ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆ.
ಬೆಂಗಳೂರು, ಜನವರಿ 01: ಅಕ್ಷರ ದೋಷ, ಮದುವೆಯಾದ ಬಳಿಕ ಅಥವಾ ಇನ್ಯಾವುದೋ ಕಾರಣಕ್ಕೆ ಇಂದು ಬಹುತೇಕ ಎಲ್ಲ ವ್ಯವಹಾರಗಳಿಗೆ ಅಗತ್ಯವಾದ ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆ ಮಾಡಲೇ ಬೇಕಾಗುತ್ತದೆ. ಸಣ್ಣಪುಟ್ಟ ಬದಲಾವಣೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಮಾಡಬಹುದಾಗಿದ್ದರೆ, ದೊಡ್ಡ ಬದಲಾವಣೆಗಳಿಗೆ ಗೆಜೆಟ್ ನೋಟಿಫಿಕೇಶನ್ ಪ್ರಕ್ರಿಯೆ ಪಾಲಿಸಲೇ ಬೇಕಾಗುತ್ತದೆ.
ಆಧಾರ್ನಲ್ಲಿ ಹೆಸರು ಬದಲಾವಣೆ ಮಾಡಲು ಇರುವ ಪ್ರಮುಖ 3 ವಿಧಾನಗಳ ಬಗ್ಗೆ ಹಂತಗಳ ಸಮೇತವಾಗಿ ವಿವರಣೆ ಇಲ್ಲಿದೆ.
1. ಆನ್‌ಲೈನ್ ಮೂಲಕ ಹೆಸರು ಬದಲಾವಣೆ ಹೇಗೆ?
- ಅಧಿಕೃತ ವೆಬ್‌ಸೈಟ್ uidai.gov.in ಅಥವಾ myAadhaar Self-Service Portal ತೆರೆಯಿರಿ.
- ನಿಮ್ಮ 12-ಅಂಕಿಯ ಆಧಾರ್ ನಂಬರ್ ಮತ್ತು ಕ್ಯಾಪ್ಚಾ ನಮೂದಿಸಿ, ‘Send OTP’ ಕ್ಲಿಕ್ ಮಾಡಿ, ಮೊಬೈಲ್‌ಗೆ ಬಂದ OTP ನಮೂದಿಸಿ ಲಾಗಿನ್ ಆಗಿ.
- ‘Update Demographics Data’ ಕ್ಲಿಕ್ ಮಾಡಿ, ನಂತರ ‘Name’ ಆಯ್ಕೆ ಮಾಡಿ.
- ಸರಿಯಾದ ಹೆಸರನ್ನು ನಮೂದಿಸಿ, ಅದು ನಿಮ್ಮ ಬೆಂಬಲಿತ ದಾಖಲೆಯಲ್ಲಿರುವಂತೆಯೇ ಇರಬೇಕು.
- ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಮಾನ್ಯ ದಾಖಲೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ.
- 50 ರೂ. ಶುಲ್ಕವನ್ನು ಡೆಬಿಟ್/ಕ್ರೆಡಿಟ್ ಕಾರ್ಡ್, UPI ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ.
- ಯಶಸ್ವಿಯಾದ ನಂತರ URN ನಂಬರ್ ಬಳಸಿ ಅಪ್‌ಡೇಟ್ ಸ್ಟೇಟಸ್ ಟ್ರ್ಯಾಕ್ ಮಾಡಬಹುದು.
ಇದನ್ನೂ ಓದಿ: ಹೊಸ ಆಧಾರ್ ಆ್ಯಪ್ಗೂ ಹಿಂದಿನ ಎಂ ಆಧಾರ್ ಆ್ಯಪ್ಗೂ ಏನು ವ್ಯತ್ಯಾಸ? ಇಲ್ಲಿದೆ ಡೀಟೇಲ್ಸ್
2. ಆಫ್‌ಲೈನ್ ಮೂಲಕ ಹೆಸರು ಬದಲಾವಣೆ ಹೇಗೆ?
- ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ.
- ಅಲ್ಲಿ ಲಭ್ಯವಿರುವ ಆಧಾರ್ ಅಪ್‌ಡೇಟ್ ಫಾರ್ಮ್ ಅನ್ನು ಭರ್ತಿ ಮಾಡಿ.
- ಅಗತ್ಯವಿರುವ ದಾಖಲೆಗಳೊಂದಿಗೆ ಭರ್ತಿ ಮಾಡಿದ ಫಾರ್ಮ್ ಅನ್ನು ಸಲ್ಲಿಸಿ ಮತ್ತು ನಿಗದಿತ ಶುಲ್ಕ ಪಾವತಿಸಿ.
