Multibagger: ಈ ಮಲ್ಟಿಬ್ಯಾಗರ್​ ಸ್ಟಾಕ್​ನಲ್ಲಿ ಹೂಡಿದ ರೂ. 1 ಲಕ್ಷ 8 ವರ್ಷದಲ್ಲಿ 61 ಲಕ್ಷ ರೂಪಾಯಿ

ಈ ರಾಸಾಯನಿಕ ಸ್ಟಾಕ್​ನಲ್ಲಿ ಮಾಡಿದ ರೂ. 1 ಲಕ್ಷದ ಹೂಡಿಕೆ 8 ವರ್ಷದಲ್ಲಿ 61 ಲಕ್ಷ ರೂಪಾಯಿ ಆಗಿದೆ. ಆ ಷೇರಿನ ಬಗ್ಗೆ ವಿವರ ಇಲ್ಲಿದೆ.

Multibagger: ಈ ಮಲ್ಟಿಬ್ಯಾಗರ್​ ಸ್ಟಾಕ್​ನಲ್ಲಿ ಹೂಡಿದ ರೂ. 1 ಲಕ್ಷ 8 ವರ್ಷದಲ್ಲಿ 61 ಲಕ್ಷ ರೂಪಾಯಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Mar 12, 2022 | 12:03 PM

ಒಂದು ಸ್ಟಾಕ್‌ನಲ್ಲಿ ಹೂಡಿಕೆ ಮಾಡುವುದು ಅಂದರೆ ಕಂಪೆನಿಯಲ್ಲಿ ಹೂಡಿಕೆ ಮಾಡಿದಂತೆ. ಆದರೆ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡುವ ಗುಣ ಅಂತ ಇದ್ದರೆ, ಅದು ತಾಳ್ಮೆ. ಷೇರು ಹೂಡಿಕೆದಾರರಿಗೆ ಇದು ಪ್ರಮುಖ ಗುಣಗಳಲ್ಲಿ ಒಂದಾಗಿದೆ. ಮಾರುಕಟ್ಟೆಯ “ಜಗದ್ಗುರು” ವಾರೆನ್ ಬಫೆಟ್ (Warren Buffett) ಅವರು ಹೇಳಿರುವಂತೆ, ಹೂಡಿಕೆದಾರರಿಗೆ ಒಮ್ಮೆ ವ್ಯಾಪಾರ ಮಾದರಿ ಮತ್ತು ಅದರ ಸುಸ್ಥಿರತೆ ಬಗ್ಗೆ ಮನವರಿಕೆಯಾದಲ್ಲಿ, ‘ಖರೀದಿಸಿ, ಇಟ್ಟುಕೊಳ್ಳಿ ಮತ್ತು ಮರೆತುಬಿಡಿ’ ಎಂಬ ಸಿದ್ಧಾಂತವನ್ನು ಬಳಸಿಕೊಂಡು, ದೀರ್ಘಾವಧಿಯವರೆಗೆ ಸ್ಟಾಕ್ ಅನ್ನು ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಈ ಸ್ಟಾಕ್ ಹೂಡಿಕೆ ತಂತ್ರವು ಹೇಗೆ ಪ್ರತಿಫಲ ನೀಡುತ್ತದೆ ಎಂಬುದನ್ನು ತಿಳಿಯಲು, ಆಲ್ಕಿಲ್ ಅಮೈನ್ಸ್ ಷೇರು ಬೆಲೆ ಇತಿಹಾಸವನ್ನು ನೋಡಬೇಕು. ಈ ರಾಸಾಯನಿಕ ಸ್ಟಾಕ್ 2021 ರಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಆದರೆ ಇದು ತನ್ನ ಹೂಡಿಕೆದಾರರಿಗೆ ಅದ್ಭುತ ಆದಾಯವನ್ನು ನೀಡುವ ಇತಿಹಾಸವನ್ನು ಹೊಂದಿದೆ. ಈ ಮಲ್ಟಿಬ್ಯಾಗರ್ ಸ್ಟಾಕ್ ಕಳೆದ 8 ವರ್ಷಗಳಲ್ಲಿ ರೂ. 49ರಿಂದ ರೂ. 3010ಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು ಶೇ 6000ದಷ್ಟು ರಿಟರ್ನ್ಸ್ ನೀಡಿದೆ.

