AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karthik Sharma: ಒಂದು ಷೇರಿನ ಕಥೆ; 23,000 ಕೋಟಿ ರೂ ಒಡೆಯನಾದ ಕಾರ್ತಿಕ್ ಶರ್ಮಾ

Avis Stocks Makes Karthik Sharma Billionaire: ಆವಿಸ್ ಎಂಬ ಕಾರ್ ರೆಂಟಲ್ ಕಂಪನಿಯಲ್ಲಿ 10 ವರ್ಷದ ಹಿಂದೆ ಹೂಡಿಕೆ ಮಾಡಿದ್ದರ ಪ್ರತಿಫಲವಾಗಿ ಕಾರ್ತಿಕ್ ಶರ್ಮಾ ಎಂಬ ಭಾರತೀಯ ಅಮೆರಿಕನ್ ವ್ಯಕ್ತಿ ಇಂದು 23,000 ಕೋಟಿ ರೂ ಕುಬೇರನಾಗಿದ್ದಾರೆ.

Karthik Sharma: ಒಂದು ಷೇರಿನ ಕಥೆ; 23,000 ಕೋಟಿ ರೂ ಒಡೆಯನಾದ ಕಾರ್ತಿಕ್ ಶರ್ಮಾ
ಷೇರುಪೇಟೆ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 10, 2023 | 5:18 PM

Share

ನವದೆಹಲಿ: ಅದೃಷ್ಟ ಹೇಗಾದರೂ ಒಲಿದು ಬರಬಹುದು. ಕೆಲವರಿಗೆ ಲಾಟರಿಯಲ್ಲಿ ಜಾಕ್​ಪಾಟ್ ಹೊಡೆದು ಕೋಟ್ಯಾಧಿಪತಿಯಾಗುವ ಅದೃಷ್ಟ ಸಿಗಬಹುದು. ಭಾರತೀಯ ಮೂಲದ ಅಮೆರಿಕನ್ ಪ್ರಜೆ ಕಾರ್ತಿಕ್ ಶರ್ಮಾ (Karthik Sharma) ಈಗ 23,000 ಕೋಟಿ ರೂ ಆಸ್ತಿಯ ಕುಬೇರರಾಗಿದ್ದಾರೆ. ಇವರಿಗೆ ಯಾವುದೋ ದೊಡ್ಡ ಲಾಟರಿಯ ಜ್ಯಾಕ್​ಪಾಟ್ ಹೊಡೆದದ್ದಲ್ಲ. ಕೆಲ ವರ್ಷಗಳ ಹಿಂದೆ ಇವರು ಒಂದು ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದ್ದು ಈಗ ಅವರನ್ನು ಕೋಟಿ ಕೋಟಿಗಳ ಒಡೆಯನನ್ನಾಗಿಸಿದೆ. ದಶಕದ ಹಿಂದೆ ಇವರು ಹಣ ಹೂಡಿದ್ದ ಕಂಪನಿಯ ಷೇರು 2021ರಲ್ಲಿ ಇವರಿಗೆ 2 ಬಿಲಿಯನ್ ಡಾಲರ್ (ಸುಮಾರು 16,000 ಕೋಟಿ ರೂ) ಲಾಭ ತಂದುಕೊಟ್ಟಿದೆ. ಇಷ್ಟೆಲ್ಲಾ ಆಸ್ತಿ ಇದ್ದರೂ 48 ವರ್ಷದ ಕಾರ್ತಿಕ್ ಶರ್ಮಾ ಬಹಳ ಸರಳ ವ್ಯಕ್ತಿ.

