ತದೆ. ಅವರು ಸಂಹಿತೆಗೆ ಸೈನ್ ಅಪ್ ಮಾಡಿದ ನಂತರ ಕ್ರಮಗಳನ್ನು ಕಾರ್ಯಗತಗೊಳಿಸಲು ಆರು ತಿಂಗಳಿವೆ.
ಸಹಿ ಮಾಡುವವರು ತಪ್ಪು ಮಾಹಿತಿಯನ್ನು ಹೊಂದಿರುವ ಜಾಹೀರಾತನ್ನು ನಿಭಾಯಿಸಲು ಮತ್ತು ರಾಜಕೀಯ ಜಾಹೀರಾತಿನ ಮೇಲೆ ಹೆಚ್ಚು ಪಾರದರ್ಶಕತೆಯನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. “ತಪ್ಪು ಮಾಹಿತಿ ವಿರುದ್ಧದ ಅಭ್ಯಾಸ ಸಂಹಿತೆಗೆ ಭಾರೀ ನಿರಾಕರಣೆ ನಿರ್ಬಂಧಗಳನ್ನು ಒಳಗೊಂಡಂತೆ ಡಿಎಸ್ಎ ಕಾನೂನು ಬೆಂಬಲವನ್ನು ಒದಗಿಸುತ್ತದೆ,” ಎಂದು ತಪ್ಪು ಮಾಹಿತಿ ಮೇಲೆ ದಮನಕ್ಕೆ ಮುಂದಾಗಿರುವ ಯುರೋಪಿಯನ್ ಒಕ್ಕೂಟ ಉದ್ಯಮದ ಮುಖ್ಯಸ್ಥ ಥಿಯೆರಿ ಬ್ರೆಟನ್ ಅವರು ರಾಯಿಟರ್ಸ್ಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆಯೋಗದ ಉಪಾಧ್ಯಕ್ಷರಾದ ವೆರಾ ಜುರೊವಾ ಅವರು ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವನ್ನು ಈ ಹಿಂದೆ ವಿಶೇಷ ಕಾರ್ಯಾಚರಣೆ ಎಂದು ಕರೆಯಲಾಗಿತ್ತು. ಆದರೆ ಸಂಹಿತೆಯಲ್ಲಿನ ಕೆಲವು ಬದಲಾವಣೆಗಳಿಗೆ ಆಧಾರವಾಗಿದೆ.
“ಒಮ್ಮೆ ಸಂಹಿತೆ ಕಾರ್ಯ ನಿರ್ವಹಿಸಿದ ನಂತರ ರಷ್ಯಾದಿಂದ ಬರುವ ತಪ್ಪು ಮಾಹಿತಿಯನ್ನು ಸರಿಪಡಿಸಲು ನಾವು ಉತ್ತಮವಾಗಿ ಸಿದ್ಧರಾಗುತ್ತೇವೆ,” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Tue, 14 June 22