ಅಲ್ಕಿಲ್ ಅಮೈನ್ಸ್ ಷೇರು ಬೆಲೆ ಇತಿಹಾಸ 2021ರ ಆಗಸ್ಟ್​ನಲ್ಲಿ ಜೀವಮಾನದ ಗರಿಷ್ಠ ಮಟ್ಟಕ್ಕೆ ಏರಿದ ನಂತರ ಕಳೆದ ಆರು ತಿಂಗಳಿನಿಂದ ಈ ಮಲ್ಟಿಬ್ಯಾಗರ್ ಸ್ಟಾಕ್ ಮಾರಾಟದ ಒತ್ತಡದಲ್ಲಿದೆ. ವರ್ಷದಿಂದ ಇಲ್ಲಿಯವರೆಗೆ (YTD) ಸಮಯದಲ್ಲಿ ಆಲ್ಕಿಲ್ ಅಮೈನ್ಸ್ ಷೇರಿನ ಬೆಲೆ ರೂ. 3800ರಿಂದ ರೂ. 3010 ಮಟ್ಟಕ್ಕೆ ಕುಸಿದಿದೆ. ಈ ಅವಧಿಯಲ್ಲಿ ಶೇ 20ರಷ್ಟು ನಷ್ಟವಾಗಿದೆ. ಕಳೆದ 6 ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಕೆಮಿಕಲ್ ಸ್ಟಾಕ್ ಸುಮಾರು ರೂ. 4125 ರಿಂದ ರೂ. 3010 ಮಟ್ಟಕ್ಕೆ ಇಳಿದಿದ್ದು, ಈ ಅವಧಿಯಲ್ಲಿ ಸುಮಾರು ಶೇ 27ರಷ್ಟು ನಷ್ಟವಾಗಿದೆ. ಆದರೂ ಕೊವಿಡ್ ನಂತರದ ಏರಿಕೆ ಹಿನ್ನೆಲೆಯಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಕಳೆದ ಒಂದು ವರ್ಷದಲ್ಲಿ ಶೇಕಡಾ 46ರಷ್ಟು ಆದಾಯವನ್ನು ಗಳಿಸಿದೆ. ಕಳೆದ 5 ವರ್ಷಗಳಲ್ಲಿ ಅಲ್ಕಿಲ್ ಅಮೈನ್ಸ್ ಷೇರಿನ ಬೆಲೆಯು ರೂ. 148.64ರಿಂದ ರೂ. 3010ರ ವರೆಗೆ ಪ್ರತಿ ಹಂತಕ್ಕೆ ಏರಿಕೆಯಾಗಿದ್ದು, ಈ ಅವಧಿಯಲ್ಲಿ ಸುಮಾರು ಶೇ 1900ರಷ್ಟು ಏರಿಕೆಯಾಗಿದೆ.

ಅದೇ ರೀತಿ, ಅಲ್ಕಿಲ್ ಅಮೈನ್ಸ್ ಷೇರಿನ ಬೆಲೆಯು ರೂ. 49ರಿಂದ (ಎನ್‌ಎಸ್‌ಇಯಲ್ಲಿ 7ನೇ ಮಾರ್ಚ್ 2014ರಂದು ಮುಕ್ತಾಯದ ಬೆಲೆ) ರೂ. 3010 (ಎನ್‌ಎಸ್‌ಇಯಲ್ಲಿ ಮಾರ್ಚ್ 11, 2022ರಂದು ಮುಕ್ತಾಯದ ಬೆಲೆ) ಮಟ್ಟಕ್ಕೆ ಏರಿದ್ದು, ಇದು ಸುಮಾರು 8 ವರ್ಷಗಳ ಅವಧಿಯಲ್ಲಿ ಸುಮಾರು 61 ಪಟ್ಟು ಏರಿಕೆಯಾಗಿದೆ.

ರೂ. 1 ಲಕ್ಷದಿಂದ ರೂ. 61 ಲಕ್ಷಕ್ಕೆ ಅಲ್ಕಿಲ್ ಅಮೈನ್ಸ್​ (Alkyl Amines) ಷೇರಿನ ಬೆಲೆ ಇತಿಹಾಸವನ್ನು ನೋಡುವುದಾದರೆ, ಹೂಡಿಕೆದಾರರು ಈ ಸ್ಟಾಕ್‌ನಲ್ಲಿ ದೀರ್ಘಕಾಲೀನ ಸಮಯದಲ್ಲಿ ರೂ. 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ ಆ ರೂ. 1 ಲಕ್ಷವು ಒಂದು ವರ್ಷದಲ್ಲಿ ರೂ. 1.46 ಲಕ್ಷ ಆಗುತ್ತಿತ್ತು. ಹೂಡಿಕೆದಾರರು 5 ವರ್ಷಗಳ ಹಿಂದೆ ಈ ಷೇರುಗಳಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಅದು ಇಂದು ರೂ. 20 ಲಕ್ಷಕ್ಕಿಂತ ಸ್ವಲ್ಪ ಹೆಚ್ಚಾಗಿ ಬದಲಾಗುತ್ತಿತ್ತು. ಅದೇ ರೀತಿ, ಹೂಡಿಕೆದಾರರು 8 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷಕ್ಕೆ ಷೇರಿಗೆ ರೂ. 49ರ ಹಂತಗಳಲ್ಲಿ ಹೂಡಿಕೆ ಮಾಡಿದ್ದರೆ ಆ ರೂ. 1 ಲಕ್ಷ ಇಂದು ರೂ. 61 ಲಕ್ಷ ಆಗಿರುತ್ತಿತ್ತು.

ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ

Published On - 12:01 pm, Sat, 12 March 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್