ಕಾರ್ತಿಕ್ ಶರ್ಮಾ ಹಾಗೇ ಸುಮ್ಮನೆ ಅದೃಷ್ಟದಲ್ಲಿ ಷೇರುಗಳ ಮೇಲೆ ಹಣ ಹಾಕಿ ಲಾಭ ಮಾಡಿಕೊಂಡವರಲ್ಲ. ಇವರು ವಿಶ್ವದ ಅಗ್ರಗಣ್ಯ ಹೆಡ್ಜ್ ಫಂಡ್ ಮ್ಯಾನೇಜರ್​ಗಳಲ್ಲಿ (Hedge Fund Manager) ಒಬ್ಬರೆನಿಸಿದ್ದಾರೆ. ಐಐಟಿ ಪದವೀಧರರಾಗಿರುವ ಇವರು ಪ್ರಿನ್ಸ್​​ಟನ್ ಯೂನಿವರ್ಸಿಟಿಯಲ್ಲಿ ಎಂಎಸ್ ಮಾಡಿದ್ದಾರೆ. ಮೆಕಿನ್ಸೇ ಅಂಡ್ ಕಂಪನಿ (McKinsey & Company) ಎಂಬ ಕನ್ಸಲ್ಟಿಂಗ್ ಸಂಸ್ಥೆ, ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಎಂಬ ಹೂಡಿಕೆ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು. ಇವರೇ ಸ್ಥಾಪಿಸಿದ ಎಸ್​ಆರ್​ಎಸ್ ಇನ್ವೆಸ್ಟ್​ಮೆಂಟ್ಸ್ ಎಂಬ ಹೆಡ್ಜ್ ಫಂಡ್ ಕಂಪನಿ 10 ಬಿಲಿಯನ್ ಡಾಲರ್ (81,000 ಕೋಟಿ ರೂ) ಮೌಲ್ಯದ ಹೂಡಿಕೆಗಳನ್ನು ನಿರ್ವಹಿಸುತ್ತದೆ.

ಯಾವ ಕಂಪನಿಯ ಷೇರು ಕಾರ್ತಿಕ್ ಶರ್ಮಾ ಕೈಹಿಡಿಯಿತು?

ಐಐಟಿ ಮದ್ರಾಸ್​ನಲ್ಲಿ ಓದಿ ಬಳಿಕ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋದ ಕಾರ್ತಿಕ್ ಶರ್ಮಾ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಮೆಕಿನ್ಸೆ, ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್​ನಲ್ಲಿ ಕೆಲಸ ಮಾಡಿದ ಬಳಿಕ 2006ರಲ್ಲಿ ಎಸ್​ಆರ್​ಎಸ್ ಇನ್ವೆಸ್ಟ್​ಮೆಂಟ್ ಎಂಬ ತಮ್ಮದೇ ಕಂಪನಿಯನ್ನು ಹುಟ್ಟುಹಾಕಿದರು. ಎಸ್​ಆರ್​ಎಸ್ ಎಂಬುದು ಅವರ ತಂದೆಯ ಹೆಸರಿನ ಇನಿಷಿಯಲ್ ಅಕ್ಷರಗಳು.

ಇದನ್ನೂ ಓದಿSuicide Insurance: ಇನ್ಷೂರೆನ್ಸ್ ಮಾಡಿಸಿದವರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗಬಹುದು; ಈ ಬಗ್ಗೆ ನಿಯಮಗಳು ತಿಳಿದಿರಲಿ

2010ರಲ್ಲಿ ಆವಿಸ್ (Avis) ಎಂಬ ಕಾರ್ ರೆಂಟಲ್ ಕಂಪನಿಯಲ್ಲಿ ಹೂಡಿಕೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡರು. ಇದು 11 ವರ್ಷಗಳ ಬಳಿಕ ಕಾರ್ತಿಕ್ ಶರ್ಮಾಗೆ ಜಾಕ್​ಪಾಟ್ ತರುತ್ತದೆಂದು ಅವರೂ ಊಹಿಸಿರಲಿಕ್ಕಿಲ್ಲ. ಆವಿಸ್ ಕಂಪನಿಯ ಶೇ. 50ರಷ್ಟು ಷೇರುಗಳ ಪಾಲನ್ನು ಎಸ್​ಆರ್​ಎಸ್ ಹೊಂದಿದೆ. ಈ ಕಂಪನಿಯ ಷೇರು ಮೌಲ್ಯ ವರ್ಷಗಳುರುಳಿದಂತೆ 456 ಪ್ರತಿಶತದಷ್ಟು ಏರಿಕೆ ಆಗಿದೆ. 2021ರಲ್ಲಿ ಆವಿಸ್​ನಲ್ಲಿರುವ ಎಸ್​ಆರ್​ಎಸ್ ಪಾಲಿನ ಷೇರುಗಳ 23,000 ಕೋಟಿ ರೂ ಆಗಿದೆ.