ಇವು ಹೆಸರಿನ ಸಣ್ಣಪುಟ್ಟ ಬದಲಾವಣೆಗೆ ಇರುವ ಪ್ರಕ್ರಿಯೆಗಳಾದರೆ ಪೂರ್ತಿ ಹೆಸರಿನ ಬದಲಾವಣೆಗೆ ಕೆಲವು ಸುದೀರ್ಘ ಪ್ರಕ್ರಿಯೆಯನ್ನು ಸಾರ್ವಜನಿಕರು ಪಾಲಿಸಬೇಕಾಗುತ್ತದೆ. ಇದಕ್ಕೆ ತಗಲುವ ಶುಲ್ಕವೂ ಕೊಂಚ ಹೆಚ್ಚು. ಹೆಸರು ಬದಲಾವಣೆ ಸೇವಾ ಕೇಂದ್ರದ ಮಾಹಿತಿ ಪ್ರಕಾರ ಕೇಸ್ಗಳ ಆಧಾರದಲ್ಲಿ ಶುಲ್ಕದಲ್ಲಿ ವ್ಯತ್ಯಾಸವಾಗಲಿದೆ. ಅಂದಾಜಿನ ಪ್ರಕಾರ 10-12 ಸಾವಿರ ರೂ. ಇದಕ್ಕೆ ವೆಚ್ಚವಾಗಬಹುದು.
3. ಗೆಜೆಟ್ ನೋಟಿಫಿಕೇಶನ್ ಮೂಲಕ ಹೆಸರು ಬದಲಾವಣೆ
- ಈಗಿರುವ ಹೆಸರು, ಬದಲಾಗಬೇಕಿರುವ ಹೆಸರು ಮತ್ತು ಈ ಬದಲಾವಣೆಗೆ ಕಾರಣ ಏನು ಎಂಬ ಬಗ್ಗೆ ಮೊದಲು ಕೋರ್ಟ್ಗೆ ಅಫಿಡವಿಟ್ ಸಲ್ಲಿಸಬೇಕು.
- ಆಂಗ್ಲ ಭಾಷೆ ಮತ್ತು ಪ್ರಾದೇಶಿಕ/ಸ್ಥಳೀಯವಾಗಿರುವ ತಲಾ ಒಂದು ದಿನ ಪತ್ರಿಕೆಗಳಲ್ಲಿ ಈ ಬಗ್ಗೆ ಜಾಹೀರಾತು ನೀಡಬೇಕು.
- ಅಫಿಡವಿಟ್, ದಿನಪತ್ರಿಕೆಯ ಜಾಹೀರಾತು ಪ್ರತಿ, ಗುರುತಿನ ದಾಖಲೆ, ವಿಳಾಸ ಸಂಬಂಧಿತ ದಾಖಲೆ ಮತ್ತು ಫೋಟೋಗಳನ್ನು ಒಳಗೊಂಡ ಅರ್ಜಿಯನ್ನು ಗೆಜೆಟ್ ಆಫೀಸ್ಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಈ ವೆಬ್ಸೈಟ್ಗೆ ಭೇಟಿ ನೀಡಿ. https://changeofname.in/gazette-office-in-bangalore/#steps
- ಆ ಬಳಿಕ ಗೆಜೆಟ್ ಆಫೀಸ್ ನಿಮ್ಮ ಅರ್ಜಿ ಬಗ್ಗೆ ಪರಿಶೀಲನೆ ನಡೆಸಿ, ಅನುಮೋದನೆ ನೀಡಲಿದೆ.
- ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಹೆಸರು ಬದಲಾಗಿರುವ ಬಗ್ಗೆ ಗೆಜೆಟ್ ನೋಟಿಫಿಕೆಶನ್ ಪ್ರಕಟವಾಗಲಿದೆ.
- ಅಂತಿಮವಾಗಿ ನಿಮ್ಮ ಹೆಸರು ಬದಲಾಗಿರುವ ಬಗ್ಗೆ ಗೆಜೆಟ್ ಪ್ರತಿ ನಿಮ್ಮ ಕೈಸೇರಲಿದೆ. ಇದರನ್ವಯ ನೀವು ಆಧಾರ್ ಹೆಸರನ್ನು ಬದಲಾಯಿಸಬಹುದು.
ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಸೇರಿ ನಾನಾ ಕಾರಣಗಳಿಂದಾಗಿ ಹಲವರು ತಮ್ಮ ಹೆಸರನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳುತ್ತಾರೆ ಅಥವಾ ಅದರಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುತ್ತಾರೆ. ಈ ಸಂದರ್ಭಗಳಲ್ಲಿ ಆಧಾರ್ನಲ್ಲಿ ನೇಮ್ ಚೇಂಜ್ ಮಾಡಲು ಬೆಂಬಲಿತ ಅಗತ್ಯ ಮಾನ್ಯ ದಾಖಲೆಗಳು ಇರದ ಸಂದರ್ಭ ಈ ರೀತಿ ಗೆಜೆಟ್ ನೋಟಿಫೀಕೇಶನ್ ಮೂಲಕವೇ ಹೆಸರು ಬದಲಾವಣೆ ಅನಿವಾರ್ಯವಾಗಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.