ಟ್ಯಾಲೆಂಟ್ ಇಲ್ಲದ ವ್ಯಕ್ತಿ ಎಂದು ಕಾರ್ತಿಕ್ ಶರ್ಮಾಗೆ ಹಂಗಿಸಿದ್ದರಿಗೆ ಸಿಕ್ಕಿತು ಉತ್ತರ

1998ರಲ್ಲಿ ಮೆಕಿನ್ಸೆ ಅಂಡ್ ಕಂಪನಿಯನ್ನು ಸೇರಿದ್ದ ಕಾರ್ತಿಕ್ ಶರ್ಮಾ ಅಲ್ಲಿ 3 ವರ್ಷಗಳ ಕಾಲ ಕನ್ಸಲ್ಟೆಂಟ್ ಆಗಿದ್ದರು. ಆ ಬಳಿಕ ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಕಂಪನಿ ಸೇರಿದರು. ಅಲ್ಲಿ ಅವರು ಹೋದ ಹೊಸತರಲ್ಲಿ ಕಾರ್ತಿಕ್ ಶರ್ಮಾ ಅವರನ್ನು ಪ್ರತಿಭೆ ಇಲ್ಲದ ಪಾರ್ಟ್ನರ್ (Most Non-Talented Partner) ಎಂದು ಕುಚೋದ್ಯ ಮಾಡಲಾಗುತ್ತಿತ್ತಂತೆ. ಆದರೆ, ಸಂಕೋಚ ಸ್ವಭಾವದ ಕಾರ್ತಿಕ್ ಶರ್ಮಾ ಅದೇ ಕಂಪನಿಗೆ ಮ್ಯಾನೇಜಿಂಗ್ ಡೈರೆಕ್ಟರ್ ಆಗುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದರು.

ಇದನ್ನೂ ಓದಿProfitable Stocks; ಟಾಟಾ ಮೋಟಾರ್ಸ್ ಸೇರಿದಂತೆ ಹಲವು ಷೇರುಗಳಿಗೆ ಬೇಡಿಕೆ; ಹಣ ಹಾಕೋದಾದರೆ ಈ ಷೇರುಗಳು ಗಮನದಲ್ಲಿರಲಿ

2006ರಲ್ಲಿ ತಮ್ಮದೇ ಕಂಪನಿ ಸ್ಥಾಪಿಸಿ ಒಂದೂವರೆ ದಶಕದಲ್ಲಿ ವಿಶ್ವದ ಟಾಪ್ ಹೆಡ್ಜ್ ಫಂಡ್ ಮ್ಯಾನೇಜರ್​ಗಳ ಪಟ್ಟಿ ಸೇರಿದ್ದಾರೆ. ಅಷ್ಟೇ ಅಲ್ಲ 2022ರಲ್ಲಿ ಅತೀ ಕಡಿಮೆ ವಯಸ್ಸಿನ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲೂ ಅವರ ಹೆಸರು ಬಂದಿದೆ.

ಹೆಡ್ಜ್ ಫಂಡ್ ಕಂಪನಿ ಎಂಬುದು ಒಂದು ಕಂಪನಿಯ ಷೇರುಗಳ ಬೆಲೆ ಭರ್ಜರಿಯಾಗಿ ಹೆಚ್ಚಳವಾಗುವ ರೀತಿಯಲ್ಲಿ ವಿಭಿನ್ನ ಹೂಡಿಕೆ ತಂತ್ರಗಳನ್ನು ಅನುಸರಿಸುತ್ತದೆ. ಇದರ ಸೇವಾ ಶುಲ್ಕ ದುಬಾರಿಯಾಗಿದ್ದು, ದೊಡ್ಡ ದೊಡ್ಡ ಸಂಸ್ಥೆಗಳು, ಸಿರಿವಂತರು ಷೇರುಗಳಲ್ಲಿ ಲಾಭ ಪಡೆಯಲು ಹೆಡ್ಜ್ ಫಂಡ್ ಮ್ಯಾನೇಜರ್​ಗಳ ಮೊರೆ ಹೋಗುತ್ತಾರೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